ನವದೆಹಲಿ: ಮಂಗಳವಾರ ರಾತ್ರಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ನವದೆಹಲಿಗೆ ಆಗಮಿಸಿದರು.ಈ ಹಿನ್ನಲೆಯಲ್ಲಿ ಯುಎಸ್ ರಾಜ್ಯ ಇಲಾಖೆ ಒಂದು ಟಿಪ್ಪಣಿಯನ್ನು ಬಿಡುಗಡೆ ಮಾಡಿ ಭಾರತ ಮತ್ತು ಅಮೇರಿಕಾ ದೇಶಗಳು' ನೈಸರ್ಗಿಕ ಕಾರ್ಯತಂತ್ರದ ಪಾಲುದಾರರು' ಎಂದು ವಿವರಿಸಿದೆ.


COMMERCIAL BREAK
SCROLL TO CONTINUE READING

ಅಲ್ಲದೆ ಉಭಯದೇಶಗಳ ನಡುವಿನ ವ್ಯಾಪ್ಯಾರದಲ್ಲಿನ ಕ್ರಮಗಳನ್ನು ಒಪ್ಪಿಕೊಳ್ಳುತ್ತಲೇ ದೇಶಗಳ ನಡುವೆ ಮುರಿಯಲಾರದ ಬಂಧವನ್ನು ಹೊಂದಿದೆ ಎಂದು ಹೇಳಿದೆ.


“ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳು, ಉದ್ಯಮಶೀಲತೆಯ ಸಂಸ್ಕೃತಿಗಳು ಮತ್ತು ಜಾಗತಿಕ ವೇದಿಕೆಯಲ್ಲಿ ನಾಯಕತ್ವದ ಸ್ಥಾನಗಳೊಂದಿಗೆ ಹಂಚಿಕೆಯ ಮೌಲ್ಯಗಳಲ್ಲಿ ಬೇರೂರಿರುವ ಪ್ರಜಾಪ್ರಭುತ್ವವನ್ನು ಭಾರತ ದೇಶ ಹಾಗೂ ಅಮೇರಿಕಾ ಹೊಂದಿದೆ. ಈ ಹಿನ್ನಲೆಯಲ್ಲಿ ಉಭಯ ದೇಶಗಳು ನೈಸರ್ಗಿಕ ಕಾರ್ಯತಂತ್ರದ ಪಾಲುದಾರರು ಎಂದು ಅದು ತಿಳಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ "ಈ ಪಾಲುದಾರಿಕೆಯ ಮೇಲ್ಮುಖ ಪಥವನ್ನು ವೇಗಗೊಳಿಸಲು ಬದ್ಧರಾಗಿದ್ದಾರೆ' ಎಂದು ರಾಜ್ಯ ಇಲಾಖೆ ಹೇಳಿದೆ. 


ನಾಲ್ಕು ಮಿಲಿಯನ್ ಭಾರತೀಯ ಅಮೆರಿಕನ್ ಸಮುದಾಯದ ಉಪಸ್ಥಿತಿ, ಯುಎಸ್ನಲ್ಲಿ ಹೆಚ್ಚುತ್ತಿರುವ ಭಾರತೀಯರ ಸಂಖ್ಯೆ ಮತ್ತು ಯುಎಸ್ ನಲ್ಲಿ ಸಂಬಂಧಗಳಿಗೆ ಉಭಯಪಕ್ಷೀಯ ಬೆಂಬಲವನ್ನು ಉಲ್ಲೇಖಿಸುತ್ತದೆ.ಆದ್ಧರಿಂದ ಅಮೇರಿಕಾ ಮತ್ತು ಭಾರತದ ನಡುವಿನ ಬಾಂಧವ್ಯವು ಮುರಿಯಲಾಗದು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.