ಚುನಾವಣಾ ಫಲಿತಾಂಶ ನಂತರದ ವಿಜಯೋತ್ಸವಕ್ಕೆ ನಿಷೇಧ ಹೇರಿದ ಚುನಾವಣಾ ಆಯೋಗ
ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಮೇ 2 ರಂದು ಘೋಷಣೆಯಾಗುವ ಹಿನ್ನಲೆಯಲ್ಲಿ ವಿಜಯದ ನಂತರ ಯಾವುದೇ ರೀತಿ ಮೆರವಣಿಗೆಯನ್ನು ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.
ನವದೆಹಲಿ: ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಮೇ 2 ರಂದು ಘೋಷಣೆಯಾಗುವ ಹಿನ್ನಲೆಯಲ್ಲಿ ವಿಜಯದ ನಂತರ ಯಾವುದೇ ರೀತಿ ಮೆರವಣಿಗೆಯನ್ನು ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.
ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ಮತ್ತು ಪುದುಚೇರಿಯಲ್ಲಿ ಎಂಟು ಹಂತಗಳಲ್ಲಿ ನಿಗದಿಪಡಿಸಲಾಗಿದ್ದು, ಮಾರ್ಚ್ 27 ರಿಂದ ಏಪ್ರಿಲ್ 29 ಕ್ಕೆ ನಡೆಯುತ್ತಿವೆ.
ಇದನ್ನೂ ಓದಿ: COVID-19 Crisis: ಭಾರತಕ್ಕೆ ನೆರವು ನೀಡುವುದಾಗಿ ಹೇಳಿದ ಚೀನಾ
ವಿಜೇತ ಅಭ್ಯರ್ಥಿಯೊಂದಿಗೆ ಇಬ್ಬರು ವ್ಯಕ್ತಿಗಳಿಗಿಂತ ಹೆಚ್ಚು ಜನರನ್ನು ಅನುಮತಿಸಲಾಗುವುದಿಲ್ಲ ಅಥವಾ ಅವನ / ಅವಳ ಅಧಿಕೃತ ಪ್ರತಿನಿಧಿಯು ಚುನಾವಣಾ ಪ್ರಮಾಣಪತ್ರವನ್ನು ಸಂಬಂಧಪಟ್ಟ ರಿಟರ್ನಿಂಗ್ ಅಧಿಕಾರಿಯಿಂದ ಪಡೆಯುತ್ತಾರೆ" ಎಂದು ಚುನಾವಣಾ ಆಯೋಗದ ಅಧಿಸೂಚನೆ ತಿಳಿಸಿದೆ. COVID-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಮಧ್ಯೆ, ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮತ್ತು ನಾಯಕರು ಸೋಂಕಿನ ಹರಡುವಿಕೆಯನ್ನು ಕಡಿಮೆ ಮಾಡಲು ಅನುಸರಿಸಬೇಕಾದ ಪ್ರೋಟೋಕಾಲ್ ಅನ್ನು ಜಾರಿ ಮಾಡಿದೆ.
ಇದನ್ನೂ ಓದಿ: CSIR Covid-19 Infection study 2021:ಧೂಮಪಾನಿಗಳು ಹಾಗೂ ಶಾಕಾಹಾರಿಗಳಲ್ಲಿ ಕೊರೊನಾ ಅಪಾಯ ಕಡಿಮೆ - CSIR ಅಧ್ಯಯನ
ಎರಡನೆಯ ಅಲೆಯು ಏತನ್ಮಧ್ಯೆ, ಅದರ ಉಗ್ರತೆಯಲ್ಲಿ ತೀವ್ರಗೊಂಡಿದೆ, ಚುನಾವಣೆಗಳು ಕೋವಿಡ್ ವೇಗವರ್ಧಕಗಳಾಗಿ ಮಾರ್ಪಟ್ಟಿವೆ.ಇಂದು ಸತತ ಆರನೇ ದಿನ ಭಾರತವು ಮೂರು ಲಕ್ಷ ಪ್ರಕರಣಗಳು ಮತ್ತು 2,771 ಸಾವುಗಳನ್ನು ದಾಖಲಿಸಿದೆ, ಒಟ್ಟಾರೆ ಪ್ರಕರಣಗಳು 1.76 ಕೋಟಿಗೂ ಹೆಚ್ಚು ಮತ್ತು ಸಾವುನೋವು 1,97,894 ಕ್ಕೆ ತಲುಪಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.