ನವದೆಹಲಿ: ಇತ್ತೀಚೆಗಷ್ಟೇ ಭಾರತ ಸರ್ಕಾರ ಟಿಕ್ ಟಾಕ್ ಸೇರಿದಂತೆ ಚೀನಾದಿಂದ 59 ಆ್ಯಪ್‌ಗಳನ್ನು ನಿಷೇಧಿಸಿದೆ. ಹೀಗಾಗಿ ಇದೀಗ ವಂಚಕರು ಟಿಕ್ ಟಾಕ್ ನ ಜನಪ್ರಿಯತೆಯ ಲಾಭವನ್ನು ಪಡೆಯಲು ಮುಂದಾಗಿದ್ದಾರೆ. ಹೌದು, ವಂಚಕರು ಇದೀಗ ಟಿಕ್ ತಾಕ್ ಹೆಸರಿನಲ್ಲಿ ಮಾಲ್‌ವೇರ್ ಕಳುಹಿಸುತ್ತಿದ್ದಾರೆ. ನಿಮ್ಮ ಕಂಪ್ಯೂಟರ್ ಗೆ ಹಾನಿ ತಲುಪಿಸುವ ಉದ್ದೇಶದಿಂದ ತಯಾರಿಸಲಾಗಿರುವ ಒಂದು ಸಾಫ್ಟ್ ವೇರ್ ಅನ್ನು ಮಾಲ್ವೇರ್ ಎನ್ನುತ್ತಾರೆ.. ಬಳಕೆದಾರರ ವೈಯಕ್ತಿಕ ಡೇಟಾವನ್ನು ಕದಿಯಲು ಹ್ಯಾಕರ್‌ಗಳು ಇದನ್ನು ಬಳಸುತ್ತಾರೆ.. ಟಿಕ್ ಟಾಕ್ ಇದೀಗ ಭಾರತದಲ್ಲಿ ಟಿಕ್ ಟಾಕ್ ಪ್ರೊ ಹೆಸರಿನಲ್ಲಿ  ಲಭ್ಯವಿದೆ ಎಂದು ಹೇಳಿಕೊಳ್ಳುವ ವಾಟ್ಸಾಪ್ ಅಥವಾ ಎಸ್ಎಂಎಸ್ ಸಂದೇಶ ನಿಮ್ಮ ಮೊಬೈಲ್ ಗೂ ಸಹ ಬಂದರೆ ತಕ್ಷಣ ಅದನ್ನು ನಿರ್ಲಕ್ಷಿಸಿ ಡಿಲೀಟ್ ಮಾಡಿ.


COMMERCIAL BREAK
SCROLL TO CONTINUE READING

ಅಧಿಕೃತ ಟಿಕೆಟ್‌ಟಾಪ್ ಅಪ್ಲಿಕೇಶನ್ ಭಾರತದಲ್ಲಿ ನಿಷೇಧಕ್ಕೆ ಒಳಗಾಗಿದೆ. ಈ ಹಿನ್ನೆಲೆ, ಸೈಬರ್ ಅಪರಾಧಿಗಳು ಎಸ್‌ಎಂಎಸ್ ಮತ್ತು ವಾಟ್ಸಾಪ್ ಸಂದೇಶ ಕಳುಹಿಸುವ ಮೂಲಕ ಮೂಲಕ ಟಿಕೆಟ್‌ಲಾಕ್ ಪ್ರೊ ಹೆಸರಿನ ಮಾಲ್‌ವೇರ್ ಅನ್ನು ವೇಗವಾಗಿ ಹರಡುತ್ತಿದ್ದಾರೆ. ಈ ಸಂದೇಶದಲ್ಲಿ "ಟಿಕ್ಟಾಕ್ ವೀಡಿಯೊಗಳನ್ನು ಮತ್ತೆ ಆನಂದಿಸಿ ಮತ್ತು ನೀವೂ ಕೂಡ ವಿಡಿಯೋ ತಯಾರಿಸಿ. ಟಿಕ್ ಟಾಕ್ ಇದೀಗ ಟಿಕ್ ಟಾಕ್ ಪ್ರೊ ರೂಪದಲ್ಲಿ ಲಭ್ಯವಿರಲಿದೆ. ಇದನ್ನು ಡೌನ್‌ಲೋಡ್ ಮಾಡಲು ಈ ಕೆಳಗೆ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ಕಿಸಿ." ಎಂದು ಬರೆದಿರುತ್ತದೆ. ಈ ಸಂದೇಶದ ಜೊತೆಗೆ ಟಿಕ್‌ಟಾಕ್ ಪ್ರೊ ಎಪಿಕೆ ಫೈಲ್ ಡೌನ್‌ಲೋಡ್ ಮಾಡಲು ಲಿಂಕ್ ವೊಂದನ್ನು ನೀಡಲಾಗುತ್ತದೆ.


ಸಂದೇಶದಲ್ಲಿ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ಕಿಸಿ ನೀವು apk ಫೈಲ್ ಡೌನ್ಲೋಡ್ ಮಾಡಿದಾಗ ಅಸಲಿ ಟಿಕ್ ಟಾಕ್ ಐಕಾನ್ ನಿಮಗೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ನಿಮಗೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿರುವ ಕ್ಯಾಮೆರಾ, ಇಮೇಜ್, ಗ್ಯಾಲರಿ ಹಾಗೂ ಇತರೆ ವಿಭಾಗಗಳಿಗೆ ಅಕ್ಸಸ್ ನೀಡಲು ಅನುಮತಿ ಕೇಳಲಾಗುತ್ತದೆ. ಒಂದು ವೇಳೆ ನೀವು ಅನುಮತಿ ನೀಡಿದ್ದೆ ಆದಲ್ಲಿ ಈ ಆಪ್ ನಿಮ್ಮ ಫೋನ್ ನಲ್ಲಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಅದು ನಿಮ್ಮ ಮೊಬೈಲ್ ನಲ್ಲಿ ಹಾಗೆಯೇ ಉಳಿದುಕೊಳ್ಳುತ್ತದೆ.[[{"fid":"190483","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]][[{"fid":"190484","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]][[{"fid":"190485","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"3":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"3"}}]]


ಈ ಆಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರದ ಕಾರಣ ನಿಮಗೆ ಇದರ apk ಫೈಲ್ ಡೌನ್ ಲೋಡ್ ಮಾಡಿಕೊಳ್ಳಲು ಹೇಳಲಾಗುತ್ತದೆ. ಹೀಗಾಗಿ ಇಂತಹ ಆಪ್ ಗಳು ಸುಲಭವಾಗಿ ಬಳಕೆದಾರರ ಮೊಬೈಲ್ ನಲ್ಲಿರುವ ಇತರೆ ಖ್ಯಾತ ಆಪ್ ಗಳ ಅಕೌಂಟ್ಸ್ ಗಳ ಬಳಕೆದಾರರ ಐಡಿ ಕದಿಯಲಾಗುತ್ತದೆ.


ಸೈಬರ್ ಸೆಕ್ಯೂರಿಟಿ ಸಂಸ್ಥೆಯಾಗಿರುವ ಇವಿನಾ, ಇತ್ತೀಚೆಗಷ್ಟೇ ಗೂಗಲ್ ಗೆ ಸುಮಾರು 25 ಆಪ್ ಗಳ ಕುರಿತು ಮಾಹಿತಿ ನೀಡಿತ್ತು. ಈ ಆಪ್ ಗಳು ಬಳಕೆದಾರರ ಫೇಸ್ ಬುಕ್ ಲಾಗಿನ್ ಡಿಟೇಲ್ಸ್ ಕದಿಯುತ್ತಿದ್ದವು. ಹೀಗಾಗಿ ಗೂಗಲ್ ಈ ಆಪ್ ಗಳನ್ನು ತನ್ನ ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದೆ.


ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕುವುದಕ್ಕೂ ಮೊದಲು ಈ 25 ಆಪ್ ಗಳನ್ನು 20 ಲಕ್ಷಕ್ಕೂ ಅಧಿಕ ಬಾರಿ ಡೌನ್ಲೋಡ್ ಮಾಡಿಕೊಳ್ಳಲಾಗಿದೆ. ಈ ಆಪ್ ಗಳು ಫೈಲ್ ಮ್ಯಾನೇಜರ್, ಫ್ಲ್ಯಾಶ್ ಲೈಟ್, ವಾಲ್ ಪೆಪೆರ್, ಸ್ಕ್ರೀನ್ ಶಾಟ್ ಎಡಿಟರ್ ಹಾಗೂ ಹವಾಮಾನ ಮಾಹಿತಿಗಳಂತಹ ಸೇವೆಗಳನ್ನು ಒದಗಿಸುತ್ತಿದ್ದವು. ಈ ಆಪ್ ಗಳಲ್ಲಿ ಮಾಲ್ವೇರ್ ಗಳಿದ್ದವು ಹಾಗೂ ಇವು ನಿಮ್ಮ ಫೇಸ್ ಬುಕ್ ಮಾಹಿತಿ ರೆಕಾರ್ಡ್ ಮಾಡುವಲ್ಲಿ ನಿರತವಾಗಿದ್ದವು ಎನ್ನಲಾಗಿದೆ. 


ತಜ್ಞರು ಹೇಳುವ ಪ್ರಕಾರ ಟಿಕ್ ಟಾಕ್ ನಂತಹ ಯಾವುದೇ apk ಫೈಲ್ ಡೌನ್ಲೋಡ್ ಮಾಡುವುದರಿಂದ ಬಳಕೆದಾರರು ದೂರ ಉಳಿಯಬೇಕು. ಸೈಬರ್ ಕಳ್ಳರು ಇವುಗಳ ಮೂಲಕ ಮಾಲ್ವೇರ್ ಕಳುಹಿಸುವ ಸಾಧ್ಯತೆ ಇದೆ.