ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಿರುಗೇಟು
ಸಾರ್ವಜನಿಕ ವಲಯದ ಬ್ಯಾಂಕಗಳು ಕುಸಿತಕ್ಕೆ ಪ್ರಮುಖ ಕಾರಣ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಘುರಾಮ್ ರಾಜನ್ ಅವರ ಜೋಡಿ ಕಾರಣ ಎಂದು ಆರೋಪಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಈಗ ಮನಮೋಹನ್ ಸಿಂಗ್ ತಿರುಗೇಟು ನೀಡಿದ್ದಾರೆ.
ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕಗಳು ಕುಸಿತಕ್ಕೆ ಪ್ರಮುಖ ಕಾರಣ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಘುರಾಮ್ ರಾಜನ್ ಅವರ ಜೋಡಿ ಕಾರಣ ಎಂದು ಆರೋಪಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಈಗ ಮನಮೋಹನ್ ಸಿಂಗ್ ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರವು ಪರಿಹಾರಗಳನ್ನು ಕಂಡುಕೊಳ್ಳುವ ಬದಲು 'ತನ್ನ ವಿರೋಧಿಗಳ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ' ಎಂದು ಹೇಳಿದ್ದಾರೆ. 'ನಾನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗಳನ್ನು ನೋಡಿದ್ದೇನೆ. ಆ ಹೇಳಿಕೆಯ ಬಗ್ಗೆ ನಾನು ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ, ಆದರೆ ಆರ್ಥಿಕತೆಯನ್ನು ಸರಿಪಡಿಸುವ ಮೊದಲು, ಅದರ ಕಾಯಿಲೆಗಳು ಮತ್ತು ಅವುಗಳ ಕಾರಣಗಳ ಬಗ್ಗೆ ಸರಿಯಾದ ರೋಗ ನಿರ್ಣಯದ ಅಗತ್ಯವಿದೆ. ಆದರೆ ಸರ್ಕಾರವು ತನ್ನ ಎದುರಾಳಿಯ ಮೇಲೆ ಆರೋಪ ಹೊರಿಸುವ ಗೀಳನ್ನು ಹೊಂದಿದೆ, ಇದರಿಂದಾಗಿ ಆರ್ಥಿಕತೆಯ ಪುನರುಜ್ಜೀವನವನ್ನು ಖಚಿತಪಡಿಸುವ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ ' ಎಂದು ಮುಂಬಯಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮನಮೋಹನ್ ಸಿಂಗ್ ಹೇಳಿದರು.
ಮಂಗಳವಾರದಂದು ನಿರ್ಮಲಾ ಸೀತಾರಾಮನ್ ಯುಎಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್ಬಿ) ಕುಸಿತಕ್ಕೆ ಮನಮೋಹನ್ ಸಿಂಗ್-ರಘುರಾಮ್ ರಾಜನ್ ಕಾರಣ ಎಂದು ಆರೋಪಿಸಿದ್ದರು. 'ರಾಜನ್ ಅವರು ಹೇಳುತ್ತಿರುವ ಪ್ರತಿಯೊಂದು ಮಾತುಗಳಿಗೂ ಅನುಮಾನ ವ್ಯಕ್ತಪಡಿಸುವುದಕ್ಕೆ ನನಗೆ ಯಾವುದೇ ಕಾರಣವಿಲ್ಲ. ಮತ್ತು ನಾನು ಇಂದು ಇಲ್ಲಿದ್ದೇನೆ, ಅವರಿಗೆಗೆ ಗೌರವವನ್ನು ನೀಡುತ್ತಿದ್ದೇನೆ, ಪ್ರಧಾನ ಮಂತ್ರಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಆಗಿ ಸಿಂಗ್ ಮತ್ತು ರಾಜನ್ ಅವರು ಇದ್ದಂತಹ ಅವಧಿಯಲ್ಲಿನ ಸ್ಥಿತಿಯನ್ನು ಈಗ ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕುಗಳು ಹೊಂದಿಲ್ಲ ಎಂಬ ಅಂಶವನ್ನು ನಿಮ್ಮ ಮುಂದೆ ಇಡುತ್ತೇನೆ ಎಂದು ಹಣಕಾಸು ಸಚಿವರು ಕೊಲಂಬಿಯಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಟರ್ನ್ಯಾಷನಲ್ನಲ್ಲಿ ಹೇಳಿದರು.
ಪಿಎಸ್‌ಬಿಗಳ ಕಳಪೆ ಸಾಲ ರೂ. 2011-2012ರಲ್ಲಿ 9,190 ಕೋಟಿ ರೂ. ದಿಂದ 2013-2014ರಲ್ಲಿ 2.16 ಲಕ್ಷ ಕೋಟಿ ರೂ ಏರಿತು ಎಂದು ಆರ್‌ಬಿಐ ತಿಳಿಸಿದೆ.