ನವದೆಹಲಿ: ಬಿಜೆಪಿ ಚಂಡೀಗಢ ಲೋಕಸಭಾ ಅಭ್ಯರ್ಥಿ ಕಿರಣ್ ಖೇರ್ ಟ್ವಿಟ್ಟರ್ನಲ್ಲಿ  ಚುನಾವಣಾ ಪ್ರಚಾರದ ವೀಡಿಯೋವೊಂದರಲ್ಲಿ ಮಕ್ಕಳನ್ನು ಬಳಸಿಕೊಂಡಿರುವ ವಿಚಾರವಾಗಿ ಈಗ ಚುನಾವಣಾ ಆಯೋಗವು ಅವರಿಗೆ ಶನಿವಾರದಂದು ನೋಟಿಸ್ ಜಾರಿ ಮಾಡಿದೆ.


COMMERCIAL BREAK
SCROLL TO CONTINUE READING

ಈ ನೋಟಿಸ್ ಗೆ 24 ಗಂಟೆಯೊಳಗೆ ಜಿಲ್ಲಾ ನೋಡಲ್ ಅಧಿಕಾರಿಗೆ ಉತ್ತರ ನೀಡಲು ಸೂಚಿಸಲಾಗಿದೆ. ಈ ವೀಡಿಯೋವೊಂದರಲ್ಲಿ ಮಕ್ಕಳು ಭಾಗಿಯಾಗಿ ವೋಟ್ ಫಾರ್ ಕಿರಣ್ ಖೇರ್ ಹಾಗೂ ಅಬ ಕಿ ಬಾರ್ ಮೋದಿ ಸರ್ಕಾರ್ ಘೋಷಣೆಗಳನ್ನು ಕೂಗಿದ್ದಾರೆ. ಈ ಹಿನ್ನಲೆಯಲ್ಲಿ ಈಗ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಯಾವುದೇ ರೂಪದಲ್ಲಿ ಮಕ್ಕಳನ್ನು ಬಳಸಿಕೊಂಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದೆ. 


ಕಿರಣ್ ಖೇರ್ ಅವರು ಪವನ್ ಕುಮಾರ್ ಬನ್ಸಾಲ್ ವಿರುದ್ಧ ಚಂಡೀಗಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೇ 19 ರಂದು ಮತದಾನ ನಡೆಯಲಿದ್ದು. ಅಂತಿಮ ಫಲಿತಾಂಶವು ಮೇ 23 ರಂದು ಹೊರಬಿಳಲಿದೆ ಎನ್ನಲಾಗಿದೆ.