ನವದೆಹಲಿ: ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಫೆಬ್ರವರಿ 8 ರ ಚುನಾವಣೆಗೆ ದೆಹಲಿಯ ಮಾಡೆಲ್ ಟೌನ್ ಕ್ಷೇತ್ರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಕಪಿಲ್ ಮಿಶ್ರಾ ಅವರ ಮೇಲೆ ಚುನಾವಣಾ ಆಯೋಗವು 48 ಗಂಟೆಗಳ ಪ್ರಚಾರ ನಿಷೇಧವನ್ನು ವಿಧಿಸಿದೆ ಎಂದು ಪಿಟಿಐ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಚುನಾವಣಾ ಆಯೋಗವು  ಕೋಮು ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ತೀರ್ಮಾನಿಸಿದ ವಿವಾದಾತ್ಮಕ ‘ಇಂಡಿಯಾ ವರ್ಸಸ್ ಪಾಕ್’ ಟ್ವೀಟ್‌ಗಳ ನಂತರ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಆದೇಶ ನೀಡಿ ಚುನಾವಣಾ ಆಯೋಗ ಈ ನಿಷೇಧವನ್ನು ಹಾಕಿದೆ.


ಫೆಬ್ರವರಿ 8 ರ ಚುನಾವಣೆಯನ್ನು ‘ಭಾರತ-ಪಾಕ್ ನಡುವಿನ ಕದನ ಎಂದು ಹೋಲಿಸಿದ ಮಿಶ್ರಾ ತಮ್ಮ ಸರಣಿ ಟ್ವೀಟ್ ಗಳಿಗೆ ಕೋಮು ಬಣ್ಣ ನೀಡಿದ್ದರು. ಅದರಲ್ಲಿ ಅವರು ಶಾಹಿನ್ ಬಾಗ್ ನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹೋರಾಟವನ್ನು ಟೀಕಿಸಿ ಮಿನಿ ಪಾಕಿಸ್ತಾನವನ್ನು ರಚಿಸಲಾಗಿದೆ.ಪಾಕಿಸ್ತಾನದ ದಂಗೆಕೋರರು ರಸ್ತೆಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.


ಚುನಾವಣಾ ನಡವಳಿಕೆಯನ್ನು ನಿಯಂತ್ರಿಸುವ ಜನರ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123 ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಚುನಾವಣಾ ಆಯೋಗ ಶುಕ್ರವಾರ ಪೊಲೀಸರಿಗೆ ತಿಳಿಸಿದೆ. ಈ ಕಾನೂನಿನ ಸೆಕ್ಷನ್ 123 ಚುನಾವಣೆಗಳಲ್ಲಿನ ಭ್ರಷ್ಟಾಚಾರಗಳಿಗೆ ಸಂಬಂಧಿಸಿದೆ ಮತ್ತು ಚುನಾವಣೆಯ ಮೇಲೆ ಪರಿಣಾಮ ಬೀರಲು ಸಮುದಾಯಗಳ ನಡುವೆ ದ್ವೇಷವನ್ನು ಬೆಳೆಸದಂತೆ ಜನರನ್ನು ತಡೆಯುತ್ತದೆ.