ಕಾಂಗ್ರೆಸ್ಸಿನ ಸರ್ದಾರ್ ಪಟೇಲ್ ರನ್ನು ಬಿಜೆಪಿ ಗೌರವಿಸುತ್ತಿರುವುದು ಸಂತಸ ತಂದಿದೆ-ಪ್ರಿಯಾಂಕಾ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಿದರು. ಈ ಹಿನ್ನಲೆಯಲ್ಲಿ ಈಗ ಟ್ವೀಟ್ ಮಾಡಿರುವ ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ವಾದ್ರಾ ಆಡಳಿತಾರೂಡ ಬಿಜೆಪಿಗೆ ತನ್ನದೇ ಆದ ಸ್ವಾತಂತ್ರ್ಯ ಹೋರಾಟಗಾರ ಎಂದು ವ್ಯಂಗ್ಯವಾಡಿದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಿದರು. ಈ ಹಿನ್ನಲೆಯಲ್ಲಿ ಈಗ ಟ್ವೀಟ್ ಮಾಡಿರುವ ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ವಾದ್ರಾ ಆಡಳಿತಾರೂಡ ಬಿಜೆಪಿಗೆ ತನ್ನದೇ ಆದ ಸ್ವಾತಂತ್ರ್ಯ ಹೋರಾಟಗಾರ ಎಂದು ವ್ಯಂಗ್ಯವಾಡಿದರು.
ಕಟ್ಟಾ ಕಾಂಗ್ರೆಸ್ ನ ವ್ಯಕ್ತಿಯನ್ನು ಬಿಜೆಪಿ ಗೌರವಿಸುತ್ತಿದೆ, ಇದು ತಮಗೆ ಸಂತಸ ತಂದಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
'ಸರ್ದಾರ್ ಪಟೇಲ್ ಅವರು ಕಾಂಗ್ರೆಸ್ ನ ಸಮರ್ಪಿತ ನಾಯಕರಾಗಿದ್ದರು ಮತ್ತು ಅವರು ಕಾಂಗ್ರೆಸ್ ಸಿದ್ಧಾಂತವನ್ನು ನಂಬಿದ್ದರು. ಜವಾಹರಲಾಲ್ ನೆಹರೂ ಅವರ ನಿಕಟವರ್ತಿಯಾಗಿದ್ದರು ಮತ್ತು ಆರ್ಎಸ್ಎಸ್ ವಿರುದ್ಧ ಇದ್ದರು" ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಟ್ವೀಟ್ ನಲ್ಲಿ, ಜವಾಹರಲಾಲ್ ಅವರೊಂದಿಗೆ ಸರ್ದಾರ್ ಪಟೇಲ್ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
"ಸರ್ದಾರ್ ಪಟೇಲ್ ಅವರಿಗೆ ಆದರ ಗೌರವಗಳನ್ನು ಬಿಜೆಪಿ ನೀಡುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ, ಏಕೆಂದರೆ ಬಿಜೆಪಿಯ ಕ್ರಮವು ಎರಡು ವಿಷಯಗಳನ್ನು ಸ್ಪಷ್ಟಪಡಿಸುತ್ತದೆ - ಒಂದು, ಅವರಿಗೆ ತಮ್ಮದೇ ಆದ ಸ್ವಾತಂತ್ರ್ಯ ಹೋರಾಟಗಾರರಿಲ್ಲ, ಬಹುತೇಕ ಎಲ್ಲರೂ ಕಾಂಗ್ರೆಸ್ ಜೊತೆ ಒಡನಾಟ ಹೊಂದಿದ್ದರು, ಮತ್ತು ಇನ್ನೊಂದು ಸರ್ದಾರ್ ಪಟೇಲ್ ಅವರ ಶತ್ರುಗಳು ಸಹಿತ ಅವರನ್ನು ಪೂಜಿಸಲು ಬಯಸುತ್ತಾರೆ 'ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
ಸರ್ದಾರ್ ಪಟೇಲ್ ಅವರ ಜನ್ಮ ದಿನಾಚರಣೆಯಂದು ದೇಶಾದ್ಯಂತ ರಾಷ್ಟ್ರೀಯ ಏಕತೆ ದಿನ ಎಂದು ಕೇಂದ್ರ ಸರ್ಕಾರ ಆಚರಿಸುತ್ತಿದೆ.