ಹವಾಮಾನ ವೈಪರೀತ್ಯದಿಂದಾಗಿ ಆಗಸ್ಟ್ 4 ರವರೆಗೆ ಅಮರನಾಥ ಯಾತ್ರೆ ಸ್ಥಗಿತ
ಭಾರತ ಹವಾಮಾನ ಇಲಾಖೆ (ಐಎಂಡಿ) ಮುಂದಿನ ಕೆಲವು ದಿನಗಳವರೆಗೆ ರಾಜ್ಯದಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಇದು ಜಮ್ಮು ಮತ್ತು ಶ್ರೀನಗರ ನಡುವಿನ ಹೆದ್ದಾರಿಯಲ್ಲಿ ಭೂಕುಸಿತಕ್ಕೆ ಕಾರಣವಾಗಬಹುದು ಎಂದು ಊಹಿಸಲಾಗಿದೆ. ವಿಶೇಷವಾಗಿ ರಾಂಬನ್ ಮತ್ತು ಬನಿಹಾಲ್ ನಡುವಿನ ಪ್ರದೇಶದ ಭೂಕುಸಿತಕ್ಕೆ ಹೆಚ್ಚು ಗುರಿಯಾಗಬಹುದು ಎನ್ನಲಾಗಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಸ್ತುತ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ, ಅಮರನಾಥ ಯಾತ್ರೆ ಆಗಸ್ಟ್ 4 ರವರೆಗೆ ಸ್ಥಗಿತಗೊಳ್ಳಲಿದೆ. ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಹಲವಾರು ಪ್ರದೇಶಗಳಲ್ಲಿ ಭೂಕುಸಿತಕ್ಕೆ ಕಾರಣವಾಗಿದೆ.
ಭಾರತ ಹವಾಮಾನ ಇಲಾಖೆ (ಐಎಂಡಿ) ಮುಂದಿನ ಕೆಲವು ದಿನಗಳವರೆಗೆ ರಾಜ್ಯದಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಇದು ಜಮ್ಮು ಮತ್ತು ಶ್ರೀನಗರ ನಡುವಿನ ಹೆದ್ದಾರಿಯಲ್ಲಿ ಭೂಕುಸಿತಕ್ಕೆ ಕಾರಣವಾಗಬಹುದು ಎಂದು ಊಹಿಸಲಾಗಿದೆ. ವಿಶೇಷವಾಗಿ ರಾಂಬನ್ ಮತ್ತು ಬನಿಹಾಲ್ ನಡುವಿನ ಪ್ರದೇಶದ ಭೂಕುಸಿತಕ್ಕೆ ಹೆಚ್ಚು ಗುರಿಯಾಗಬಹುದು ಎನ್ನಲಾಗಿದೆ.
ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು ಪಹಲ್ಗಾಂನ ಟ್ರ್ಯಾಕ್ ಜಾರು ಮತ್ತು ಕಡಿದಾಗಿದೆ. ಇದಲ್ಲದೆ ಐಎಂಡಿ ಹೊರಡಿಸಿದ ಹವಾಮಾನ ಸಲಹೆಯ ದೃಷ್ಟಿಯಿಂದ ಮುಂದಿನ ಒಂದೆರಡು ದಿನಗಳಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಬುಧವಾರ ಮುಚ್ಚಲಾಯಿತು.
ಹೊಸ ಟ್ರ್ಯಾಕ್ ಭೂಕುಸಿತಕ್ಕೆ ಸಿಲುಕಿದ್ದರಿಂದ ವೈಷ್ಣೋ ದೇವಿ ಯಾತ್ರೆಗೆ ಹೋಗುವ ಯಾತ್ರಾರ್ಥಿಗಳನ್ನು ಸಹ ಸಾಂಪ್ರದಾಯಿಕ ಟ್ರ್ಯಾಕ್‌ಗೆ ತಿರುಗಿಸಲಾಯಿತು. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಅಧ್ಕುವಾರಿ ಮತ್ತು ಭವನ ನಡುವೆ ಇರುವ ಹೊಸ ಟ್ರ್ಯಾಕ್‌ನಲ್ಲಿ ಭೂಕುಸಿತ ಸಂಭವಿಸಿದೆ.
ಹವಾಮಾನ ವೈಪರೀತ್ಯದಿಂದಾಗಿ ಕತ್ರ-ಶಂಜಿಚಾಟ್ ವಲಯದ ಯಾತ್ರಾರ್ಥಿಗಳನ್ನು ಕರೆದೊಯ್ಯುವ ಹೆಲಿಕಾಪ್ಟರ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.