90 ವರ್ಷದ ವೃದ್ಧೆಯನ್ನು ಸರಪಳಿಯಿಂದ ಬಂಧಿಸಿರುವ ಮಗ- ಸೊಸೆ
ಮೀರತ್ನಲ್ಲಿ, ಒಬ್ಬ ಮಗ ತನ್ನ 90 ವರ್ಷದ ತಾಯಿಯನ್ನು ಮನೆಯ ಹೊರಗೆ ನಿಂತಿರುವ ಆಟೋದಲ್ಲಿ ಸರಪಣಿಗಳೊಂದಿಗೆ ಬಂಧಿಸಿದ್ದಾನೆ. ಈ ಶೀತದಲ್ಲಿ ಈ ತಾಯಿ ಆಟೋ ಹಿಂಭಾಗದ ಸೀಟಿನಲ್ಲಿ ಬಂಧಿತಳಾಗಿ ಮಲಗಿದ್ದಾಳೆ.
ನವ ದೆಹಲಿ: ಉತ್ತರ ಪ್ರದೇಶದ ಮೀರತ್ನಲ್ಲಿ ಮಾನವ ಕುಲಕ್ಕೆ ಮುಜುಗರ ತರುವಂತಹ ಒಂದು ಘಟನೆ ಸಂಭವಿಸಿದೆ. ಇಲ್ಲಿ ಒಬ್ಬ ಮಗ ತನ್ನ 90 ವರ್ಷದ ವೃದ್ಧೆ ತಾಯಿಯನ್ನು ಮನೆಯ ಹೊರಗೆ ನಿಂತಿರುವ ಆಟೋದಲ್ಲಿ ಸರಪಳಿಯಿಂದ ಬಂಧಿಸಿದ್ದಾನೆ. ಅದು ಇಂತಹ ಶೀತದ ವಾತಾವರಣದಲ್ಲಿ ಈ ತಾಯಿ ಆಟೋ ಹಿಂಭಾಗದ ಸೀಟಿನಲ್ಲಿ ಬಂಧಿತಳಾಗಿ ಮಲಗಿದ್ದಾಳೆ. ಮಗ ಮತ್ತು ಸೊಸೆ ಆಕೆಯ ಪಾದಗಳನ್ನು ಕಬ್ಬಿಣದ ಸರಪಳಿಗಳಿಂದ ಕಟ್ಟಿಹಾಕಿದ್ದಾರೆ. ಈ ಪ್ರಕರಣವು ಮೀರತ್ ಜಿಲ್ಲೆಯ ಖರ್ಖೋಡಾದ ಲೋಹಿಯಾ ಪಟ್ಟಣಕ್ಕೆ ಸೇರಿದೆ. ತಮ್ಮ ತಾಯಿಯ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಕುಟುಂಬ ಆರೋಪಿಸಿದೆ. ಈ 90 ವರ್ಷದ ಮಹಿಳೆಯ ಸೊಸೆ ಮಾಧ್ಯಮಗಳಿಗೆ ತಿಳಿಸಿರುವ ಹಾಗೆ, ಆ ವೃದ್ಧೆಗೆ ಮರೆಯುವ ಅಭ್ಯಾಸ ಇದೆ. ಆಕೆಯು ಆಹಾರವನ್ನು ಸೇವಿಸಿದ ನಂತರ ಮನೆಯಿಂದ ಹೊರಟುಹೋಗುತ್ತಿದ್ದಳು, ಮಕ್ಕಳು ಆಕೆಗೆ ಕಲ್ಲೆಸೆದು ಓಡಿಸುತ್ತಿದ್ದರು ಎಂದು ಹೇಳಿದ್ದಾರೆ.
'ನಾವು ಅವರನ್ನು ಸರಪಳಿಗಳಲ್ಲಿ ಬಂಧಿಸುತ್ತಿದ್ದೇವೆ, ಹಗಲಿನಲ್ಲಿ ಅವರು ಆಟೋದಲ್ಲೇ ಮಲಗುತ್ತಾರೆ, ರಾತ್ರಿಯಲ್ಲಿ ನಾವು ಅವರನ್ನು ಮನೆಯಲ್ಲಿಯೇ ಮಲಗಿಸುತ್ತೇವೆ.' ಆಕೆಯನ್ನು ಹೀಗೆ ಆಟೋದಲ್ಲಿ ಕಟ್ಟಿಹಾಕಲು ಪ್ರಾರಂಭಿಸಿ ಬಹಳ ದಿನಗಳೇನು ಆಗಿಲ್ಲ, ಕೇವಲ ಎರಡು-ಮೂರು ತಿಂಗಳಿಂದ ಮಾತ್ರ ಹೀಗೆ ಮಾಡಲಾಗುತ್ತಿದೆ ಎಂದು ವೃದ್ಧೆಯ ಸೊಸೆ ತಿಳಿಸಿದ್ದಾರೆ.
ಈ ವೃದ್ಧೆಯ ಪತಿ ಮರಣ ಹೊಂದಿದ್ದಾರೆ. ಆತ ಸರ್ಕಾರಿ ಉದ್ಯೋಗಿ ಆಗಿದ್ದರು ಮತ್ತು ಆಕೆ ಆತನ ಪಿಂಚಣಿ ಸಹ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಯಾರು ಪಿಂಚಣಿ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಈ ಮಹಿಳೆಗೆ ಇದರ ಲಾಭ ದೊರೆಯುತ್ತಿದೆಯೇ ಇಲ್ಲವೇ ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಈಕೆಯ ಸ್ಥಿತಿಯ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ ಬಳಿಕ ಪೋಲಿಸತು ಆ ವೃದ್ಧ ಮಹಿಳೆಯನ್ನು ಬಂಧನ ಮುಕ್ತಗೊಳಿಸಿ, ಆಕೆಯನ್ನು ಮನೆಯಲ್ಲಿ ಇರಿಸಿಕೊಳ್ಳುವಂತೆ ಮನವಿ ಮಾಡಿದರು.
ಅಲ್ಲದೆ, ಮೀರತ್ನಲ್ಲಿ ಎಸ್ಪಿ ಜಿಲ್ಲಾ ಮಾನ್ ಸಿಂಗ್ ಚೌಹಾಣ್ ಅವರು ಈ ವಿಷಯವನ್ನು ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
90 ವರ್ಷ ವಯಸ್ಸಿನ ವ್ಯಕ್ತಿಯು ವಿಷಯಗಳನ್ನು ಮರೆತುಬಿಡುವುದು ನೈಸರ್ಗಿಕವಾಗಿದೆ. ಅನೇಕ ಬಾರಿ, ಕೋಪದಲ್ಲಿ, ಅವನು ಕಹಿ ಮತ್ತು ಕೆಟ್ಟ ವಿಷಯಗಳನ್ನು ಕೂಡಾ ಹೇಳುತ್ತಾನೆ. ಆದರೆ ನಾವು ಸರಪಳಿಯಿಂದ ಬಂಧಿಸಿರುವುದು, ವ್ಯಕ್ತಿಯು ಹುಚ್ಚನಾಗಿದ್ದಾನೆ ಎಂದು ಸಾಬೀತುಪಡಿಸುವುದು ಇದರರ್ಥವೇ? ಒಬ್ಬ ತಾಯಿ ತನ್ನ ಜೀವಿತಾವಧಿಯಲ್ಲಿ ತನ್ನ ಮಗುವಿಗಾಗಿ ಎಂತೆಂತಹ ತ್ಯಾಗಗಳನ್ನು ಮಾಡುತ್ತಾಳೆ. ತನ್ನ ಕೊನೆಯ ದಿನಗಳಲ್ಲಿ ಮಕ್ಕಳೊಂದಿಗೆ ಬದುಕಲು ನಿರೀಕ್ಷಿಸಿತ್ತಾಳೆ. ಆದರೆ ಮಕ್ಕಳು ಆಕೆಯ ಬಗೆಗೆ ಈ ರೀತಿಯ ಧೋರಣೆ ತೋರುವುದು ಅಮಾನವೀಯ...