ನವದೆಹಲಿ : ಪ್ರಾಣಿಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ (Social media) ಹೆಚ್ಚು ವೀಕ್ಷಿಸಲಾಗುತ್ತದೆ ಮತ್ತು ಅಪ್‌ಲೋಡ್ ಮಾಡಲಾಗುತ್ತದೆ. ಪ್ರಾಣಿ ಪಕ್ಷಿಗಳ ವಿಡಿಯೋಗಳನ್ನು (Animal video) ಜನ ಬಹಳವಾಗಿ ಇಷ್ಟಪಡುತ್ತಾರೆ. ಇಲ್ಲೊಂದು ವೀಡಿಯೊ ಇದೆ. ಇದು ನಾಯಿಮತ್ತು ಕೋಲಿಗೆ ಸಂಬಂಧಿಸಿದ ವಿಡಿಯೋ. ಈ ವಿಡಿಯೋ ನೋಡಿದರೆ ಆಶ್ಚರ್ಯವಾಗುತ್ತದೆ.  ಕೆಲವೇ ಗಂಟೆಗಳಲ್ಲಿ ಈ ವೀಡಿಯೋವನ್ನು ಸಾವಿರಾರು ಬಾರಿ ವೀಕ್ಷಿಸಲಾಗಿದೆ. ನೆತ್ತಿಗರು ಕೂಡಾ ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

30 ಸೆಕೆಂಡ್‌ಗಳ ವಿಡಿಯೋ ವೈರಲ್ (Viral video) ಆಗಿದೆ. ಇದರಲ್ಲಿ ಕೋಳಿಯೊಂದು ತನ್ನ ಮರಿಗಳೊಂದಿಗೆ  ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಆಗ ಮರಿಗಳನ್ನು ಸುಲಭವಾದ ಬೇಟೆಯೆಂದು ತಿಳಿದ ನಾಯಿ ಅಲ್ಲಿಗೆ ಬರುತ್ತದೆ. ಆದ್ರೆ ನಾಯಿ ತನ್ನ ಮರಿಗಳತ್ತ ಬರುವುದನ್ನು ನೋಡಿದ್ದೇ ತಡ, ತಾಯಿ ಕೋಳಿ ಮರಿಗಳ ರಕ್ಷಣೆಗೆ ನಿಂತು ಬಿಡುತ್ತದೆ.  ತೀವ್ರ ಆಕ್ರಮಣಕಾರಿಯಾಗಿ ನಾಯಿಗಳ ಮೇಲೆ ಎರಗಿದ ಕೋಳಿ, ನಾಯಿಯನ್ನು ಸುತ್ತ ಎಲ್ಲೂ ನಿಲ್ಲಲು ಬಿಡುವುದಿಲ್ಲ. ತನ್ನ ಕೊಕ್ಕಿನಿಂದ ನಾಯಿಯ ಮೇಲೆ ದಾಳಿ ಮಾಡುತ್ತದೆ. 


ಕೋಳಿಯನ್ನು ದುರ್ಬಲ ಎಂದುಕೊಂಡು ಜಗಳಕ್ಕೆ ನಿಂತ ಬೆಕ್ಕು, ಆದರೆ ಆಗಿದ್ದೇನು ? ಫೈಟಿಂಗ್ ನ full video ಇಲ್ಲಿದೆ


ಕೋಳಿ ಇಷ್ಟು ಆಕ್ರಮಣಕಾರಿಯಾಗಿರುತ್ತದೆ ಎಂದು ನಾಯಿ ಕೂಡಾ ಅಂದುಕೊಂಡಿರಲಿಕ್ಕಿಲ್ಲ. ಚಿಕ್ಕ ಕೋಳಿ ನಾಯಿಯನ್ನು ಆ ಜಾಗದಲ್ಲಿ ನಿಲ್ಲಲ್ಲು ಕೂಡಾ ಅವಕಾಶ ನೀಡುವುದಿಲ್ಲ. 


@fred035schultz ಹೆಸರಿನ ಹ್ಯಾಂಡಲ್‌ನೊಂದಿಗೆ ಸಾಮಾಜಿಕ ಮಾಧ್ಯಮ (Socia media) ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ವೀಡಿಯೊವನ್ನು (twitter video) ಹಂಚಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಕೂಡಾ ಈ ವಿಡಿಯೋಗೆ ತುಂಬಾ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ Viral Video: ಜಿಮ್‌ನಲ್ಲಿ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೆಂಡತಿಗೆ ಸಿಕ್ಕಿಬಿದ್ದ ಪತಿರಾಯ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ