ನವದೆಹಲಿ: ಮಹಾರಾಷ್ಟ್ರದಲ್ಲಿ 50:50 ಸೂತ್ರದಡಿಯಲ್ಲಿ ಸರ್ಕಾರ ರಚಿಸಬೇಕೆಂದು ಶಿವಸೇನಾ ಆಗ್ರಹಿಸುತ್ತಿರುವುದು ಈಗ ಮೈತ್ರಿಪಕ್ಷಗಳ ನಡುವೆ ಕಗ್ಗಂಟಾಗಿ ಪರಿಣಮಿಸಿದೆ. ಇದೇ ಬೆನ್ನಲ್ಲೇ ಈಗ ಶಿವಸೇನಾ ಮತ್ತು ಬಿಜೆಪಿ ಪ್ರತ್ಯೇಕವಾಗಿ ಇಂದು ಮಹಾರಾಷ್ಟ್ರದ ರಾಜ್ಯಪಾಲರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿ ಬಹುಮತ ಗೆದ್ದ ನಂತರ, ಉತ್ತಮ ಒಪ್ಪಂದಕ್ಕಾಗಿ ಸೇನೆಯ ಬೇಡಿಕೆಯ ಬಗ್ಗೆ ಉಭಯ ಪಕ್ಷಗಳ ನಡುವೆ ಶೀತಲ ಸಮರ ಏರ್ಪಡಲು ಕಾರಣವಾಗಿದೆ.



ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿಸಿದಕ್ಕಿಂತ ಕಡಿಮೆ ಸ್ಥಾನಗಳನ್ನು ಗೆದ್ದಿದೆ, ಇದರಿಂದಾಗಿ ಅದು ಶಿವಸೇನೆ ಮೇಲೆ ಹೆಚ್ಚು ಅವಲಂಬಿತವಾಗಬೇಕಾಗಿದೆ. ಈ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಶಿವಸೇನಾ ಮತ್ತು ಬಿಜೆಪಿ ನಡುವೆ ನಡೆದ 50:50 ಸೂತ್ರದ ಮಾತುಕತೆಯನ್ನು ಜಾರಿಗೆ ತರಬೇಕೆಂದು ಶಿವಸೇನಾ ಆಗ್ರಹಿಸಿದೆ.ಒಂದು ವೇಳೆ ಸರ್ಕಾರ ರಚನೆ ಸಂದರ್ಭದಲ್ಲಿ ಈ ಸೂತ್ರವನ್ನು ಜಾರಿಗೆ ತಂದಲ್ಲಿ ಸಚಿವ ಸಂಪುಟದಿಂದ ಹಿಡಿದು ಮುಖ್ಯಮಂತ್ರಿ ಹುದ್ದೆಯನ್ನು ಸಹಿತ ಸಮಾನವಾಗಿ ಹಂಚಬೇಕಾಗುತ್ತದೆ.


ಇತ್ತೀಚಿಗೆ ಶಿವಸೇನಾ ವಕ್ತಾರ ಸಂಜಯ ರೌತ್ ಅವರು ಸಾಮ್ನಾದ ಅಂಕಣದಲ್ಲಿ ಶಿವಸೇನಾ ಬಳಿ ರಿಮೋಟ್ ಕಂಟ್ರೋಲ್ ಪವರ್ ಇದೆ ಎಂದು ಹೇಳಿಕೆ ನೀಡಿರುವುದು ಉಭಯ ಪಕ್ಷಗಳಲ್ಲಿನ ಗೊಂದಲ್ಲಿಕ್ಕೆ ಇನ್ನಷ್ಟು ಇಡುಮಾಡಿದೆ.