ನವದೆಹಲಿ: ಲೋಡ್ ಶೆಡ್ಡಿಂಗ್‌ಗಳ ಸಂದರ್ಭದಲ್ಲಿ  ಒನ್ ನೇಷನ್ ಒನ್ ಗ್ರಿಡ್  ಮತ್ತು ಗ್ರಾಹಕರಿಗೆ ನಷ್ಟವನ್ನು ನೀಡುವುದು ಕೇಂದ್ರದ ಉದ್ದೇಶವಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಭಾನುವಾರದಂದು ಹೇಳಿದರು.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಮ್ಮ  ಬಜೆಟ್ ಭಾಷಣದಲ್ಲಿ ಒನ್ ನೇಷನ್ ಒನ್ ಗ್ರಿಡ್ ಉದ್ದೇಶವನ್ನು ಸಾಧಿಸಲು ಸರ್ಕಾರವು ಶೀಘ್ರದಲ್ಲೇ ರಚನಾತ್ಮಕ ಸುಧಾರಣೆಗನ್ನು ತರಲಿದೆ ಎಂದು ಪ್ರಸ್ತಾಪಿಸಿದ್ದರು. ಈಗ ಈ ವಿಚಾರವಾಗಿ ಮಾತನಾಡಿದ ಕೇಂದ್ರ ವಿದ್ಯುತ್  ಸಚಿವರು ಲೋಡ್ ಶೆಡ್ಡಿಂಗ್ಗಳು ಸಂಭವಿಸಿದಲ್ಲಿ ಸರ್ಕಾರವು ಗ್ರಾಹಕರಿಗೆ ನಷ್ಟವನ್ನು ನೀಡುತ್ತದೆ ಎಂದು ಹೇಳಿದರು.


ಮುಂದಿನ ಕೆಲವು ದಿನಗಳಲ್ಲಿ ಸಚಿವಾಲಯವು ವಿದ್ಯುತ್ ಸುಂಕ ನೀತಿಗಾಗಿ ಕೇಂದ್ರ ಸಚಿವ ಸಂಪುಟದ ಅನುಮತಿಯನ್ನು ಕೋರುತ್ತದೆ, ಇದು ತಾಂತ್ರಿಕ ದೋಷಗಳು ಅಥವಾ ನೈಸರ್ಗಿಕ ವಿಪತ್ತುಗಳು ಹೊರತುಪಡಿಸಿ ಅನಿರ್ದಿಷ್ಟ ವಿದ್ಯುತ್ ಕಡಿತಕ್ಕೆ ದಂಡವನ್ನು ನೀಡುತ್ತದೆ ಎಂದು ಸಿಂಗ್ ಹೇಳಿದ್ದಾರೆ.