ಭಾರತದಲ್ಲಿ ಚಿನ್ನವನ್ನು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ, ಅದೊಂದು ಧಾರ್ಮಿಕ ಕಾರ್ಯಕ್ಕೆ ಹಾಗೂ ಪ್ರತಿಷ್ಠೆಯ ಪರಾಕಾಷ್ಠೆಗಾಗಿಯೂ ಸಹ ಬಳಸಲಾಗುತ್ತದೆ.ಹಾಗಾಗಿ ಇಲ್ಲಿ ಜನರ ಸ್ಥಿತಿಯನ್ನು ಚಿನ್ನದ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ.ಸಾಮಾನ್ಯವಾಗಿ ಕಷ್ಟದ ಸಂದರ್ಭದಲ್ಲಿ ಚಿನ್ನವನ್ನು ಅಡ ಇಡುವುದನ್ನು ಅಶುಭದ ಸಂಕೇತ ಎಂದೇ ಪರಿಗಣಿಸಲಾಗಿದೆ.ಇಂತಹ ಸಂದರ್ಭದಲ್ಲಿ ದೇಶವೊಂದು ಸಾಲದ ಸುಳಿಯಿಂದ ಪಾರಾಗಲು ಚಿನ್ನವನ್ನು ಅಡವಿಟ್ಟರೆ ಏನಾಗಬಹುದು ಹೇಳಿ? ಹೌದು, ಆ ಕಾಲ ಘಟ್ಟವೇ ಅಂತದ್ದು, ಒಂದೆಡೆ ದೇಶದ ಜಿಡಿಪಿ ಅಧೋಗತಿಗೆ ಹೋಗಿತ್ತು, ತೈಲಗಳ ಬೆಲೆಗಳು ಗಗನಕ್ಕೇರಿದ್ದವು, ಇಂತಹ ಸಂದರ್ಭದಲ್ಲಿ ಭಾರತ ಸಾಲದ ಹೊರೆಯಿಂದ ಹೊರಬರಬೇಕಾದರೆ ಅನಿವಾರ್ಯವಾಗಿ ಚಿನ್ನದ ಮೊರೆಹೊಗಬೇಕಾಗಿ ಬಂದಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಬಂಧನ ಅಪ್ಡೇಟ್


ಅದು 1991 ರ ಕಥೆ... ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿತ್ತು. ಆ ಸಮಯದಲ್ಲಿ ದೇಶಕ್ಕೆ ಆಮದು ಮಾಡಿಕೊಳ್ಳಲು ಯಾವುದೇ ವಿದೇಶಿ ಕರೆನ್ಸಿ ಇರಲಿಲ್ಲ. ದೇಶದ ಆರ್ಥಿಕತೆ ದಿವಾಳಿಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಈ ಕುರಿತಾಗಿ ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದಂತಹ ಸಿ.ರಂಗರಾಜನ್ ಕೂಡ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.


ಚಿನ್ನವನ್ನು ಅಡವಿಡುವ ಪರಿಸ್ಥಿತಿ ಉದ್ಬವಿಸಿದ್ದೇಕೆ ಗೊತ್ತೇ?


ಆಗ ದೇಶದಲ್ಲಿ ವ್ಯವಹಾರದಲ್ಲಿ ಸರ್ಕಾರದ ಹಸ್ತಕ್ಷೇಪ ಉತ್ತುಂಗದಲ್ಲಿದ್ದ ಕಾಲ ಅದು. ದೇಶದಲ್ಲಿ ಲೈಸೆನ್ಸ್ ಪರ್ಮಿಟ್ ರಾಜ್ ಇತ್ತು. ಇದರಿಂದಾಗಿ ಎಲ್ಲದಕ್ಕೂ ಪರವಾನಗಿ ಬೇಕಿತ್ತು. ಹೀಗಾಗಿ ಈ ವ್ಯವಸ್ಥೆ ದೇಶದ ಆರ್ಥಿಕತೆಗೆ ಬಹಳ ದೊಡ್ಡ ಪೆಟ್ಟನ್ನು ನೀಡಿತ್ತು, ಅರಬ್ ದೇಶಗಳಲ್ಲಿ ಉದ್ಬವಿಸಿದ ಯುದ್ದದ ಪರಿಸ್ಥಿತಿ ದೇಶದ ಆರ್ಥಿಕತೆ ಮೇಲೆ ತೀವ್ರತರನಾದ ಹೊಡೆತವನ್ನು ನೀಡಿತ್ತು.ಇದೆ ವೇಳೆ ಅಧಿಕಾರಕ್ಕೆ ಬಂದಂತಹ ಚಂದ್ರಶೇಖರ್ ಸರ್ಕಾರವು ದೇಶವನ್ನು ಪುನರುಜ್ಜೀವನಗೊಳಿಸಲು ಮಾರ್ಗಗಳನ್ನು ಕಂಡುಕೊಳ್ಳಲು ಪ್ರಾರಂಭಿಸಲಾಯಿತು. ತೈಲ ಆಮದು ಮಾಡಿಕೊಳ್ಳಲು ಭಾರತ ದುಪ್ಪಟ್ಟು ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ತೈಲ ಆಮದು ಮಾಡಿಕೊಳ್ಳಲು ಆಗ ಹಣಕಾಸಿನ ಕೊರತೆ ಎದುರಾಗಿತ್ತು,ಹೀಗಾಗಿ ಭಾರತ ಆಗ ಅಂತರಾಷ್ಟ್ರೀಯ ಹಣಕಾಸು ನಿಧಿಯ ಬಾಗಿಲು ತಟ್ಟಿತು, ಕೊನೆಗೂ ಭಾರತ ಅಮೇರಿಕಾದಿಂದ 1 ಬಿಲಿಯನ್ 30 ಮಿಲಿಯನ್ ಡಾಲರ್ ಸಾಲವನ್ನು ಪಡೆಯಲು ಯಶಸ್ವಿಯಾಯಿತು.


ಇದನ್ನೂ ಓದಿ: ಹೈಕೋರ್ಟ್ ವಕೀಲೆ ಚೈತ್ರಾಗೌಡ ಸಾವು ಪ್ರಕರಣ: ಸಿಸಿಬಿಗೆ ತನಿಖೆ ವರ್ಗಾವಣೆ


1991 ರಲ್ಲಿ ಆಗಿದ್ದೇನು? 


ಆಗ ಪ್ರಧಾನಿ ಚಂದ್ರಶೇಖರ್, ಅವರ ಹಣಕಾಸು ಸಲಹೆಗಾರರಾಗಿದ್ದ ಮನಮೋಹನ್ ಸಿಂಗ್, ಹಣಕಾಸು ಸಚಿವ ಯಶವಂತ್ ಸಿನ್ಹಾ ಮತ್ತು ಆರ್‌ಬಿಐ ಗವರ್ನರ್ ಎಸ್. ವೆಂಕಟರಮಣನ ಜೊತೆಗೂಡಿ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡರು. ಅದೇನಪ್ಪಾ ಎಂದರೆ ಚಿನ್ನವನ್ನು ಅಡವಿಡುವ ಮೂಲಕ ಸಾಲದ ಸುಳಿಯಿಂದ ಹೊರಬರುವುದು.ಆದರೆ  ಆಗಿನ ಕಾಲಘಟ್ಟದಲ್ಲಿ 47 ಟನ್ ಚಿನ್ನವನ್ನು ದೇಶದಿಂದ ರಹಸ್ಯವಾಗಿ ತೆಗೆದುಕೊಂಡು ಹೋಗುವುದು ಸುಲಭವಾಗಿರಲಿಲ್ಲ.ಆದರೆ ಜುಲೈ 1991 ರಲ್ಲಿ ಆರ್‌ಬಿಐ 47 ಟನ್ ಚಿನ್ನವನ್ನು ಒತ್ತೆ ಇಟ್ಟು 400 ಮಿಲಿಯನ್ ಡಾಲರ್ ಸಂಗ್ರಹಿಸಿತು.ರಹಸ್ಯವಾಗಿ ಆಗ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ಗೆ ವಿಶೇಷ ವಿಮಾನವನ್ನು ಕಳುಹಿಸುವ ಮೂಲಕ ಚಿನ್ನವನ್ನು ಅಡಮಾನ ಇಡಲಾಯಿತು.ಅಂತಿಮವಾಗಿ ಈ ವಿಚಾರವಾಗಿ ಮನಮೋಹನ್ ಸಿಂಗ್ ಅವರು ಸಂಸತ್ತಿಗೆ ಬಂದು ಸ್ಪಷ್ಟನೆ ನೀಡಬೇಕಾಯಿತು.ಆದಾಗ್ಯೂ ಕೆಲವೇ ತಿಂಗಳುಗಳಲ್ಲಿ ಸರ್ಕಾರ ಒತ್ತೆ ಇಟ್ಟ ಚಿನ್ನವನ್ನು ವಾಪಸ್ ಖರೀದಿಸುವಲ್ಲಿ ಯಶಸ್ವಿಯಾಯಿತು. ಅಂದು ಸಾಲದ ಸುಲಿಗೆ ಸಿಲುಕಿದಾಗ 47 ಟನ್ ಅಡವಿಡುವ ಮೂಲಕ ಸಾಲದ ಭಾದೆಯಿಂದ ಹೊರಬಂದಿದ್ದ ದೇಶದಲ್ಲಿ ಚಿನ್ನದ ಸಂಗ್ರಹ 822.1 ಟನ್ ತಲುಪಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ