ಬಜೆಟ್ನಲ್ಲಿ ವೈದ್ಯಕೀಯ ಸಲಕರಣೆಗಳ ಆಮದು ಸುಂಕ ಹೆಚ್ಚಳ ಸಾಧ್ಯತೆ
ವೈದ್ಯಕೀಯ ಸಲಕರಣೆಗಳ ಮೇಲೆ ಆಮದು ಸುಂಕವನ್ನು ಶೇ.5-15ರಷ್ಟು ಹೆಚ್ಚಿಸಲು ಬಜೆಟ್ ಪೂರ್ವ ಸಭೆಯಲ್ಲಿ ಸರ್ಕಾರ ಕೋರಿದೆ.
ನವದೆಹಲಿ: ಈ ಬಾರಿಯ ಬಜೆಟ್ನಲ್ಲಿ ಕೆಲವು ವೈದ್ಯಕೀಯ ಸಲಕರಣೆಗಳ ಆಮದು ಸುಂಕ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದಾಗಿ ದೇಶೀಯ ತಯಾರಕರನ್ನು ಉತ್ತೇಜಿಸಬಹುದಾಗಿದೆ. ಅಲ್ಲದೆ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ 'ಮೇಕ್ ಇನ್ ಇಂಡಿಯಾ'ಗೂ ಉತ್ತೇಜನ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಅಸೋಸಿಯೇಷನ್ ಆಫ್ ಇಂಡಿಯನ್ ಮೆಡಿಕಲ್ ಎಕ್ವಿಪ್ಮೆಂಟ್ ಇಂಡಸ್ಟ್ರಿ ಸೇರಿದಂತೆ, ದೇಶೀಯ ಉದ್ಯಮವು ವೈದ್ಯಕೀಯ ಸಾಧನಗಳ ಆಮದು ಸುಂಕವನ್ನು ಶೇಕಡಾ 5-15 ರಷ್ಟು ಹೆಚ್ಚಿಸುವಂತೆ ಬಜೆಟ್ ಪೂರ್ವ ಸಭೆಯಲ್ಲಿ ಮನವಿ ಮಾಡಿವೆ. ಇದರ ಪ್ರಸ್ತುತ ವ್ಯಾಪ್ತಿಯು 0-7.5 ರಷ್ಟಿದೆ.