ನವದೆಹಲಿ:  ಸಾಂಕ್ರಾಮಿಕ ರೋಗದ ಎರಡನೇ ಅಲೆ ಇನ್ನೂ ಮುಗಿದಿಲ್ಲ, ಆದ್ದರಿಂದ ಎಲ್ಲ ಪ್ರೋಟೋಕಾಲ್ ಗಳನ್ನು ಪಾಲಿಸುವುದು ಮತ್ತು ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕು ಕೇಂದ್ರ ಸರ್ಕಾರವು ಸೂಚಿಸಿದೆ.


COMMERCIAL BREAK
SCROLL TO CONTINUE READING

ಸಾಂಕ್ರಾಮಿಕ ಪರಿಸ್ಥಿತಿ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಜನರು ತಮ್ಮ ರಕ್ಷಣೆಯನ್ನು ಕಡಿತಗೊಳಿಸಬಾರದು ಎಂದು ಹೇಳಿದರು.


ಇದನ್ನೂ ಓದಿ - Foreigner Vaccine: ಭಾರತದಲ್ಲಿ ಎಲ್ಲಾ ವಿದೇಶಿ ಲಸಿಕೆಗಳಿಗೆ ಅನುಮತಿ ನೀಡಲು ಮುಂದಾದ ಕೇಂದ್ರ ಸರ್ಕಾರ


ಜೂನ್ 23 ರಿಂದ 29 ರವರೆಗಿನ ವಾರದಲ್ಲಿ ಕನಿಷ್ಠ 71 ಜಿಲ್ಲೆಗಳಲ್ಲಿ ಕೊರೊನಾ (Coronavirus) ಕೇಸ್ ಪಾಸಿಟಿವಿಟಿ ದರವು ಶೇಕಡಾ 10 ಕ್ಕಿಂತ ಹೆಚ್ಚಾಗಿದೆ ಎಂದು ವರದಿ ಮಾಡಿದೆ, ಕೊರೊನಾದ ಎರಡನೇ ಅಲೆಯು ಮುಗಿದಿಲ್ಲ ಎಂದು ಸರ್ಕಾರ ಹೇಳಿದೆ. ಸದ್ಯ ವ್ಯಾಕ್ಸಿನೇಷನ್ ಚಾಲನೆಯಲ್ಲಿ, ಜೂನ್ 21 ರಿಂದ ಭಾರತವು ಪ್ರತಿದಿನ ಸರಾಸರಿ 50 ಲಕ್ಷ ವ್ಯಕ್ತಿಗಳಿಗೆ ಲಸಿಕೆ ನೀಡುತ್ತಿದೆ ಎಂದು ಸರ್ಕಾರ ಹೇಳಿದೆ, ಇದು ಪ್ರತಿದಿನ ನಾರ್ವೆಯ ಇಡೀ ಜನಸಂಖ್ಯೆಯ ಸರಿ ಸಮನಾಗಿದೆ.


ಇದನ್ನೂ ಓದಿ - WHO Chief: ವೇಗವಾಗಿ ಹರಡುತ್ತಿರುವ 'ಕೊರೋನಾ' ಕಾರಣಗಳನ್ನು ವಿವರಿಸಿದ WHO ಮುಖ್ಯಸ್ಥ! 


ಜನವರಿ 16 ರಂದು ಡ್ರೈವ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 34 ಕೋಟಿ ಜನರಿಗೆ ಲಸಿಕೆಯನ್ನು ವಿತರಿಸಲಾಗಿದೆ, ಇದು ಅಮೆರಿಕಾದ ಜನಸಂಖ್ಯೆ ಸರಿಸಮಾನಾಗಿದೆ ಎಂದು ಸರ್ಕಾರ ತಿಳಿಸಿದೆ.ದೇಶದಲ್ಲಿ ಸುಮಾರು ಶೇ 80 ರಷ್ಟು ಆರೋಗ್ಯ ಕಾರ್ಯಕರ್ತರು ಮತ್ತು ಶೇ 90 ರಷ್ಟು ಮುಂಚೂಣಿ ಕಾರ್ಮಿಕರಿಗೆ ಎರಡೂ ಪ್ರಮಾಣದಲ್ಲಿ COVID-19 ಲಸಿಕೆ ನೀಡಲಾಗಿದೆ ಎಂದು ಅದು ಹೇಳಿದೆ.


ಇದನ್ನೂ ಓದಿ: Good News! ಮಕ್ಕಳ ಮೇಲೆ ಕೊರೊನಾ ಮೂರನೇ ಅಲೆ ಪ್ರಭಾವ ಬೀರುವುದಿಲ್ಲ, ಕಾರಣ ಹೇಳಿದೆ ಆರೋಗ್ಯ ಸಚಿವಾಲಯ


ಭಾರತವು ಒಂದೇ ದಿನದಲ್ಲಿ 46,617 ಹೊಸ ಕರೋನವೈರಸ್  ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 3,04,58,251 ಕ್ಕೆ ತಲುಪಿದೆ, ಆದರೆ ರಾಷ್ಟ್ರೀಯ ಚೇತರಿಕೆ ಪ್ರಮಾಣವು ಶೇಕಡಾ 97 ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಶುಕ್ರವಾರ ನವೀಕರಿಸಿದೆ.


COVID-19 ರ ಸಾವಿನ ಸಂಖ್ಯೆ 4,00,312 ಕ್ಕೆ ಏರಿದರೆ, 853 ದೈನಂದಿನ ಸಾವುಗಳು ಸಂಭವಿಸಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.