ನವದೆಹಲಿ: ಬಜೆಟ್'ನಲ್ಲಿ ಎಲ್ಲವೂ ಎಲ್ಲರಿಗೂ ಅರ್ಥ ಆಗೋಲ್ಲ. ಆದರೂ ಪ್ರತಿ ಬಾರಿ ಬಜೆಟ್ ಸಮಯದಲ್ಲಿ ನಮಗೇನು ಸಿಗಬಹುದೂ ಎಂಬ ನಿರೀಕ್ಷೆ ಎಲ್ಲರಲ್ಲೂ ಇರುತ್ತದೆ. ಅದೇ ರೀತಿ 'ಉದ್ಯೋಗಸ್ಥರು' ಕೂಡ ಹಲವು ನಿರೀಕ್ಷೆಗಳನ್ನು ಹೊಂದಿದ್ದಾರೆ. ಮುಖ್ಯವಾಗಿ ಆದಾಯ ತೆರಿಗೆ ವಿಷಯದಲ್ಲಿ ನಾನಾ ರೀತಿಯ ನಿರೀಕ್ಷೆಗಳು ಗರಿಗೆದರಿವೆ...


COMMERCIAL BREAK
SCROLL TO CONTINUE READING

ಬಜೆಟ್'ನಲ್ಲಿ 'ಉದ್ಯೋಗಸ್ಥರ' ಪ್ರಮುಖ ನಿರೀಕ್ಷೆಗಳು;


* ಚಿಕಿತ್ಸಾ ವೆಚ್ಚವನ್ನು ತೆರಿಗೆ ಮುಕ್ತವಾಗಿಸುವುದು...
ಇತ್ತೀಚಿನ ದಿನಗಳಲ್ಲಿ ಚಿಕಿತ್ಸೆ ಬಹಳ ದುಬಾರಿಯಾಗಿದೆ. ಉದ್ಯೋಗಸ್ಥರಿಗೆ ಪ್ರಸ್ತುತ ತೆರಿಗೆ ಮುಕ್ತವಾಗಿರುವ ವಾರ್ಷಿಕ ವೈದ್ಯಕೀಯ ವೆಚ್ಚದ ಮಿತಿ ರೂ. 15,000 ಇದೆ. ಉದ್ಯೋಗಸ್ಥರು ಚಿಕಿತ್ಸೆಯ ವೆಚ್ಚಗಳನ್ನು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿಸಬೇಕೆಂದು ಬಯಸುತ್ತಾರೆ. ಕೆಲವರು ಕನಿಷ್ಠ ಪಕ್ಷ ಇದರ ಮಿತಿಯನ್ನು 40,000 ರೂ.ಗೆ ಹೆಚ್ಚಿಸಬೇಕೆಂದು ನಿರೀಕ್ಷಿಸುತ್ತಿದ್ದಾರೆ.


* ಗೃಹ ಸಾಲದ ಬಡ್ಡಿದರ ಕಡಿಮೆ ಮಾಡುವ ನಿರೀಕ್ಷೆ...
ಎಲ್ಲರೂ ತಲೆಮೇಲೊಂದು ಸೂರು ಕಟ್ಕೊಬೇಕು ಅಂತಾ ಬಯಸೋದು ಸಹಜ. ಆದರೆ ಏರುತ್ತಿರುವ ಬೆಲೆಗಳಿಂದಾಗಿ ಅದು ಸುಲಭದ ಮಾತಲ್ಲ. ಸರ್ಕಾರ 2022 ರ ಹೊತ್ತಿಗೆ ಎಲ್ಲರಿಗೂ ಸೂರು ಕಲ್ಪಿಸುವ ಬಗ್ಗೆ ಮಾತನಾಡುತ್ತಿದೆ. ಜನಸಾಮಾನ್ಯರು ಈ ಬಾರಿಯ ಬಜೆಟ್‌ನಲ್ಲಿ ಗೃಹ ಸಾಲದ ಬಡ್ಡಿದರದಲ್ಲಿ ಬಂಪರ್ ಕೊಡುಗೆ ಸಿಗಬಹುದು ಎಂದು ನಿರೀಕ್ಷಿಸುತ್ತಿದ್ದಾರೆ. ಗೃಹ ಸಾಲದ ಬಡ್ಡಿ ದರದ ಮೇಲೆ ಪ್ರಸ್ತುತ 2,00,000 ಲಕ್ಷದವರೆಗೆ ಇರುವ ರಿಯಾಯಿತಿಯನ್ನು, ಕನಿಷ್ಠ 3,50,000 ಕ್ಕೆ ಹೆಚ್ಚಿಸುವ ನಿರೀಕ್ಷೆ ಇದೆ.


* 5 ಲಕ್ಷ ರೂಪಾಯಿವರೆಗಿನ ಆದಾಯವನ್ನು ತೆರಿಗೆ ಮುಕ್ತ ಮಾಡುವುದು...
ಇದು ಬಹುದಿನಗಳ ನಿರೀಕ್ಷೆಯಾಗಿದ್ದು, ಪ್ರಸ್ತುತ ಇರುವ ತೆರಿಗೆ ಮಿತಿಯನ್ನು 2,50,000 ದಿಂದ 5 ಲಕ್ಷ ರೂ. ವರೆಗೆ ಹೆಚ್ಚಿಸಿ, 5 ಲಕ್ಷ ರೂಪಾಯಿವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಬಹುದೆಂದು ನಿರೀಕ್ಷಿಸಲಾಗಿದೆ. 


* ಬೋಧನಾ ಶುಲ್ಕದ ಮೇಲಿನ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ...
ಪ್ರಸ್ತುತ, ಬೋಧನಾ ಶುಲ್ಕವನ್ನು ಎರಡು ಮಕ್ಕಳಿಗೆ ತೆರಿಗೆ ವಿನಾಯಿತಿ ಪಡೆಯಲಾಗುತ್ತಿದೆ. ಆದಾಗ್ಯೂ, ಹೆಚ್ಚಿನ ಉದ್ಯೋಗಸ್ಥರು, ಇಬ್ಬರು ಮಕ್ಕಳ ಶಿಕ್ಷಣಕ್ಕಾಗಿ ಮಾಸಿಕ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಕನಿಷ್ಟ ರೂ 5,000 ಇರಬೇಕೆಂದು ಬಯಸುತ್ತಾರೆ. ಈ ರೀತಿಯಾಗಿ, ಶಿಕ್ಷಣದ ಮೇಲೆ ಹೆಚ್ಚುತ್ತಿರುವ ಖರ್ಚು ಮಧ್ಯಮ ವರ್ಗದ ಜನರಿಗೆ ಪರಿಹಾರವನ್ನು ಒದಗಿಸುತ್ತದೆ.