ದ್ವಿಗುಣಗೊಂಡ ಸರ್ಕಾರಿ ತೈಲ ಕಂಪನಿಯ ಲಾಭ
ಒಂದೆಡೆ, ಗಗನಕ್ಕೇರುತ್ತಿರುವ ಪೆಟ್ರೋಲ್-ಡೀಸಲ್ ಬೆಲೆಯಿಂದಾಗಿ ಜನಸಾಮಾನ್ಯರು ಬೇಸತ್ತಿದ್ದಾರೆ. ಮತ್ತೊಂದೆಡೆ ಸರ್ಕಾರದ ತೈಲ ಕಂಪೆನಿಗಳ ಲಾಭ ಮಾತ್ರ ವೇಗವಾಗಿ ಹೆಚ್ಚುತ್ತಿದೆ.
ನವದೆಹಲಿ: ಒಂದೆಡೆ, ಗಗನಕ್ಕೇರುತ್ತಿರುವ ಪೆಟ್ರೋಲ್-ಡೀಸಲ್ ಬೆಲೆಯಿಂದಾಗಿ ಜನಸಾಮಾನ್ಯರು ಬೇಸತ್ತಿದ್ದಾರೆ. ಮತ್ತೊಂದೆಡೆ ಸರ್ಕಾರದ ತೈಲ ಕಂಪೆನಿಗಳ ಲಾಭ ಮಾತ್ರ ವೇಗವಾಗಿ ಹೆಚ್ಚುತ್ತಿದೆ. ಹೌದು, ಸರ್ಕಾರದ ಅತಿದೊಡ್ಡ ತೈಲ ಕಂಪನಿ 'ಇಂಡಿಯನ್ ಆಯಿಲ್ ಕಾರ್ಪೊರೇಶನ್' (ಐಓಸಿ) ಮಂಗಳವಾರ ಬಿಡುಗಡೆ ಮಾಡಿದ ಮೂರನೇ ತ್ರೈಮಾಸಿಕ(ಅಕ್ಟೋಬರ್-ಡಿಸೆಂಬರ್ 2017) ವರದಿಯಲ್ಲಿ ಕಂಪನಿಯ ಲಾಭ ದ್ವಿಗುಣಗೊಂಡಿದೆ ಎಂದು ತಿಳಿದುಬಂದಿದೆ. ಕಳೆದ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯು 3,994.91 ಕೋಟಿ ರೂ. ಲಾಭಗಳಿಸಿತ್ತು. ಆದರೆ, ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭ 7,883.22 ಕೋಟಿ ರೂ. ಎಂದು ವರದಿ ತಿಳಿಸಿದೆ.
ತೈಲ ಮಾರ್ಕೆಟಿಂಗ್ ಕಂಪೆನಿಯ ಬೆಳವಣಿಗೆಯು (OMC) ತ್ರೈಮಾಸಿಕದಲ್ಲಿ ಪರಿಷ್ಕೃತ ಹಂತದಲ್ಲಿ ತೀವ್ರ ಏರಿಕೆ ಕಂಡಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದರ ಲಾಭ 3,696 ಕೋಟಿ ರೂ. ಇಟ್ಟು. ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ಗಳ ಸಭೆಯ ನಂತರ ಸ್ಟಾಕ್ ಮಾರುಕಟ್ಟೆಯಲ್ಲಿ ದಾಖಲಾದ ನಿಯಂತ್ರಕ ವರದಿಯಲ್ಲಿ ಕಂಪೆನಿಯ ಒಟ್ಟು ಆದಾಯವು 1,30,865 ಕೋಟಿ ರೂ. ಹೆಚ್ಚಳವಾಗಿದೆ ಎಂದು ಕಂಪನಿ ತಿಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1,15,630 ಕೋಟಿ ರೂ. ಹೆಚ್ಚವಾಗಿತ್ತು ಎಂಬುದು ಗಮನಾರ್ಹ.
ಪೆಟ್ರೋಲ್-ಡೀಸೆಲ್ ಬೆಲೆ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇತರ ನಗರಗಳಲ್ಲಿ ಸ್ಥಿರವಾಗಿ ಏರಿಕೆಯಾಗಿದೆ...
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇತರ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರಗಳು ಸ್ಥಿರವಾಗಿ ಹೆಚ್ಚಳ ಕಂಡಿವೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಅಂಕಿ ಅಂಶಗಳ ಪ್ರಕಾರ, ಕಳೆದ ಫೆಬ್ರವರಿ 25 ರಂದು ರಾಷ್ಟ್ರೀಯ ರಾಜಧಾನಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 72.49 ರೂ. ಏರಿಕೆಯಾಗಿದೆ. ಇದು ಮೂರು ವರ್ಷಗಳಲ್ಲಿ ಅತ್ಯಧಿಕ ಬೆಲೆ ಏರಿಕೆಯಾಗಿದೆ. ಆಗಸ್ಟ್ 2014 ರಲ್ಲಿ ಪೆಟ್ರೋಲ್ ದರವು ಪ್ರತಿ ಲೀಟರಿಗೆ 72.51 ರೂ. ಆಗಿತ್ತು."
ಅದೇ ದಿನ ಕೋಲ್ಕತಾ, ಮುಂಬೈ ಮತ್ತು ಚೆನ್ನೈಗಳಲ್ಲಿ ಪೆಟ್ರೋಲ್ ಬೆಲೆ 75.19 ರೂ., 80.60 ರೂ. ಮತ್ತು 75.18 ರೂ. ಮೂರು ನಗರಗಳು ಅತ್ಯಧಿಕ ಬೆಲೆಗಳನ್ನು ಹೊಂದಿವೆ. ಅದೇ ರೀತಿಯಾಗಿ, ಕಳೆದ ವಾರ ಡೀಸೆಲ್ ಬೆಲೆ ಕೂಡ ದಾಖಲೆಯ ಮಟ್ಟದಲ್ಲಿ ಹೆಚ್ಚಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ 63.53 ರೂ. ಕೊಲ್ಕತ್ತಾದಲ್ಲಿ 66.20 ರೂ., ಮುಂಬೈನಲ್ಲಿ ರೂ 67.65 ಮತ್ತು ಚೆನ್ನೈನಲ್ಲಿ 67.00 ರೂ. ಆಗಿದೆ.