ನವದೆಹಲಿ:  ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಈಗ ಈ ಕುರಿತಾಗಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ   "ಸಂಸತ್ತಿನ ವಿಶೇಷ ಅಧಿವೇಶನವನ್ನು ಸಪ್ಟೆಂಬರ್ 18 ರಿಂದ 22ರ ವರೆಗೆ ಕರೆಯಲಾಗಿದ್ದು ಒಟ್ಟು 5 ಅವಧಿಗಳು ಇರಲಿವೆ. 17ನೇ ಲೋಕಸಭೆಯ 13ನೇ ಅಧಿವೇಶನ ಹಾಗೂ ರಾಜ್ಯಸಭೆಯ 261 ನೇ ಅಧಿವೇಶನ ಇದಾಗಿರಲಿದೆ. ಅಮೃತ್ ಕಾಲದ ಈ ಮಹತ್ವದ ಕಾಲಫಟ್ಟದಲ್ಲಿ ಒಂದು ರಚನಾತ್ಮಕ ಅಧಿವೇಶವನ್ನು ಮುನ್ನೋಡುತ್ತಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ‘ಕಿಡ್ನಾಪ್ ಕಾವ್ಯ’!


ಹೊಸ ಸಂಸತ್ ಭವನಕ್ಕೆ ಸ್ಥಳಾಂತರ ಪ್ರಕ್ರಿಯೆ ಆರಂಭಿಸುವ ನಿಟ್ಟಿನಲ್ಲಿ ವಿಶೇಷ ಅಧಿವೇಶನ ಕರೆಯಲಾಗುತ್ತಿದೆ ಎಂಬ ಊಹಾಪೋಹಗಳಿವೆ.ಆದ್ದರಿಂದ ಈ ಅಧಿವೇಶನವು ಈಗ ಹಳೆಯ ಸಂಸತ್ ಭವನದಿಂದ ಆರಂಭವಾಗಿ ಹೊಸ ಸಂಸತ್ ನಲ್ಲಿ ಕೊನೆಗೊಳ್ಳಬಹುದು ಎನ್ನುವ ಮಾಹಿತಿ ಇದೆ.


 ಇದನ್ನೂ ಓದಿ-HD Kumaraswamy Health Updates: ಎಚ್​​ಡಿಕೆ ಆರೋಗ್ಯದ ಬಗ್ಗೆ ಅನಿತಾ ಕುಮಾರಸ್ವಾಮಿ​ ಹೇಳಿದ್ದೇನು..?


ಸರ್ಕಾರಿ ಮೂಲಗಳ ಪ್ರಕಾರ ಭಾರತವನ್ನು ಅಭಿವೃದ್ದಿ ಹೊಂದಿದ ರಾಷ್ಟ್ರ ಎಂದು ಘೋಷಿಸುವ ಸಾಧ್ಯತೆ ಇದ್ದು, ಈ ವೇಳೆ ಯಾವುದೇ ರೀತಿಯ ಹೊಸ ಮಸೂದೆಗಳು ಅಂಗೀಕಾರವಾಗುವುದಿಲ್ಲ ಎನ್ನಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.