ನವದೆಹಲಿ: ಕಳೆದ ಒಂದೆರಡು ವರ್ಷಗಳಲ್ಲಿ ದೇಶದಲ್ಲಿ ಹಲವಾರು ಹೃದಯಾಘಾತದಿಂದ ಸಾವನ್ನಪ್ಪಿದ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ. ಚಿಕ್ಕ ವಯಸ್ಸಿನಿಂದ ಮಧ್ಯವಯಸ್ಸಿನವರು ಹಠಾತ್ತನೆ ಹೃದಯ ಸ್ತಂಭನದಿಂದ ಸಾವನ್ನಪ್ಪುತ್ತಿದ್ದಾರೆ. ಸಂಪೂರ್ಣ ಫಿಟ್ ಆದವರೂ ಸಹ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಹೃದಯಾಘಾತಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ರಾಜಸ್ಥಾನದಿಂದ ಬೆಳಕಿಗೆ ಬಂದಿದೆ. ಖ್ಯಾತ ದೇಹದಾರ್ಢ್ಯ ಪಟು ಹಾಗೂ ಮಾಜಿ ಮಿಸ್ಟರ್ ಇಂಡಿಯಾ ಪ್ರೇಮರಾಜ್ ಅರೋರಾ ಕೋಟಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.


COMMERCIAL BREAK
SCROLL TO CONTINUE READING

42 ವರ್ಷದ ಅರೋರಾ ತನ್ನ ನಿತ್ಯದ ಕೆಲಸ ಮುಗಿಸಿ ಬಾತ್ ರೂಮ್‍ಗೆ ತೆರಳಿದ್ದರು. ಆದರೆ ಗಂಟೆ ಕಳೆದರೂ ಹೊರಗೆ ಬಂದಿರಲಿಲ್ಲ. ಬಹಳ ಹೊತ್ತಾದರೂ ಬಾತ್ ರೂಂನಿಂದ ಹೊರಬರದ ಹಿನ್ನೆಲೆ ಮನೆಯವರು ಬಾಗಿಲು ಬಡಿದರು. ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.


ಇದನ್ನೂ ಓದಿ: ಪಂಜಾಬ್ ಟಾಪ್ ದರೋಡೆಕೋರ ಜರ್ನೈಲ್ ಸಿಂಗ್ ಹತ್ಯೆ, ಸಿಸಿಟಿವಿಯಲ್ಲಿ ಸೆರೆ


ಬಾತ್ ರೂಂನಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಬಾಗಿಲು ಒಡೆದು ನೋಡಿದಾಗ ಪ್ರೇಮರಾಜ್ ಒಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಸಂಬಂಧಿಕರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅವರ ಸಾವಿನಿಂದ ಇಡೀ ಕುಟುಂಬವೇ ಆಘಾತಕ್ಕೊಳಗಾಗಿದೆ. ಪ್ರೇಮರಾಜ್ ಅರೋರಾ ತುಂಬಾ ಫಿಟ್ ಆಗಿದ್ದ ಕಾರಣ ಹೀಗೆ ಸಾವನ್ನಪ್ಪಿದ್ದು ಬಹುತೇಕರಿಗೆ ಆಘಾತವುಂಟಾಗಿದೆ. ಪ್ರೇಮರಾಜ್ ಅರೋರಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.


ಪ್ರೇಮರಾಜ್ 2012-13ರಲ್ಲಿ ರಾಜಸ್ಥಾನದ ಅತ್ಯುತ್ತಮ ಪವರ್ ಲಿಫ್ಟಿಂಗ್ ಪ್ರಶಸ್ತಿಯನ್ನು ಗೆದ್ದಿದ್ದರು. 2014ರಲ್ಲಿ ನಾಗ್ಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರೇಮರಾಜ್ ಮಿಸ್ಟರ್ ಇಂಡಿಯಾ ಆಗಿ ಚಿನ್ನದ ಪದಕ ಗೆದ್ದಿದ್ದರು. ಪ್ರೇಮರಾಜ್ ಅವರು 2016-2018ರ ನಡುವೆ 2 ಬಾರಿ ಮಿಸ್ಟರ್ ರಾಜಸ್ಥಾನ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರೇಮರಾಜ್ ಯುವಕರಿಗೆ ಜಿಮ್‌ನಲ್ಲಿ ತರಬೇತಿ ನೀಡುತ್ತಿದ್ದರು ಮತ್ತು ಹತ್ತಾರು ದೇಹದಾರ್ಢ್ಯ ಪ್ರಶಸ್ತಿಗಳನ್ನು ಗೆದ್ದಿದ್ದರು. ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಿ ಡ್ರಗ್ಸ್ ನಿಂದ ದೂರವಿದ್ದವರಲ್ಲಿ ಪ್ರೇಮರಾಜ್ ಕೂಡ ಒಬ್ಬರಾಗಿದ್ದರು.


ಇದನ್ನೂ ಓದಿ: ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿಗೆ ವೈ + ಭದ್ರತೆ ಒದಗಿಸಿದ ಕೇಂದ್ರ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.