ನವದೆಹಲಿ: ಯುರೋಪಿಯನ್ ದೇಶದಲ್ಲಿ ರೂಪಾಂತರಿ ಕೊರೊನಾ ಪತ್ತೆಯಾದ ಕಾರಣ ಕೇಂದ್ರ ಮತ್ತು ಭಾರತ ಮತ್ತು ಬ್ರಿಟನ್  ನಡುವಿನ ವಿಮಾನ ಸಂಚಾರವನ್ನು ಕಳೆದ ತಿಂಗಳು ಕೇಂದ್ರದಿಂದ ಸ್ಥಗಿತಗೊಳಿಸಿತ್ತು, ಈಗ  ಜನವರಿ 8 ರಿಂದ ಈ ಸೇವೆ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಮಾಹಿತಿ ನೀಡಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬ್ರಿಟನ್ ನಿಂದ ಭಾರತಕ್ಕೆ ಬರುವ ವಿಮಾನಗಳಿಗೆ ನಿಷೇಧ ಹೇರುವ ಸಾಧ್ಯತೆ


"ಭಾರತ ಮತ್ತು ಯುಕೆ ನಡುವಿನ ವಿಮಾನಗಳು 2021 ಜನವರಿ 8 ರಿಂದ  ಪುನರಾರಂಭಗೊಳ್ಳುತ್ತವೆ ಎಂದು ನಿರ್ಧರಿಸಲಾಗಿದೆ. ಜನವರಿ 23 ರವರೆಗೆ ಕಾರ್ಯಾಚರಣೆಯನ್ನು ವಾರಕ್ಕೆ 15 ವಿಮಾನಗಳಿಗೆ ನಿರ್ಬಂಧಿಸಲಾಗುವುದು. ಉಭಯ ದೇಶಗಳ ನಡುವೆ ವಿಮಾನ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ ಗಳಿಂದ ಮಾತ್ರ ಸಂಚರಿಸಲಿವೆ. ಡಿಜಿಸಿಎ ಇಂಡಿಯಾ ಶೀಘ್ರದಲ್ಲೇ ವಿವರಗಳನ್ನು ನೀಡಲಿದೆ "ಎಂದು ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಟ್ವೀಟ್ ಮಾಡಿದ್ದಾರೆ.


ಕೇಂದ್ರವು ಆರಂಭದಲ್ಲಿ ಯುಕೆ ನಿಂದ ಡಿಸೆಂಬರ್ 23 ರಿಂದ ಡಿಸೆಂಬರ್ 31 ರವರೆಗೆ ವಿಮಾನ ನಿಷೇಧವನ್ನು ಘೋಷಿಸಿತ್ತು. ಬುಧವಾರ ಸರ್ಕಾರ ವಿಮಾನಯಾನ ಸ್ಥಗಿತಗೊಳಿಸುವಿಕೆಯನ್ನು ಜನವರಿ 7 ರವರೆಗೆ ವಿಸ್ತರಿಸಿತು.


ಕಳೆದ ವಾರ ಭಾರತದಲ್ಲಿ ಯುರೋಪಿಯನ್ ದೇಶದಿಂದ ಹಿಂದಿರುಗಿದ ಪ್ರಯಾಣಿಕರಲ್ಲಿ ರೂಪಾಂತರಿ ಕೊರೊನಾ (coronavirus strain) ಪತ್ತೆಯಾದ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು.ಭಾರತದಲ್ಲಿ ಶುಕ್ರವಾರ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 29 ಜನರಿಗೆ ಈ ರೂಪಾಂತರಿ ಸೋಂಕು ತಗುಲಿದೆ ಎನ್ನಲಾಗಿದೆ.