ಬೀಡಿ ಸೇವನೆಯಿಂದ ದೇಶಕ್ಕೆ ವಾರ್ಷಿಕ 80 ಲಕ್ಷ ಕೋಟಿ ರೂ. ನಷ್ಟ: ವರದಿ
ಸಂಶೋಧನಾ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ.
ಕೊಚ್ಚಿ: ಬೀಡಿ ಸೇವನೆಯಿಂದ ಉಂಟಾಗುವ ಆರೋಗ್ಯಕರ ಸಮಸ್ಯೆ ಮತ್ತು ಅಕಾಲಿಕ ಮರಣಕ್ಕೆ ತುತ್ತಾಗುವುದರಿಂದ ಭಾರತಕ್ಕೆ ವಾರ್ಷಿಕ 80 ಲಕ್ಷ ಕೋಟಿ ರೂ. ನಷ್ಟ ಉಂಟಾಗುತ್ತದೆ. ಇದು ದೇಶದ ಆರೋಗ್ಯದ ಒಟ್ಟು ಖರ್ಚಿನ ಶೇಕಡಾ ಎರಡರಷ್ಟು ಎಂದು ಸಂಶೋಧನಾ ವರದಿಯಲ್ಲಿ ಬಹಿರಂಗವಾಗಿದೆ.
ಬಿಡಿ ಸೇವನೆಯಿಂದ ಉಂಟಾಗುವ ಅನಾರೋಗ್ಯ, ಔಷಧ, ವೈದ್ಯರ ಶುಲ್ಕಗಳು, ಆಸ್ಪತ್ರೆಯಲ್ಲಿ ದಾಖಲಾತಿ ಮತ್ತು ಸಾರಿಗೆ ಖರ್ಚು ಎಲ್ಲವೂ ಇದರಲ್ಲಿ ಸೇರಿದೆ. ಇದಲ್ಲದೆ, ಪರೋಕ್ಷ ವೆಚ್ಚಗಳು ಮತ್ತು ಕುಟುಂಬದ ಆದಾಯಕ್ಕೆ ನಷ್ಟವನ್ನು ಒಳಗೊಂಡಿರುತ್ತವೆ. ಜನರಲ್ ಟೊಬಕೋ ಕಂಟ್ರೋಲ್ ನಲ್ಲಿ ಪ್ರಕಟವಾದ ವರದಿಯಲ್ಲಿ ಇದನ್ನು ಹೇಳಲಾಗಿದೆ.
ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆಯಿಂದ ಬಿಡಿ ಸೇವಿಸುವವರ ಕುರಿತು ಪಡೆಯಲಾಗಿರುವ ಮಾಹಿತಿಯ ಆಧಾರದ ಮೇಲೆ 2017 ರ ವೆಚ್ಚದ ಕುರಿತಾದ ರಾಷ್ಟ್ರೀಯ ಮಾದರಿ ಸಮೀಕ್ಷೆಯು ವರದಿಯನ್ನು ನೀಡಿದೆ. ಸಂಶೋಧನೆಯ ಪ್ರಕಾರ, 2016-17ರಲ್ಲಿ ಬಿಡಿ ಸೇವನೆಯಿಂದ 4.17 ಬಿಲಿಯನ್ ಆದಾಯವನ್ನು ಪಡೆದುಕೊಂಡಿದೆ.
ಕೇರಳದ ಕೊಚ್ಚಿಯಲ್ಲಿರುವ ಪಬ್ಲಿಕ್ ಪಾಲಿಸಿ ರಿಸರ್ಚ್ ಸೆಂಟರ್ನ ಸಂಶೋಧನಕಾರ ಮತ್ತು ವರದಿಯ ಲೇಖಕ, ರಿಜೊ ಎಮ್. ಜಾನ್, ಭಾರತದಲ್ಲಿ ಸುಮಾರು ಐದು ಕುಟುಂಬಗಳಲ್ಲಿ ಒಂದು ಕುಟುಂಬ ಈ ವಿನಾಶಕಾರಿ ಖರ್ಚನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.
"ಬಿಡಿ ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದಾಗಿ ಹೆಚ್ಚು ಜನರು ಬಡವರಾಗಿದ್ದಾರೆ". ತಂಬಾಕು ಮತ್ತು ಅದರಿಂದ ಉಂಟಾಗುವ ಕಾಯಿಲೆಗಳಿಗಾಗಿ ಮಾಡಬೇಕಾದ ವೆಚ್ಚದಿಂದಾಗಿ ಸುಮಾರು 1.5 ಕೋಟಿ ಜನರು ಬಡತನದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ತಂಬಾಕಿಗಾಗಿ ಮಾಡುವ ಖರ್ಚಿನ ಕಾರಣ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಬಡವರು ಆಹಾರ ಮತ್ತು ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಭಾರತದಲ್ಲಿ ಬೀಡಿ ಬಹಳ ಜನಪ್ರಿಯವಾಗಿದೆ, ಇದರಲ್ಲಿ ಸುಮಾರು 80 ರಷ್ಟು ತಂಬಾಕು ಬಳಕೆದಾರರು ಸೇವಿಸುತ್ತಾರೆ. ನಿಯಮಿತವಾಗಿ ಬೀಡಿ ಸೇವಿಸುವ 15 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಜನರ ಸಂಖ್ಯೆ 7.2 ಮಿಲಿಯನ್ ಆಗಿದೆ.