ಅಲಿಗಢ: ಭಾರತವು ಕರೋನಾವೈರಸ್‌ನ ಎರಡನೇ ತರಂಗದ  (Coronavirus 2nd Wave) ವಿರುದ್ಧ ಹೋರಾಡುತ್ತಿದೆ. ಇದಲ್ಲದೆ ನಿರಂತರವಾಗಿ ಹೊಸ ರೂಪಾಂತರಗಳು ಹೊರಬರುತ್ತಿವೆ. ಈಗ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (Aligarh Muslim University) ಕೋವಿಡ್ -19 ರ ಹೊಸ ರೂಪಾಂತರದ ಬಗ್ಗೆ ಕಾಳಜಿ ಹೆಚ್ಚಾಗಿದೆ ಮತ್ತು ಮಾದರಿಗಳನ್ನು ಪರೀಕ್ಷಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ತಾರಿಕ್ ಮನ್ಸೂರ್ ಐಸಿಎಂಆರ್‌ಗೆ ಪತ್ರ ಕಳುಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಐಸಿಎಂಆರ್-ಪ್ರಮಾಣೀಕೃತ ಲ್ಯಾಬ್‌ಗಳು ಮಾದರಿಗಳನ್ನು ಸಂಗ್ರಹಿಸಿವೆ:
ಕಳೆದ ಕೆಲವು ದಿನಗಳಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (Aligarh Muslim University) ಬರೋಬ್ಬರಿ 26 ಪ್ರಾಧ್ಯಾಪಕರ ಸಾವಿನ ನಂತರ, ಎಎಂಯುನಲ್ಲಿರುವ ಐಸಿಎಂಆರ್-ಪ್ರಮಾಣೀಕೃತ ಲ್ಯಾಬ್ ಮಾದರಿಗಳನ್ನು ಸಂಗ್ರಹಿಸಿದೆ. ವಿಶ್ವವಿದ್ಯಾಲಯದ ವಿಸಿ ತಾರಿಕ್ ಮನ್ಸೂರ್, ಐಸಿಎಂಆರ್ (ICMR) ಡಿಜಿ ಪ್ರೊ. ಬಲರಾಮ್ ಭಾರ್ಗವ ಅವರಿಗೆ ಬರೆದ ಪತ್ರದಲ್ಲಿ, ಕೋವಿಡ್‌ನ ಹೊಸ ರೂಪಾಂತರವು ವಿಶ್ವವಿದ್ಯಾನಿಲಯದಲ್ಲಿ ಅಭಿವೃದ್ಧಿಗೊಂಡಿದೆಯೇ ಎಂದು ಕಂಡುಹಿಡಿಯಲು, ಕೋವಿಡ್ ಮಾದರಿಗಳ ಜೀನೋಮ್ ಅಧ್ಯಯನವನ್ನು ನಡೆಸಿ ಎಂದು ಮನವಿ ಮಾಡಿದ್ದಾರೆ.


ಇದನ್ನೂ ಓದಿ - ಕರೋನಾ ಕಠಿಣ ಲಾಕ್‍ಡೌನ್ ನಡುವೆ ಲಸಿಕೆ ಹಾಕಿಸಿಕೊಳ್ಳುವುದು ಹೇಗೆ..?


20 ದಿನಗಳಲ್ಲಿ 16 ಹಾಲಿ ಪ್ರಾಧ್ಯಾಪಕರು ಮತ್ತು 10 ನಿವೃತ್ತ ಪ್ರಾಧ್ಯಾಪಕರ ಮೃತ್ಯು:
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ 16 ಹಾಲಿ ಪ್ರಾಧ್ಯಾಪಕರು ಮತ್ತು 10 ನಿವೃತ್ತ ಪ್ರಾಧ್ಯಾಪಕರು  ಸೇರಿದಂತೆ 20 ದಿನಗಳಲ್ಲಿ ಒಟ್ಟು 26 ಪ್ರೊಫೆಸರ್ ಗಳು ಸಾವನ್ನಪ್ಪಿದ್ದಾರೆ. ವರದಿಯ ಪ್ರಕಾರ, ಎಎಂಯು ಉಪಕುಲಪತಿ ತಾರಿಕ್ ಮನ್ಸೂರ್ ಅವರ ಹಿರಿಯ ಸಹೋದರ ಕೂಡ ಕರೋನಾ ವೈರಸ್‌ನಿಂದ (Coronavirus) ಮೃತಪಟ್ಟಿದ್ದಾರೆ. ಈ ಜನರೆಲ್ಲರೂ ವಿಶ್ವವಿದ್ಯಾಲಯದ ಆವರಣದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.


ಇದನ್ನೂ ಓದಿ- ಕರೋನಾ ಸಮಯದಲ್ಲಿ ವಿದೇಶಗಳಿಂದ ಸಿಗುತ್ತಿರುವ ಸಹಾಯದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ಹೀಗಿತ್ತು..!


ಐಸಿಎಂಆರ್ ಅಥವಾ ಸರ್ಕಾರದ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ:
ವಿಶ್ವವಿದ್ಯಾನಿಲಯದ ವಿಸಿ ತಾರಿಕ್ ಮನ್ಸೂರ್ ಹೊಸ ರೂಪಾಂತರಕ್ಕೆ ಹೆದರಿ ಸಂಗ್ರಹಿಸಿದ ಮಾದರಿಗಳನ್ನು ತನಿಖೆಗೆ ದೆಹಲಿಯ ಸಿಎಸ್‌ಐಆರ್-ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿಗೆ ಕಳುಹಿಸಿದ್ದಾರೆ. ಕರೋನಾವೈರಸ್‌ನ ಹೊಸ ರೂಪಾಂತರದಿಂದಾಗಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಐಸಿಎಂಆರ್ ಅಥವಾ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.