ನವದೆಹಲಿ: Electric Vehicle Subsidy- ನೀವು ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ ಆಗಿದೆ. ಸರ್ಕಾರವು ಫ್ರೇಮ್ -2 ನೀತಿಯನ್ನು ಜಾರಿಗೆ ತಂದ ನಂತರ, ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸರ್ಕಾರ ಸಬ್ಸಿಡಿ ಘೋಷಿಸಿದೆ. ಈವರೆಗೆ ಗುಜರಾತ್, ಮಹಾರಾಷ್ಟ್ರ, ದೆಹಲಿ ಮತ್ತು ತೆಲಂಗಾಣದಲ್ಲಿ ಈ ಸೌಲಭ್ಯವನ್ನು ಒದಗಿಸಲಾಗುತ್ತಿತ್ತು. ಆದರೆ, ಈಗ ರಾಜಸ್ಥಾನದಲ್ಲೂ ಈ ಯೋಜನೆಯನ್ನು  ಜಾರಿಗೆ ತರಲಾಗಿದೆ. ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಸರ್ಕಾರದಿಂದ ನೇರವಾಗಿ ಇದರ ಪ್ರಯೋಜನ ಲಭ್ಯವಾಗಲಿದೆ.


COMMERCIAL BREAK
SCROLL TO CONTINUE READING

ಎಷ್ಟು ಸಬ್ಸಿಡಿ ಸಿಗಲಿದೆ?
ರಾಜಸ್ಥಾನ ಸರ್ಕಾರದ ಸಾರಿಗೆ ಇಲಾಖೆಯ ಪ್ರಕಾರ, ಎಲೆಕ್ಟ್ರಿಕ್ ವಾಹನಗಳ ಖರೀದಿಗೆ (Electric Vehicle Subsidy) ಸರ್ಕಾರವೇ ಎಸ್‌ಜಿಎಸ್‌ಟಿ ಪಾವತಿಸಲಿದೆ. ಇದರ ಅಡಿಯಲ್ಲಿ ಸರ್ಕಾರ ಬ್ಯಾಟರಿ ಶಕ್ತಿಗೆ ಅನುಗುಣವಾಗಿ ನಾಲ್ಕು ಚಕ್ರಗಳು ಮತ್ತು ತ್ರಿಚಕ್ರ ವಾಹನಗಳಿಗೆ ಒಂದು ಬಾರಿ ಅನುದಾನ ನೀಡಲಿದೆ. ಇದರಲ್ಲಿ ದ್ವಿಚಕ್ರ ವಾಹನಗಳೂ ಸೇರಿವೆ. ಸಾರಿಗೆ ಇಲಾಖೆಯ ಪ್ರಕಾರ, ಏಪ್ರಿಲ್ 2021 ರಿಂದ ಮಾರ್ಚ್ 31, 2022 ರವರೆಗೆ ವಾಹನಗಳನ್ನು ಖರೀದಿಸಿ ಮತ್ತು ಮಾರ್ಚ್ 2022 ರಲ್ಲಿ ವಾಹನ ರಿಜಿಸ್ಟ್ರೇಶನ್ ಮಾಡುವವರಿಗೆ ಈ ಸೌಲಭ್ಯ ನೀಡಲಾಗುವುದು ಎಂದು ತಿಳಿದುಬಂದಿದೆ.


ಇದನ್ನೂ ಓದಿ- Electric Vehicle Battery: ಕೇವಲ 15 ನಿಮಿಷಗಳಲ್ಲಿ ಚಾರ್ಜ್ ಆಗುತ್ತೆ ನಿಮ್ಮ ವಾಹನ


ಬ್ಯಾಟರಿ ಪ್ಯಾಕ್ ಪ್ರಕಾರ ಸಬ್ಸಿಡಿ ನೀಡಲಾಗುವುದು:
ರಾಜಸ್ಥಾನ ಸರ್ಕಾರದ ಪ್ರಕಾರ, ಎಲೆಕ್ಟ್ರಿಕ್ ವಾಹನಗಳ (Electric Vehicle) ಖರೀದಿಗೆ 5,000 ರೂ.ಗಳ ಅತ್ಯಂತ ಕಡಿಮೆ ಸಬ್ಸಿಡಿ ನೀಡಲಾಗುವುದು. 2 ಕಿ.ವ್ಯಾ ಬ್ಯಾಟರಿ ಬ್ಯಾಕಪ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 5,000 ರೂ.ಗಳ ಸಬ್ಸಿಡಿ ಲಭ್ಯವಿದೆ. ಅದೇ ಸಮಯದಲ್ಲಿ, 5 ಕಿ.ವ್ಯಾ. ಬ್ಯಾಟರಿ ಬ್ಯಾಕಪ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್‌ಗೆ 20,000 ರೂ.ಗಳ ಸಬ್ಸಿಡಿ ನೀಡಲಾಗುವುದು. ಈ ರೀತಿಯಾಗಿ ನೀವು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸರ್ಕಾರದಿಂದ ಲಾಭ ಪಡೆಯಬಹುದಾಗಿದೆ.


ಇದನ್ನೂ ಓದಿ- Ather Energy ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಸೋರಿಕೆ


ದೆಹಲಿ ಸರ್ಕಾರ ಗರಿಷ್ಠ ಸಬ್ಸಿಡಿ ನೀಡುತ್ತಿದೆ :
ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗರಿಷ್ಠ ಸಬ್ಸಿಡಿ ನೀಡಲಾಗುತ್ತಿದೆ. ಇದರಲ್ಲಿ ನಿಮಗೆ 1.5 ಲಕ್ಷ ರೂ.ವರೆಗೆ ಸಬ್ಸಿಡಿ ನೀಡಲಾಗುತ್ತಿದೆ. ಆದ್ದರಿಂದ, ನೀವು ಸಹ ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಬಯಸಿದರೆ, ಅದು ನಿಮಗೆ ಹೆಚ್ಚು ಸೂಕ್ತವಾಗಿರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ