ನವದೆಹಲಿ: ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ್ ಪನ್ಸಾರೆ ಮತ್ತು ಪತ್ರಕರ್ತೆ  ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬಂಧಿಸಲ್ಪಟ್ಟ ವ್ಯಕ್ತಿ ಇದರ ಹಿಂದಿನ ಸಿದ್ಧತೆಗಳು ಮತ್ತು ಪಿತೂರಿಗಳ ಬಗ್ಗೆ ನಿಖರವಾದ ವಿವರ ನೀಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.   


COMMERCIAL BREAK
SCROLL TO CONTINUE READING

ಗೌರಿ ಲಂಕೇಶ್ ಪ್ರಕರಣದಲ್ಲಿ ಆರೋಪಿಯಾಗಿರುವ  ಶರದ್ ಕಲಾಸ್ಕರ್, ಈ ಮೇಲಿನ ಎಲ್ಲಾ ಕೊಲೆಗಳಲ್ಲಿ ಸಂಚು ರೂಪಿಸಿದ್ದ ಬಲಪಂಥೀಯ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದಾನೆಂದು ಹೇಳಿಕೊಂಡಿದ್ದಾನೆ. ಕರ್ನಾಟಕ ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆ ಪತ್ರದಲ್ಲಿ ಆತ, ನರೇಂದ್ರ ದಾಬೊಲ್ಕರ್‌ ರನ್ನು ಕೊಂದ ಶೂಟರ್ ಎಂದು ಹೇಳಿಕೊಂಡಿದ್ದಾನೆ. ಪತ್ರದಲ್ಲಿ ಹತ್ಯೆಗೋಸ್ಕರ ಕೈಗೊಂಡಿದ್ದ ಯೋಜನೆ ಹಾಗೂ ಸಾರಿಗೆ ವ್ಯವಸ್ಥೆಯ ಜವಾಬ್ದಾರಿಯನ್ನು ತನಗೆ ನೀಡಿದ್ದಾಗಿ ಕಲಾಸ್ಕರ್ ಹೇಳಿಕೊಂಡಿದ್ದಾನೆ.


ಹಿಂದೂ ಧರ್ಮದ ವಿರುದ್ಧವಾಗಿ ಕಾರ್ಯನಿರ್ವಹಿಸುವವರ ಪಟ್ಟಿಯನ್ನು ಅಗಸ್ಟ್ 2016 ರಲ್ಲಿ ಬೆಳಗಾವಿಯಲ್ಲಿ ಸಭೆ ನಡೆಸಿ ಸಿದ್ದಪಡಿಸಲಾಗಿತ್ತು. ಆ ಸಭೆಯಲ್ಲಿ, ಗೌರಿ ಲಂಕೇಶ್ ಅವರ ಹೆಸರು ಬಂದಿತು. ಆಗ ಅವರನ್ನು ಕೊಲ್ಲಬೇಕು ಎಂದು ನಿರ್ಧರಿಸಲಾಯಿತು ಎಂದು ಕಲಾಸ್ಕರ್ ಹೇಳಿದ್ದಾನೆ. ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಮತ್ತು ಪಿತೂರಿಯಲ್ಲಿ ಸಕ್ರಿಯ ಪಾತ್ರ ವಹಿಸಿರುವ ಭಾರತ್ ಕುರ್ನೆ ಅವರ ಮನೆಯಲ್ಲಿ ಹತ್ಯೆಗೈಯುವ ಯೋಜನೆಯನ್ನು ರೂಪಿಸಲಾಗಿತ್ತು ಎನ್ನಲಾಗಿದೆ. ಸಭೆಯ ಮೊದಲ ದಿನ ಅಮೋಲ್ ಕಾಲೇ ಈ ಕಾರ್ಯದಲ್ಲಿ ಭಾಗವಹಿಸುವವರಿಗೆ ವಿವಿಧ ಜವಾಬ್ದಾರಿಗಳನ್ನು ನೀಡಿದರು. ಇನ್ನು ಹತ್ಯೆ ಕಾರ್ಯವನ್ನು ಕೋಡ್ ಮೂಲಕ ಸಿದ್ಧಪಡಿಸಲಾಯಿತು ಎನ್ನಲಾಗಿದೆ.  


ಈ ಯೋಜನೆಯ ಕೆಲವು ದಿನಗಳ ನಂತರ ಶರದ್ ಕಲಾಸ್ಕರ್, ಪರಶುರಾಮ್ ವಾಘಮರೆ ಅಲಿಯಾಸ್ ಬಿಲ್ಡರ್ ಮತ್ತು ಇನ್ನೊಬ್ಬ ಆರೋಪಿ ಮಿಥುನ್ ಜೊತೆಗೆ ಭಾರತ್ ಕುರ್ನೆ ಅವರು ಜೊತೆಯಾಗಿ ಸಮೀಪದ ಬೆಟ್ಟಗಳಲ್ಲಿ ಅಭ್ಯಾಸ ಮಾಡಿದ್ದಾರೆ ಎನ್ನಲಾಗಿದೆ. ಈಗ ಗೌರಿ ಲಂಕೇಶ್ ಹತ್ಯೆಯಲ್ಲಿ ಪಿತೂರಿ ನಡೆಸಿದ ಆರೋಪದಲ್ಲಿ ಅಮೋಲ್ ಕೇಲ್ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ.ಮಹಾರಾಷ್ಟ್ರದ ನಲ್ಲಸೋಪರಾದಲ್ಲಿ ಶಸ್ತ್ರಾಸ್ತ್ರ ಸಾಗಣೆಗೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್‌ನಲ್ಲಿ ಶರದ್ ಕಲಾಸ್ಕರ್ ಅವರನ್ನು ಬಂಧಿಸಲಾಗಿತ್ತು. ಈ ತನಿಖೆಯ ವೇಳೆ ವಿಚಾರವಾದಿಗಳ ಹತ್ಯೆ ಇದ್ದ ಸಂಪರ್ಕ ಬೆಳಕಿಗೆ ಬಂದಿತ್ತು ಎನ್ನಲಾಗಿದೆ.