Cronavirus Update : ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು COVID-19 ಪ್ರಕರಣಗಳು ದಾಖಲು
ನಿನ್ನೆ ಒಂದೇ ದಿನಕ್ಕೆ ಮಹಾರಾಷ್ಟ್ರದಲ್ಲಿ 49,447 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ. ಪುಣೆಯಲ್ಲಿಯು ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, 10,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ( Maharashtra) ದಿನದಿಂದ ದಿನಕ್ಕೆ ಕರೋನ ಪ್ರಕರಣಗಳು ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ನಿನ್ನೆ ಅಂದರೆ ಶನಿವಾರ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನಕ್ಕೆ ರಾಜ್ಯದಲ್ಲಿ 49,447 ಹೊಸ ಕರೋನಾ (Coronavirus) ಪ್ರಕರಣಗಳು ವರದಿಯಾಗಿವೆ. 277 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿನ ಸಂಖ್ಯೆ 29,53,523 ಕ್ಕೆ ಏರಿದೆ.
ಇದು ಈ ವರ್ಷ ರಾಜ್ಯದಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣವಾಗಿದೆ. ಪುಣೆಯಲ್ಲಿಯೂ (Pune) ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, 10,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಪುಣೆಯಲ್ಲಿ ವರದಿಯಾದ ಸೋಂಕಿತರ ಸಂಖ್ಯೆಯಲ್ಲಿ ಇದುವೇ ಅತ್ಯಧಿಕ ಎನ್ನಲಾಗಿದೆ.
ಇದನ್ನೂಓದಿ : ಪರೀಕ್ಷೆಗಳನ್ನು ರದ್ದುಪಡಿಸಿದ ಮಹಾರಾಷ್ಟ್ರ,1-8 ನೇ ತರಗತಿ ವಿದ್ಯಾರ್ಥಿಗಳಿಗೆ ಬಡ್ತಿ
ಮಹಾರಾಷ್ಟ್ರದಲ್ಲಿ ( Maharashtra) ನಾಲ್ಕು ಲಕ್ಷಕ್ಕೂ ಹೆಚ್ಚು (4,01,172) ಸಕ್ರಿಯ ಪ್ರಕರಣಗಳು ಇದ್ದು, ಚೇತರಿಕೆ ಪ್ರಮಾಣವು ಶೇಕಡಾ 84.49 ಆಗಿದೆ. ಒಟ್ಟು 37,821 ರೋಗಿಗಳನ್ನು ಆಸ್ಪತ್ರೆಯಿಂದ (Hospital) ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಇಲ್ಲಿವರೆಗೆ ಒಟ್ಟು ಚೇತರಿಕೆ ಕಂಡವರ ಸಂಖ್ಯೆ ಕೂಡಾ 24,95,315 ಕ್ಕೆ ತಲುಪಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಭಾರತದ 10 ಜಿಲ್ಲೆಗಳಾದ ಪುಣೆ, ಮುಂಬೈ, ನಾಗ್ಪುರ, ಥಾಣೆ, ನಾಸಿಕ್, ಬೆಂಗಳೂರು ನಗರ (Bengaluru), ಔರಂಗಾಬಾದ್, ದೆಹಲಿ, ಅಹ್ಮದ್‌ನಗರ ಮತ್ತು ನಾಂದೇಡ್ ನಲ್ಲಿ ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಕರೋನ (Coronavirus) ಪ್ರಕರಣಗಳು ಇವೆ.
ಮತ್ತೊಂದೆಡೆ, ಕರೋನ ಪ್ರಕರಣಗಳ ವಿಚಾರದಲ್ಲಿ ದೇಶದ ಆರ್ಥಿಕ ರಾಜಧಾನಿ ಮುಂಬೈ (Mumbai) ತನ್ನದೇ ದಾಖಲೆಯನ್ನು ಮುರಿದಿದೆ. ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಇದನ್ನೂಓದಿ : O+ve ಬ್ಲಡ್ ಗ್ರೂಪ್ ಇರುವವರಿಗೆ ಕೊರೊನಾ ಸೋಂಕು ಹಾನಿ ಮಾಡುವುದಿಲ್ಲವೇ? ತಜ್ಞರ ಅಭಿಮತ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.