ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ, ಶೇ.60ಕ್ಕೂ ಹೆಚ್ಚು ಮತದಾನ
ಉತ್ತರ ಪ್ರದೇಶದಲ್ಲಿ ಗುರುವಾರ ಸಂಜೆ 6 ಗಂಟೆಗೆ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಶೇ.60ಕ್ಕೂ ಹೆಚ್ಚು ಮತದಾನವಾಗಿದೆ.ಪಶ್ಚಿಮ ಉತ್ತರ ಪ್ರದೇಶದ ಜಾಟ್ ಪ್ರಾಬಲ್ಯ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.
ನವದೆಹಲಿ: ಉತ್ತರ ಪ್ರದೇಶದಲ್ಲಿ ಗುರುವಾರ ಸಂಜೆ 6 ಗಂಟೆಗೆ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಶೇ.60ಕ್ಕೂ ಹೆಚ್ಚು ಮತದಾನವಾಗಿದೆ.ಪಶ್ಚಿಮ ಉತ್ತರ ಪ್ರದೇಶದ ಜಾಟ್ ಪ್ರಾಬಲ್ಯ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.
ಇದನ್ನೂ ಓದಿ : ಹ್ಯಾಂಡ್ ಸಮ್ ಅಲ್ಲು ಅರ್ಜುನ್ ಪುಷ್ಪಾದ ರಗಡ್ ಲುಕ್ ಗೆ ಬದಲಾದಾಗ.. ಇಲ್ಲಿದೆ ನಟನ Transforming ವಿಡಿಯೋ
ಕೆಲವು ಸ್ಥಳಗಳಲ್ಲಿ ವರದಿಯಾದ ಇವಿಎಂಗಳಲ್ಲಿನ ತಾಂತ್ರಿಕ ದೋಷಗಳ ಕುರಿತು ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ (ಎಸಿಇಒ) ಬಿಡಿ ರಾಮ್ ತಿವಾರಿ ಅವರು, "ಕೆಲವು ಸ್ಥಳಗಳಲ್ಲಿ ಇವಿಎಂಗಳಲ್ಲಿ ತಾಂತ್ರಿಕ ದೋಷದ ವರದಿಗಳಿವೆ" ಎಂದು ಹೇಳಿದರು, ವರದಿಗಳು ಬಂದ ನಂತರ ಅವುಗಳನ್ನು ಬದಲಾಯಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಶಾಮ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಶೇ.69.42 ರಷ್ಟು ಜನರು ಮತದಾನ ಮಾಡಿದ್ದಾರೆ.
11 ಜಿಲ್ಲೆಗಳಲ್ಲಿ ಅಂತಿಮ ಮತದಾನ
ಆಗ್ರಾ 60.33%
ಅಲಿಗಢ 60.49%
ಬಾಗ್ಪತ್ 61.35%
ಬುಲಂದ್‌ಶಹರ್ 60.52%
ಗೌತಮ್ ಬುದ್ಧ ನಗರ 56.73%
ಗಾಜಿಯಾಬಾದ್ 54.77%
ಹಾಪುರ್ 60.50%
ಮಥುರಾ 63.28%
ಮೀರತ್ 60.91%
ಮುಜಫರ್‌ನಗರ 65.34%
ಶಾಮ್ಲಿ 69.42%
ಇದನ್ನೂ ಓದಿ : High Court : 'ತೀರ್ಪು ಬರುವವರೆಗೂ ಧಾರ್ಮಿಕ ಉಡುಗೆ ತೊಡಬಾರದು' : ಹೈಕೋರ್ಟ್ ಖಡಕ್ ಸೂಚನೆ
2017 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ, ಈ ಕ್ಷೇತ್ರಗಳಲ್ಲಿ 63.47 ರಷ್ಟು ಮತದಾನವಾಗಿತ್ತು.ಈ ಪ್ರದೇಶದ 58 ಸ್ಥಾನಗಳಲ್ಲಿ ಬಿಜೆಪಿ 53 ಸ್ಥಾನಗಳನ್ನು ಗಳಿಸಿದ್ದರೆ, ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿ ತಲಾ ಎರಡು ಸ್ಥಾನಗಳನ್ನು ಪಡೆದಿದ್ದವು ಮತ್ತು 2017 ರ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳ ಒಂದು ಸ್ಥಾನವನ್ನು ಗೆದ್ದಿತ್ತು.
ಏತನ್ಮಧ್ಯೆ, ಮೊದಲ ಹಂತವು 73 ಮಹಿಳೆಯರು ಸೇರಿದಂತೆ 623 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತದೆ.ಈ ಹಂತದಲ್ಲಿ ಯುಪಿ ಸಚಿವರಾದ ಶ್ರೀಕಾಂತ್ ಶರ್ಮಾ, ಸುರೇಶ್ ರಾಣಾ, ಸಂದೀಪ್ ಸಿಂಗ್, ಕಪಿಲ್ ದೇವ್ ಅಗರ್ವಾಲ್, ಅತುಲ್ ಗಾರ್ಗ್ ಮತ್ತು ಚೌಧರಿ ಲಕ್ಷ್ಮಿ ನಾರಾಯಣ್ ಸೇರಿದ್ದಾರೆ.
ಇದನ್ನೂ ಓದಿ : ಹ್ಯಾಂಡ್ ಸಮ್ ಅಲ್ಲು ಅರ್ಜುನ್ ಪುಷ್ಪಾದ ರಗಡ್ ಲುಕ್ ಗೆ ಬದಲಾದಾಗ.. ಇಲ್ಲಿದೆ ನಟನ Transforming ವಿಡಿಯೋ
ಸಮಾಜವಾದಿ ಪಕ್ಷದ ಸುನೀಲ್ ಚೌಧರಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ ಪಂಕಜ್ ಸಿಂಗ್ ವಿರುದ್ಧ ನೋಯ್ಡಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.ಇದೇ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಪಂಖೂರಿ ಪಾಠಕ್ ಮತ್ತು ಬಿಎಸ್‌ಪಿ ನಾಯಕ ಕೃಪಾರಾಮ್ ಶರ್ಮಾ ಕೂಡ ಕಣದಲ್ಲಿದ್ದರು. 55 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14 ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, 586 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಯುಪಿ ಚುನಾವಣೆಯ ಏಳನೇ ಹಂತದ ಮತದಾನ ಮಾರ್ಚ್ 7 ರಂದು ನಡೆಯಲಿದೆ.ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.