ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಬುಧವಾರದಂದು ರಾಜ್ಯದಲ್ಲಿನ ಯಥಾಸ್ಥಿತಿ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಉಂಟಾಗುವ ಜೀವ ಹಾನಿ ತಡೆಗಟ್ಟಲು ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಹೇಳಿದರು.


COMMERCIAL BREAK
SCROLL TO CONTINUE READING

'ಪ್ರತಿ ಕಾಶ್ಮೀರಿ ಜೀವನವು ನಮಗೆ ಅಮೂಲ್ಯವಾದುದು, ಒಂದೇ ಒಂದು ಜೀವದ ನಷ್ಟವನ್ನೂ ನಾವು ಬಯಸುವುದಿಲ್ಲ. ಯಾವುದೇ ನಾಗರಿಕ ಅಪಘಾತ ಸಂಭವಿಸಿಲ್ಲ, ಹಿಂಸಾಚಾರಕ್ಕೆ ಒಳಗಾದ ಕೆಲವರು ಮಾತ್ರ ಗಾಯಗೊಂಡಿದ್ದಾರೆ, ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಕೆಲವು ಘರ್ಷಣೆಗಳು ವರದಿಯಾಗಿವೆ.ಜೀವ ಹಾನಿಯನ್ನು ತಪ್ಪಿಸಲು ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದರು. ಜಮ್ಮು ಮತ್ತು ಕಾಶ್ಮೀರದ ಜನರ ಅಸ್ಮಿತೆ ಮತ್ತು ಸಂಸ್ಕೃತಿಯನ್ನು ಕಾಪಾಡಲಾಗುವುದು ಎಂದು ರಾಜ್ಯಪಾಲರು ಹೇಳಿದರು.


ಕಣಿವೆಯಲ್ಲಿ ಸ್ಥಗಿತಗೊಂಡಿರುವ ನೆಟ್‌ವರ್ಕ್ ಸಂಪರ್ಕದ ಕುರಿತು ಮಾತನಾಡಿದ ಮಲಿಕ್, 'ನಾವು ಕುಪ್ವಾರಾ ಮತ್ತು ಹಂಡ್ವಾರಾ ಜಿಲ್ಲೆಗಳಲ್ಲಿ (ಕಾಶ್ಮೀರದ) ಮೊಬೈಲ್ ಫೋನ್ ಸಂಪರ್ಕವನ್ನು ತೆರೆಯುತ್ತಿದ್ದೇವೆ, ಶೀಘ್ರದಲ್ಲೇ ನಾವು ಇತರ ಜಿಲ್ಲೆಗಳಲ್ಲೂ ಸಂಪರ್ಕವನ್ನು ತೆರೆಯುತ್ತೇವೆ" ಎಂದು ಹೇಳಿದರು.ಫೋನ್ ಮತ್ತು ಇಂಟರ್ನೆಟ್ ಮಾಧ್ಯಮ ಭಯೋತ್ಪಾದಕರಿಗೆ ಒಂದು ರೀತಿಯ ಆಯುಧವಾಗಿದೆ, ಆದ್ದರಿಂದ ನಾವು ಅದನ್ನು ನಿಲ್ಲಿಸಿದ್ದೇವೆ. ಸೇವೆಗಳನ್ನು ಕ್ರಮೇಣ ಪುನರಾರಂಭಿಸಲಾಗುವುದು ಎಂದು ಮಲಿಕ್ ಹೇಳಿದರು. ಮುಂದಿನ ಆರು ತಿಂಗಳಲ್ಲಿ ಈ ಪ್ರದೇಶದಲ್ಲಿ ಪ್ರಮುಖ ಹೂಡಿಕೆಗಳನ್ನು ಸರ್ಕಾರ ಯೋಜಿಸುತ್ತಿದೆ ಮತ್ತು ಇದು ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.


ಮುಂದಿನ 2-3 ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರಿಗೆ 50,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಸರ್ಕಾರ ಹೊಂದಿದೆ. ಮುಂಬರುವ 2-3 ತಿಂಗಳಲ್ಲಿ ನಾವು ಈ ಸ್ಥಾನಗಳನ್ನು ಭರ್ತಿ ಮಾಡುತ್ತೇವೆ' ಎಂದು ಮಲಿಕ್ ಹೇಳಿದರು. ಪ್ರತಿ ಜಿಲ್ಲೆಯಲ್ಲೂ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಹೊಂದಲು ಆಡಳಿತವು ಪ್ರಯತ್ನಿಸುತ್ತದೆ ಎಂದು ಹೇಳಿದರು. ಕಾಶ್ಮೀರದ ರಾಜಕೀಯ ನಾಯಕತ್ವದ ಬಂಧನದ ಬಗ್ಗೆ ಕೇಳಿದಾಗ, ಮಲಿಕ್ ಉತ್ತರಿಸಿ 'ಅವರ ಬಂಧನದ ಬಗ್ಗೆ ದುಃಖಿಸಬೇಡಿ. ಇದು ಅವರ ರಾಜಕೀಯ ವೃತ್ತಿಜೀವನಕ್ಕೆ ಸಹಾಯ ಮಾಡುತ್ತದೆ"ಎಂದು ಹೇಳಿದರು.