ಔರಂಗಾಬಾದ್: ರೈಲ್ವೆ ಟ್ರ್ಯಾಕ್‌ನಲ್ಲಿ ಮಲಗಿದ್ದವರ 19 ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದ ಪರಿಣಾಮ 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಇಂದು ಮುಂಜಾನೆ ಮಹಾರಾಷ್ಟ್ರ (Maharashtra) ದ ಔರಂಗಾಬಾದ್‌ನಲ್ಲಿ ನಡೆದಿದೆ. ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಈ ಘಟನೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಸಂಭವಿಸಿದೆ ಎಂದು ಹೇಳಲಾಗಿದ್ದು ಕೆಲಸವಿಲ್ಲದ ಕಾರಣ ಮತ್ತು ದೇಶಾದ್ಯಂತ ಲಾಕ್‌ಡೌನ್(Lockdown)‌ ಜಾರಿಯಲ್ಲಿರುವುದರಿಂದ ಕಾರ್ಮಿಕರೆಲ್ಲರೂ ರೈಲಿನ ಟ್ರ್ಯಾಕ್ ಹಿಡಿದು ಕಾಲ್ನಡಿಗೆಯಲ್ಲಿ ತಮ್ಮ ತಮ್ಮ ಪ್ರದೇಶಗಳಿಗೆ ಮರಳುತ್ತಿದ್ದರು. ರಾತ್ರಿ ಆಯಾಸಗೊಂಡಿದ್ದ ಕಾರಣ ಟ್ರ್ಯಾಕ್ ಮೇಲೆಯೇ ಮಲಗಿದ್ದರು ಎನ್ನಲಾಗಿದೆ.
 
ಇದುವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಜಲ್ನಾದಿಂದ ಭೂಸಾವಲ್‌ಗೆ ಹೋಗುವ ಕಾರ್ಮಿಕರು ಮಧ್ಯಪ್ರದೇಶಕ್ಕೆ ಮರಳುತ್ತಿದ್ದರು. ಈ ಕಾರ್ಮಿಕರು ರೈಲ್ವೆ ಹಳಿಗಳ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು ಮಧ್ಯದಲ್ಲಿ ದಣಿದಿದ್ದ ಕಾರಣ ಹಳಿಗಳ ಮೇಲೆ ಮಲಗಿದ್ದರು.