VIRAL: ಜೀವನವೇ ಹಾಗೆ ಅಲ್ವಾ..? ಈಗ ಇರುವವರು ಮತ್ತೊಂದು ನಿಮಿಷಕ್ಕೆ ಇರುವುದಿಲ್ಲ. ಸಾವಿನ ಸುಳಿವು ಕೂಡ ಸಿಗದೆ ಹಲವರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಇಂತಹದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಒಂದು ನಿಮಿಷದ ಹಿಂದೆವರೆಗೂ ಬದುಕಿದ್ದ ಆತನಿಗೆ, ಕ್ಷಣಾರ್ದದಲ್ಲಿ ಸಾವು ಸಂಭವಿಸುತ್ತೆ ಎಂಬ ಊಹೆಯೂ ಇರಲಿಲ್ಲ. ತಾನು ಸಾಕಿದ್ದ ಆನೆ ತನ್ನನ್ನ ಬಲಿ ಪಡೆದುಕೊಳ್ಳುತ್ತೆ ಎಂಬ ಆಲೋಚನೆಯೂ ಆತನಿಗೆ ಬಂದಿರಲಿಲ್ಲ. ನೋಡ ನೋಡುತ್ತಾ ಸಾಕಿದ ಮಾವುತನನ್ನೇ ಆನೆಯೊಂದು ತುಳಿದು ಸಾಯಿಸಿದ  ಘಟನೆ ಕೇರಳಾದಲ್ಲಿ ನಡೆದಿದೆ.


ಇನ್ನೂ, ಮೃತರ ಹೆಸರು ಬಾಲಕೃಷ್ಣನ್ ಈತನಿಗೆ 62 ವರ್ಷ ವಯಸ್ಸು, ಕೇರಳದ ನೀಲೇಶ್ವರಂಗೆ ಸೇರಿದ ವ್ಯಕ್ತಿ. ಈತ ಸಫಾರಿ ಒಂದರಲ್ಲಿ ಆನೆಯನ್ನು ಪಳಗಿಸುವ ಮಾವುತನಾಗಿ ಕೆಲಸ ಮಾಡುತ್ತಿದ್ದ. ಸಫಾರಿಗೆ ಬರುವ ಪ್ರಾವಾಸಿಗರನ್ನು ಆನೆ ಮೇಲೆ ಕೂರಿಸಿ ರೌಂಡ್‌ ಆಕಿಸುವ ಕೆಲಸ ಈತನದ್ದಾಗಿತ್ತು. ಶನಿವಾರ, ಜೂನ್‌ 22 ರಂದು ಕೂಡ ಬಾಲಕೃಷ್ಣನ್‌ ಇದೇ ಕೆಲಸ ಮಾಡುತ್ತಿದ್ದರು. ಇನ್ನೇನು ಪ್ರಾವಸಿಗರು ಬರೋ ಸಮಯ. ಅವರನ್ನು ಕೂರಿಸಿ ಆನೆ ಮೇಲೆ ರೌಂಡ್‌ ಆಕಿಸಬೇಕಿತ್ತು ಅಷ್ಟರಲ್ಲಿ ಈ ದುರ್ಘಟನೆ ನಡೆದು ಹೋಗಿದೆ.


ಇದನ್ನೂ ಓದಿ: Shocking News: ಪೋರ್ನ್‌ ವಿಡಿಯೋ ಚಟಕ್ಕೆ ಮಗಳನ್ನೇ ಬಲಿ ಪಡೆದ ಪಾಪಿ ತಂದೆ..!


ಪ್ರತೀ ದಿನದಂತೆ ಮಾವುತ ಬಾಲಕೃಷ್ಣನ್‌ ಆನೆಯನ್ನು ಲಗುವಾಗಿ ಕೋಲಿನಿಂದ ಹೊಡೆದು ಪಕ್ಕಕ್ಕೆ ಸರಿಸಿದ್ದರು. ಕೆಲಕಾಲ ಏನು ಮಾಡದೆ ಮುಗ್ದನಂತೆ ನಟಿಸಿದ್ದ ಆನೆ ಮಾವುತ ಹೇಳಿದಂತೆ ಮಾಡಿತ್ತು. ನಂತರ ಅದೇನಾಯ್ತೋ ಏನೋ ಮಾವುತನ ಮೇಲೆ ಕಾಲಿಟ್ಟು ಪಾದಗಳಿಂದ ಆತನನ್ನು ತುಳಿದು ಕೊಂದು ಮುಗಿಸಿತು. 


ಈ ಘಟನೆಯ ಸಂಪೂರ್ಣ ದೃಷ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋವನ್ನು ನೋಡಿದ ನೆಟ್ಟಿಗರು. ಅಯ್ಯೋ ಪಾಪ ಹೀಗೆ ಆಗಬಾರದಿತ್ತು ಎಂದು ಬೊಬ್ಬೆ ಇಡುತ್ತಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.


ಇನ್ನೂ ಈ ಸಫಾರಿ ಕೇಂದ್ರವೂ ಇಡುಕ್ಕಿಯಲ್ಲಿದ್ದು, ಈ ಕೇಂದ್ರದಲ್ಲಿ ಆನೆಗಳಿಗೆ ಮಾನ್ಯತೆ ಇಲ್ಲ. ಸಫಾರಿಯವರು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟಿಲ್ಲ. ಈ ಕಾರಣದಿಂದಾಗಿ ಸಫಾರಿ ಕೇಂದ್ರದ ವಿರುದ್ಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.