ನವದೆಹಲಿ: ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಲೇಹ್ ಪ್ರದೇಶವನ್ನು ಲಡಾಖ್ ಭಾಗವಾಗಿ ತೋರಿಸದೆ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿ ತೋರಿಸಿದ ಟ್ವಿಟ್ಟರ್ ವಿರುದ್ಧ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದ್ದು, ಐದು ದಿನಗಳಲ್ಲಿ ವಿವರಣೆಯನ್ನು ಕೋರಿದೆ.


COMMERCIAL BREAK
SCROLL TO CONTINUE READING

ಟ್ವಿಟ್ಟರ್ನ ಜಾಗತಿಕ ಉಪಾಧ್ಯಕ್ಷರಿಗೆ ಈ ನೋಟಿಸ್ ಕಳುಹಿಸಲಾಗಿದೆ ಎಂದು ಈ ಬೆಳವಣಿಗೆ ಬಗ್ಗೆ ಪರಿಚಯವಿರುವ ಜನರು ತಿಳಿಸಿದ್ದಾರೆ. ಲಡಾಖ್ ಅನ್ನು ಭಾರತದ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ "ಭಾರತದ ಸಾರ್ವಭೌಮ ಸಂಸತ್ತಿನ ಇಚ್ಚಾ ಶಕ್ತಿಶಕ್ತಿಯನ್ನು ಹಾಳುಮಾಡುವ ಉದ್ದೇಶಪೂರ್ವಕ ಪ್ರಯತ್ನ" ಎಂದು ಹೇಳಿದೆ.


ಲೇಹ್ ಅನ್ನು ಜಮ್ಮು ಮತ್ತು ಕಾಶ್ಮೀರದ ಭಾಗವಾಗಿ ತೋರಿಸುವುದು ಟ್ವಿಟರ್ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಸಚಿವಾಲಯ ತನ್ನ ಟ್ವಿಟ್ಟರ್ನ ಉಪಾಧ್ಯಕ್ಷರಿಗೆ ತಿಳಿಸಿದೆ.ಇನ್ನೊಂದೆಡೆಗೆ ಟ್ವಿಟ್ಟರ್ ರ ವಕ್ತಾರರು ಪತ್ರಕ್ಕೆ ಸ್ಪಂದಿಸಿದ್ದು ಮತ್ತು ಸರ್ಕಾರದೊಂದಿಗೆ ಸಮಗ್ರ ನವೀಕರಣವನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.


ಈ ದೇಶದಲ್ಲಿ Facebook, Twitter ವಿರುದ್ಧ ಕಾನೂನು ಕ್ರಮ, ಇದೇ ಅದಕ್ಕೆ ಕಾರಣ


ಟ್ವಿಟರ್ ಸಾರ್ವಜನಿಕ ಸಂಭಾಷಣೆಯನ್ನು ಪೂರೈಸಲು ಭಾರತ ಸರ್ಕಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ ಸಹಭಾಗಿತ್ವಕ್ಕೆ ಬದ್ಧವಾಗಿದೆ. ನಾವು ಪತ್ರಕ್ಕೆ ಸರಿಯಾಗಿ ಸ್ಪಂದಿಸಿದ್ದೇವೆ ಮತ್ತು ನಮ್ಮ ಪತ್ರವ್ಯವಹಾರದ ಭಾಗವಾಗಿ, ಜಿಯೋ-ಟ್ಯಾಗ್ ಸಮಸ್ಯೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳೊಂದಿಗೆ ಸಮಗ್ರ ನವೀಕರಣವನ್ನು ಹಂಚಿಕೊಂಡಿದ್ದೇವೆ ”ಎಂದು ವಕ್ತಾರರು ತಿಳಿಸಿದ್ದಾರೆ.


ಈ ಹಿಂದೆ, ಟ್ವಿಟರ್ ಲೇಹ್ ಅನ್ನು ಚೀನಾದ ಭಾಗವಾಗಿ ತೋರಿಸಿದೆ, ನಂತರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಟ್ವಿಟರ್ ಸಿಇಒಗೆ ಆಕ್ಷೇಪಣೆ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಟ್ವಿಟರ್ ದೋಷವನ್ನು ಸರಿಪಡಿಸಿದೆ. ಆದರೆ ಲೇಹ್ ಅನ್ನು ಲಡಾಖ್ ನ ಕೇಂದ್ರಾಡಳಿತ ಪ್ರದೇಶದ ಭಾಗವಾಗಿ ತೋರಿಸಲು ಇದು ಇನ್ನೂ ನಕ್ಷೆಯನ್ನು ಸರಿಪಡಿಸಿಲ್ಲ ಎಂದು ಸಚಿವಾಲಯ ತಿಳಿಸಿದೆ.


ಇತ್ತೀಚೆಗೆ, ಭಾರತದ ಗೌಪ್ಯತೆ ಮಸೂದೆಯನ್ನು ಪರಿಶೀಲಿಸುವ ಸಂಸದೀಯ ಸಮಿತಿಯು ಲಡಾಖ್ ಅನ್ನು ಚೀನಾದ ಭಾಗವಾಗಿ ತೋರಿಸುವುದರ ಕುರಿತು ಟ್ವಿಟರ್‌ನ ವಿವರಣೆಯು ಅಸಮರ್ಪಕವಾಗಿದೆ ಎಂದು ಗಮನಿಸಿದೆ. ಈ ಕೃತ್ಯವು ಏಳು ವರ್ಷಗಳ ಜೈಲು ಶಿಕ್ಷೆಯೊಂದಿಗೆ ಕ್ರಿಮಿನಲ್ ಅಪರಾಧಕ್ಕೆ ಕಾರಣವಾಗಿದೆ.