ನಿಮ್ಮ ಪಾನ್ ಕಾರ್ಡ್ ನ್ನು ಆಧಾರ್ ಗೆ ಲಿಂಕ್ ಮಾಡಲು ಇಲ್ಲಿದೆ ಹೊಸ ಡೆಡ್ ಲೈನ್
ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಸರ್ಕಾರ ಶನಿವಾರ ನಿಗದಿತ ದಿನಾಂಕವನ್ನು ವಿಸ್ತರಿಸಿದೆ.
ನವದೆಹಲಿ: ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಸರ್ಕಾರ ಶನಿವಾರ ನಿಗದಿತ ದಿನಾಂಕವನ್ನು ವಿಸ್ತರಿಸಿದೆ.
ಈಗ ನೂತನ ಕೇಂದ್ರದ ಅಧಿಸೂಚನೆ ಅನ್ವಯ ಹೊಸ ಗಡುವನ್ನು ಸರ್ಕಾರ ಡಿಸೆಂಬರ್ 31ರ ವರೆಗೆ ವಿಸ್ತರಿಸಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಈ ಎರಡು ಗುರುತಿನ ಸಂಖ್ಯೆಗಳನ್ನು ಲಿಂಕ್ ಮಾಡಲು ಸಾರ್ವಜನಿಕರಿಗೆ ಸರ್ಕಾರವು ಗಡುವನ್ನು ಏಳನೇ ಬಾರಿಗೆ ವಿಸ್ತರಿಸಿದ್ದು. ಕೊನೆಯ ವಿಸ್ತರಣೆಯು ಈ ವರ್ಷದ ಮಾರ್ಚ್ ತಿಂಗಳಲ್ಲಿ ಮಾಡಲಾಗಿತ್ತು, ಅದಾದ ಬಳಿಕ ಸರ್ಕಾರವು ಕೊನೆಯ ದಿನಾಂಕವನ್ನು ಆರು ತಿಂಗಳವರೆಗೆ ವಿಸ್ತರಿಸಿತು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಸರ್ಕಾರದ ಪ್ರಮುಖ ಆಧಾರ್ ಯೋಜನೆಯನ್ನು ಸಾಂವಿಧಾನಿಕವಾಗಿ ಮಾನ್ಯ ಎಂದು ಘೋಷಿಸಿತ್ತು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮತ್ತು ಪ್ಯಾನ್ ಹಂಚಿಕೆಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಉಲ್ಲೇಖಿಸುವುದು ಕಡ್ಡಾಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಅವಧಿಯ ಮೊದಲ ಬಜೆಟ್‌ನಲ್ಲಿ, ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ ಪ್ಯಾನ್‌ನೊಂದಿಗೆ ಆಧಾರ್ ಅನ್ನು ಪರಸ್ಪರ ಬದಲಾಯಿಸಲು ಸರ್ಕಾರ ಅನುಮತಿ ನೀಡಿತು. ಅಂದರೆ ಮೌಲ್ಯಮಾಪಕರು ಈಗ ಪ್ಯಾನ್ ಬದಲಿಗೆ ಆಧಾರ್ ಅನ್ನು ಉಲ್ಲೇಖಿಸಿ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದು.
ಆದಾಗ್ಯೂ, ಅಂತಹ ಸಂದರ್ಭಗಳಲ್ಲಿ, ಪ್ಯಾನ್ ಸ್ವಯಂಚಾಲಿತವಾಗಿ ಉತ್ಪತ್ತಿಯಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ - ಆದಾಯ ತೆರಿಗೆ ಇಲಾಖೆಯ ಉನ್ನತ ನೀತಿ ನಿರೂಪಣಾ ಸಂಸ್ಥೆ - ಈ ತಿಂಗಳ ಆರಂಭದಲ್ಲಿ ತಿಳಿಸಿದೆ.