2022ಕ್ಕೆ ಪೂರ್ಣಗೊಳ್ಳಲಿದೆ ಬುಲೆಟ್ ಟ್ರೈನ್ ಯೋಜನೆ
`ಬುಲೆಟ್ ಟ್ರೈನ್ ಯೋಜನೆಯನ್ನು ಆಗಸ್ಟ್ 15, 2022 ರ ವೇಳೆಗೆ ಪೂರ್ಣಗೊಳಿಸಲಾಗುವುದು` ಎಂದು ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಅಚಲ್ ಖಾರೆ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಬುಲೆಟ್ ಟ್ರೈನ್ ಅನ್ನು ಪೂರ್ಣಗೊಳಿಸುವ ಕೆಲಸ ಬರದಿಂದ ಸಾಗಿದೆ. ಮುಂಬೈ ಮತ್ತು ಅಹ್ಮದಾಬಾದ್ ನಡುವೆ ರಾಷ್ಟ್ರದ ಮೊದಲ ಬುಲೆಟ್ ಟ್ರೈನ್ ಬುಲೆಟ್ ಟ್ರೈನ್ ಚಲಿಸಲಿದೆ. ಈ ಯೋಜನೆಯು 508 ಕಿ.ಮೀ ಉದ್ದವಾಗಿದೆ ಮತ್ತು ಇದಕ್ಕೆ ರೂ. 1,10,000 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಬುಲೆಟ್ ಟ್ರೈನ್ ಸಮುದ್ರದಲ್ಲಿ ಸಹ 21 ಕಿಮೀ ಪ್ರಯಾಣಿಸುತ್ತದೆ. ಈ ಯೋಜನೆಗಾಗಿ ಸುಮಾರು 88,000 ಕೋಟಿ ರೂಪಾಯಿಗಳನ್ನು ಜಪಾನ್ನಿಂದ ಸಾಲವಾಗಿ ಪಡೆಯಲಾಗುತ್ತಿದೆ. ಈ ಸಾಲವನ್ನು ಕೇವಲ 0.1 ಪ್ರತಿಶತದಷ್ಟು ಕಡಿಮೆ ಬಡ್ಡಿ ದರದಲ್ಲಿ ಜಪಾನ್ ನೀಡಿದೆ. ಭಾರತವು ಈ ಸಾಲವನ್ನು 50 ವರ್ಷಗಳಲ್ಲಿ ಪಾವತಿಸಬೇಕು. ಜಪಾನ್ ಪ್ರಧಾನ ಮಂತ್ರಿ ಶಿಂಜೊ ಆಬೆ ಭಾರತಕ್ಕೆ ಭೇಟಿ ನೀಡಿದಾಗ ಬುಲೆಟ್ ಟ್ರೈನ್ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ.
"ಬುಲೆಟ್ ಟ್ರೈನ್ ಯೋಜನೆಯನ್ನು ಆಗಸ್ಟ್ 15, 2022 ರ ವೇಳೆಗೆ ಪೂರ್ಣಗೊಳಿಸಲಾಗುವುದು" ಎಂದು ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಅಚಲ್ ಖಾರೆ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, "ಇಲ್ಲಿನ ಕೆಲಸವು ಹೆಚ್ಚಿನ ಉಬ್ಬರವಿಳಿತದ ಸಮಯವನ್ನು ಗಮನದಲ್ಲಿಟ್ಟುಕೊಂಡೇ ಈ ಕೆಲಸವನ್ನು ಮಾಡಬಹುದಾಗಿದೆ. ಏಕೆಂದರೆ ಬೇಸ್ ತುಂಬಾ ಮಣ್ಣನ್ನು ಹೊಂದಿದೆ, ಆದ್ದರಿಂದ ಕೆಲಸವು 4-5 ಗಂಟೆಗಳವರೆಗೆ ಮಾತ್ರ ಮಾಡಬಹುದು. ಒಯ್ಯುವ ದೋಣಿಯೊಂದಿಗೆ ಕೇಂದ್ರ ರೇಖೆ ನಿಯಂತ್ರಿಸಲು ಕಷ್ಟ. ಆದರೆ ಜಪಾನೀ ತಜ್ಞರು ಅದನ್ನು ನಿಯಂತ್ರಿಸಲು ನಮಗೆ ತರಬೇತಿ ನೀಡಿದ್ದಾರೆ" ಎಂದು ವಿವರಣೆ ನೀಡಿದರು.
"250 ಮೀಟರ್ಗಳಲ್ಲಿ 66 ಮೀಟರುಗಳಷ್ಟು ನಾವು ಬೋರ್ ಹೋಲ್ಗಳನ್ನು ಮಾಡಿದ್ದೇವೆ, ಈ ಬೋರೆಹೋಲ್ಗಳ ನಡುವೆ ಲೇಯರ್ಗಳನ್ನು ಕಂಡುಹಿಡಿಯಲು ನಾವು ಜಪಾನ್ನ ಕಂಪನಿಯಿಂದ ಉಪಕರಣಗಳನ್ನು ಪಡೆದುಕೊಂಡಿದ್ದೇವೆ. 21 ಕಿಮೀ ಉದ್ದದ ಸುರಂಗದಲ್ಲಿ 7 ಕಿ.ಮೀ. ಸುರಂಗ ಸಮುದ್ರದ ಕೆಳಗೆ ಬರಲಿದೆ. ಹಾಗಾಗಿ ನಾವು ಲೇಯರ್ಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನ ಮಂತ್ರಿ ಶಿಂಜೊ ಅಬೆ ಅಹ್ಮದಾಬಾದ್ ಮತ್ತು ಮುಂಬೈ ನಡುವಿನ ಭಾರತದ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಸೆಪ್ಟಂಬರ್ 14 ರಂದು ಅಡಿಪಾಯ ಹಾಕಿದರು. ಜಪಾನ್ನ ಸಹಾಯದಿಂದ ಈ ಯೋಜನೆ ಪೂರ್ಣಗೊಳ್ಳಲು ಸುಮಾರು ಐದು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸಾರ್ವಜನಿಕರಿಗೆ 2022 ರ ವೇಳೆಗೆ ಬುಲೆಟ್ ಟ್ರೈನ್ ಏರಲು ಅವಕಾಶ ಸಿಗುತ್ತದೆ. ಆದಾಗ್ಯೂ, ಆಸ್ಟ್ರಿಯಾ, ಬೆಲ್ಜಿಯಂ, ಚೀನಾ, ಫ್ರಾನ್ಸ್, ಜರ್ಮನಿ, ದಕ್ಷಿಣ ಕೊರಿಯಾ, ಸ್ವೀಡೆನ್, ತೈವಾನ್, ಟರ್ಕಿ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಉಜ್ಬೇಕಿಸ್ತಾನ್ ದೇಶಗಳು ಹೆಚ್ಚಿನ ವೇಗದ ರೈಲುಗಳನ್ನು ಹೊಂದಿರುವ ದೇಶಗಳು. ಐದು ವರ್ಷಗಳ ನಂತರ ಭಾರತದ ಹೆಸರು ಕೂಡಾ ಇದರಲ್ಲಿ ಸೇರ್ಪಡೆಗೊಳ್ಳಲಿದೆ. ಈ ಯೋಜನೆಯಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಜಪಾನ್ನನ್ನು ಆಯ್ಕೆ ಮಾಡಿದ್ದು, ತಾಂತ್ರಿಕ ಮತ್ತು ರಕ್ಷಣಾತ್ಮಕ ಅಂಶಗಳು ಪ್ರಮುಖವಾಗಿವೆ. ಜಪಾನ್ನ ಬುಲೆಟ್ ಟ್ರೈನ್ಗಳನ್ನು ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ ಮತ್ತು ಇಲ್ಲಿಯವರೆಗೆ ಯಾವುದೇ ಪ್ರಮುಖ ಅಪಘಾತಗಳು ಅಲ್ಲಿ ಸಂಭವಿಸಿಲ್ಲ.
ವಿಶ್ವದ ಅತಿದೊಡ್ಡ ಹೈಸ್ಪೀಡ್ ನೆಟ್ವರ್ಕ್ ಕುರಿತು ಮಾತನಾಡುವುದಾದರೆ, ಚೀನಾ ಮುಂಚೂಣಿಯಲ್ಲಿದೆ. ಚೀನಾ ಸುಮಾರು 22,000 ಕಿಲೋಮೀಟರುಗಳಷ್ಟು ವೇಗದ ರೈಲ್ವೆ ಟ್ರ್ಯಾಕ್ ಹೊಂದಿದೆ. ಚೀನಾದಲ್ಲಿ ವಿಶ್ವದ ಅತ್ಯಂತ ವೇಗವಾಗಿ ಬುಲೆಟ್ ರೈಲು ಸಹ ಚಾಲನೆ ಮಾಡುತ್ತದೆ. ಗಂಟೆಗೆ ಸುಮಾರು 350 ಕಿ.ಮೀ ವೇಗದಲ್ಲಿ ಚಲಿಸುವ ಈ ರೈಲು 1250 ಕಿ.ಮೀ. ಪ್ರಯಾಣವನ್ನು ನಾಲ್ಕೇ ಗಂಟೆಗಳಲ್ಲಿ ಪೂರ್ಣಗೊಳಿಸುತ್ತದೆ.