ಛತ್ತೀಸ್‌ಗಡ: ವಿದ್ಯಾವಂತರು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಸಮಾಜಕ್ಕೆ ಮಾದರಿಯಾಗಿರುತ್ತಾರೆ. ಆದರೆ ಇಲ್ಲೊಬ್ಬ ಅಧಿಕಾರಿ ಸಮಾಜಕ್ಕೆ ಮಾದರಿಯಾಗುವ ಬದಲು ಜಲಾಶಯದೊಳಗೆ ಮೊಬೈಲ್ ಫೋನ್ ಬಿತ್ತೆಂದು 21 ಲಕ್ಷ ಲೀಟರ್​ ನೀರು ಖಾಲಿ ಮಾಡಿಸಿ ಮೂರ್ಖತನ ತೋರಿಸಿ ಕೆಲಸದಿಂದ ಅಮಾನತುಗೊಂಡಿದ್ದಾನೆ. 


COMMERCIAL BREAK
SCROLL TO CONTINUE READING

ರಾಜೇಶ್ ವಿಶ್ವಾಸ್ ಎಂಬ ಫುಡ್​ ಇನ್​ಸ್ಪೆಕ್ಟರ್ ಸೆಲ್ಫಿ ತೆಗೆದುಕೊಳ್ಳುವಾಗ ಮೊಬೈಲ್ ಕೈಜಾರಿ ಜಲಾಶಯಕ್ಕೆ ಬಿದ್ದಿದೆ. ಮೊಬೈಲ್ ಜಲಾಶಯಕ್ಕೆ ಬಿದ್ದ ಹಿನ್ನಲೆ, ಆತನ ದುಬಾರಿ ಮೊಬೈಲ್ ಹೊರ ತೆಗೆಯಲು ಆತ ಜಲಾಶಯದ 21 ಲಕ್ಷ ಲೀಟರ್​ ನೀರನ್ನು, ಮೋಟಾರ್​​ ಬಳಸಿ ಖಾಲಿ ಮಾಡಿಸಿರುವ ಘಟನೆ ಛತ್ತೀಸ್‌ಗಢದ ಕಂಕೇರ್‌ ಜಿಲ್ಲೆಯಲ್ಲಿ ನಡೆದಿದೆ.


ಇದನ್ನೂ ಓದಿ: Congress Government: 34 ಸಚಿವರು ಮತ್ತು ಖಾತೆ..! ಸಿದ್ದು ಸಂಪೂರ್ಣ ಸಂಪುಟ ಮಾಹಿತಿ ಇಲ್ಲಿದೆ


ಸುಮಾರು 1500 ಎಕರೆ ಕೃಷಿ ಭೂಮಿಗೆ ಬಳಕೆ ಮಾಡಿಕೊಳ್ಳಬಹುದಾಗಿದ್ದ, ನೀರನ್ನು ಖಾಲಿ ಮಾಡಿಸಿದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಪ್ರಿಯಾಂಕಾ ಶುಕ್ಲಾ, ಫುಡ್​ ಇನ್​ಸ್ಪೆಕ್ಟರ್​ನನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.


ಹೌದು,   


ರಾಜೇಶ್ ವಿಶ್ವಾಸ್ ಎಂಬ ಫುಡ್​ ಇನ್​ಸ್ಪೆಕ್ಟರ್, ರಜಾ ನಿಮಿತ್ತ ಕುಟುಂಬ ಸಮೇತ ಛತ್ತೀಸ್‌ಗಢದ ಕಂಕೇರ್‌ ಪಂಖಜೂರಿನ ಪ್ಯಾರಕೋಟೆ ಜಲಾಶಯಕ್ಕೆ ತೆರಳಿದ್ದರು. ಜಲಾಶಯದ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಫುಡ್​ ಇನ್​​ಸ್ಪೆಕ್ಟರ್​ ತನ್ನ 1.25 ಲಕ್ಷ ಮೌಲ್ಯದ ಮೊಬೈಲ್ ಜಲಾಶಯದೊಳಗೆ ಬಿದ್ದಿದೆ.


ದುಬಾರಿ ಮೊತ್ತದ ಪೋನ್‌ ನೀರಿಗೆ ಬಿದ್ದಿದ್ದರಿಂದ ಆತಂಕ್ಕೀಡಾಗಿ, ಅದನ್ನು ಇಡೀ ಜಲಾಶಯದ ನೀರನ್ನು ಖಾಲಿ ಮಾಡಿಸಿದ್ದಾರೆ. ವರದಿಗಳ ಪ್ರಕಾರ ಜಲಾಶಯದಲ್ಲಿ ಸಂಗ್ರಹವಾಗಿದ್ದ 21 ಲಕ್ಷ ಲೀಟರ್​ ನೀರನ್ನು ಅಧಿಕಾರಿ ಖಾಲಿ ಮಾಡಿಸಿದ್ದಾನೆ. ನೀರೆಲ್ಲಾ ಖಾಲಿಯಾದ ನಂತರ ಆತನ ಮೊಬೈಲ್ ಫೋನ್ ಸಿಕ್ಕಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Karnataka Cabinet List: ʼಶೆಟ್ಟರ್ ಹಾಗೂ ಸವದಿಗೆ ಅವಕಾಶ ಮಾಡಿಕೊಡೋದು ಪಕ್ಷಕ್ಕೆ ಒಳ್ಳೆದುʼ


ಇಂದು ಬಿಸಿಲಿನ ಬೇಗೆಯಲ್ಲಿ ಜನರು ಜೀವಜಲಕ್ಕಾಗಿ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ, ಕುಡಿಯುವ ನೀರಿಗೂ ವ್ಯವಸ್ಥೆ ಇಲ್ಲ. ಆದರೆ ಅಧಿಕಾರಿ ತನ್ನ ಮೊಬೈಲ್‌ಗಾಗಿ ಸುಮಾರು 21 ಲಕ್ಷ ಲೀಟರ್ ನೀರನ್ನು ವ್ಯರ್ಥ ಮಾಡಿದ್ದಾನೆ.


ಈ ನೀರಿನಿಂದ ಒಂದೂವರೆ ಸಾವಿರ ಎಕರೆ ಜಮೀನು ನೀರಾವರಿಗೆ ಮಾಡಬಹುದಿತ್ತು ಎಂದು ವಿಚಾರವಾದಿಗಳು ಆಕ್ರೋಶ ಹೊರ ಹಾಕಿದ್ದಾರೆ. ಎಲ್ಲೆಡೆ ನೀರು ಉಳಿಸುವ ಅಭಿಯಾನ ನಡೆಸುತ್ತಿದ್ದರೆ, ಛತ್ತೀಸ್‌ಗಢದ ಫುಡ್​ ಇನ್​ಸ್ಪೆಕ್ಟರ್​ ಮೂರ್ಖತನದ ಕಾರ್ಯ ಎಲ್ಲರ ಅಚ್ಚರಿ ಮೂಡಿಸಿದರೇ, ಪರಿಸರವಾದಿಗಳ ಕೋಪಕ್ಕೂ ಕಾರಣವಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡ