ಯಾವುದೇ ವ್ಯಕ್ತಿಯು ಅಕಾಲಿಕ ಮರಣಕ್ಕೆ ತುತ್ತಾಗಿ, ಅದರಿಂದ ಬಂದಂತ ಪರಿಹಾರದ ಹಣವನ್ನು ಮದುವೆ ವೆಚ್ಚಗಳಿಗೆ ಬಳಸಬಾರದು ಎಂದು ರಾಜಸ್ಥಾನ್ ಹೈಕೋರ್ಟ್ ತಿಳಿಸಿದೆ. ಝೀ ಮಾಧ್ಯಮದ ಪತ್ರಿಕೆ DNA ವರದಿ ಪ್ರಕಾರ, ಫೂಲಿ ದೇವಿ ಎಂಬ ವಿಧವೆ ಮತ್ತು ಇತರರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ರಾಜಸ್ಥಾನ್ ಹೈಕೋರ್ಟ್ ನ್ಯಾಯಾಧೀಶ ಎಸ್.ಪಿ. ಶರ್ಮಾ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ ಪತಿಯು ಅಪಘಾತಕ್ಕೀಡಾಗಿ ಮರಣ ಹೊಂದಿನ ಕಾರಣ ದೊರೆತ ಪರಿಹಾರದ ಹಣ 2.75 ಲಕ್ಷ ರೂಪಾಯಿಗಳ ಸ್ಥಿರ ಠೇವಣಿಯ ನಿಗದಿತ ಸಮಯ ಮುಗಿಯುವ ಮೊದಲೇ ಅದನ್ನು ತೆಗೆಯಲು ವಿನಂತಿಸಲಾಗಿದೆ. ಈ ಬಗ್ಗೆ ತಮ್ಮ ವಾದ ಮಂಡಿಸಿರುವ ಫೂಲಿ ದೇವಿ ಎಂಬುವವರು, ವಾಸ್ತವವಾಗಿ ತನ್ನ ಮಗಳ ಮದುವೆಗೆ ತನಗೆ ಈ ಹಣ ಬೇಕಾಗಿತ್ತು. ಅದಕ್ಕಾಗಿ ಈಗಾಗಲೇ 4.75 ಲಕ್ಷ ರೂಪಾಯಿಗಳನ್ನು ಹಿಂದಕ್ಕೆ ತೆಗೆದುಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.


ವಿಶೇಷ ರಕ್ಷಣೆಗಾಗಿ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ನೀಡಲಾಗಿದೆ ಎಂದು ತಿಳಿಸಿದ ನ್ಯಾಯಾಲಯ, ವಿವಾಹ ಸಮಾರಂಭದಲ್ಲಿ ಇದನ್ನು ಖರ್ಚು ಮಾಡುವಂತಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ. ಅದೇ ಸಮಯದಲ್ಲಿ, ನ್ಯಾಯಾಧೀಶರು ವಿಧವೆಯ ಮಗಳ ಮದುವೆ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಸಾಮಾಜಿಕ ನ್ಯಾಯ ಇಲಾಖೆಯನ್ನು ಕೇಳಿದೆ.


ಇದೇ ಸಮಯದಲ್ಲಿ, ಮದುವೆಗೆ ವಿವೇಚನಾರಹಿತ ಖರ್ಚು ಒಂದು ಫ್ಯಾಷನ್ ಆಗಿ ಮಾರ್ಪಟ್ಟಿದೆ ಎಂದು ತಿಳಿಸಿದ ನ್ಯಾಯಮೂರ್ತಿ ಶರ್ಮಾ, ಸಮಾಜದಲ್ಲಿ  ವ್ಯಕ್ತಿಯ ಸ್ಥಾನಮಾನವನ್ನು ಅವನು ಮದುವೆಗೆ ಎಷ್ಟು ವೆಚ್ಚ ಮಾಡಿದ ಎಂಬುದರ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಈ ಕಾರಣದಿಂದ, ಜನರು ತಮ್ಮ ಆಸ್ತಿಯನ್ನು ಅಜಾಗರೂಕತೆಯಿಂದ ಕಳೆಯುತ್ತಾರೆ. ಮದುವೆಯ ಮೇಲೆ ಅನಧಿಕೃತ ಖರ್ಚು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನುಗಳನ್ನು ರೂಪಿಸಬೇಕು ಎಂದು ತಿಳಿಸಿದರು. ಪ್ರಾಚೀನ ಕಾಲದಲ್ಲಿ, ಮದುವೆಗಳು ದೇವಾಲಯದಲ್ಲಿದ್ದವು ಮತ್ತು ಈಗ ನ್ಯಾಯಾಲಯದಲ್ಲಿ ಮದುವೆಗಾಗಿ ಒಂದು ಅವಕಾಶವಿದೆ.