ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಪತ್ನಿಗೆ ಐಟಿ ನೋಟಿಸ್
ಚುನಾವಣಾ ಆಯುಕ್ತ ಅಶೋಕ್ ಲವಾಸಾ ಪತ್ನಿಗೆ ಈಗ ಐಟಿ ಇಲಾಖೆ ನೋಟಿಸ್ ನೀಡಿದೆ.
ನವದೆಹಲಿ: ಚುನಾವಣಾ ಆಯುಕ್ತ ಅಶೋಕ್ ಲವಾಸಾ ಪತ್ನಿಗೆ ಈಗ ಐಟಿ ಇಲಾಖೆ ನೋಟಿಸ್ ನೀಡಿದೆ.
ಮಾಜಿ ಬ್ಯಾಂಕರ್ ಆಗಿದ್ದ ಅಶೋಕ್ ಲವಾಸಾ ಪತ್ನಿ ನಾವೆಲ್ ಸಿಂಘಾಲ್ ಅವರು 2005 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ರಾಜೀನಾಮೆ ನೀಡಿದ ನಂತರ ಹಲವಾರು ಕಂಪನಿಗಳ ನಿರ್ದೇಶಕರಾದರು. ಈ ಹಿನ್ನಲೆಯಲ್ಲಿ ಈಗ ಐಟಿ ನಾವೆಲ್ ಸಿಂಘಾಲ್ ಅವರಿಗೆ ನೋಟಿಸ್ ನೀಡಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಕಳೆದ ಕೆಲವು ತಿಂಗಳುಗಳಿಂದ ಐಟಿ ಇಲಾಖೆ ಈ ಪ್ರಕರಣದ ತನಿಖೆ ನಡೆಸುತ್ತಿದೆ. ನಾವೆಲ್ ಸಿಂಘಾಲ್ ಅವರ ತೆರಿಗೆ ಮರು ಪಾವತಿಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಐಟಿ ಇಲಾಖೆ ಸ್ಪಷ್ಟೀಕರಣವನ್ನು ಕೋರಿ ನೋಟಿಸ್ ಕಳುಹಿಸಿದೆ.
ಈ ಹಿಂದೆ ನಾವೆಲ್ ಸಿಂಘಾಲ್ ಲವಾಸಾ ಅವರ ಆದಾಯವು ಮೌಲ್ಯಮಾಪನದಿಂದ ತಪ್ಪಿಸಿಕೊಂಡಿದೆಯೆ ಅಥವಾ ತೆರಿಗೆ ಅಧಿಕಾರಿಗಳಿಂದ ಏನನ್ನಾದರೂ ಮರೆಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಇಲಾಖೆ ಐಟಿಆರ್ ಗಳನ್ನು ನೋಡುತ್ತಿದೆ ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ. ಅವರ ವಿರುದ್ಧ ತೆರಿಗೆ ವಂಚನೆ ಮತ್ತು ಅನೇಕ ಸಂಸ್ಥೆಗಳಲ್ಲಿ ನಿರ್ದೇಶಕರ ಹುದ್ದೆಯನ್ನು ಹೊಂದಿರುವ ತನಿಖೆ 2015-17ರ ನಡುವಿನ ಅವಧಿಗೆ ಸಂಬಂಧಿಸಿದೆ ಎನ್ನುತ್ತಿವೆ ಮೂಲಗಳು.
ಅಶೋಕ್ ಲವಾಸಾ ಅವರು ಹಿಂದಿನ ವರ್ಷದಲ್ಲಿ ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ 2018 ರ ಜನವರಿ 23 ರಂದು ಚುನಾವಣಾ ಆಯುಕ್ತರಾಗಿ ನೇಮಕಗೊಂಡರು. 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಶೋಕ್ ಲವಾಸಾ ಅವರು ಚುನಾವಣಾ ಆಯೋಗದ ಕ್ಲೀನ್ ಚಿಟ್‌ಗಳ ಬಗ್ಗೆ ಪಿಎಂ ಮೋದಿ ಮತ್ತು ಅಮಿತ್ ಷಾ ಅವರ ನಾಲ್ಕು ಭಾಷಣಗಳಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು.