Leaving Indian Citizenship: ಗುಜರಾತಿಗಳು ಭಾರತೀಯ ಪಾಸ್‌ಪೋರ್ಟ್ ತೊರೆಯುವ ಪ್ರವೃತ್ತಿ ಹೆಚ್ಚುತ್ತಿದೆ. 2021 ರಿಂದ ಇಲ್ಲಿಯವರೆಗೆ, 1187 ಗುಜರಾತಿಗಳು ಭಾರತೀಯ ಪೌರತ್ವವನ್ನು ತ್ಯಜಿಸಿ ಇತರ ದೇಶಗಳಲ್ಲಿ ನೆಲೆಸಿದ್ದಾರೆ. ಗುಜರಾತಿಗಳಿಗೆ ಕೆನಡಾ ಮೊದಲ ಆಯ್ಕೆಯಾಗುತ್ತಿದೆ ಎಂಬುದು ವರದಿಗಳಲ್ಲಿ ಬಹಿರಂಗವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಶ್ರೀಲಂಕಾ ಸರಣಿ ಆರಂಭಕ್ಕೂ ಮುನ್ನ ಟಿ20 ನಾಯಕತ್ವಕ್ಕೆ ವನಿಂದು ಹಸರಂಗ ರಾಜೀನಾಮೆ!


ಮಾಧ್ಯಮ ವರದಿಗಳ ಪ್ರಕಾರ ಗುಜರಾತ್ ಯುವಜನತೆ ಅಧ್ಯಯನಕ್ಕಾಗಿ ಕೆನಡಾಕ್ಕೆ ಹೋಗುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದ ನಂತರ ತಮ್ಮ ವೃತ್ತಿಯನ್ನು ಹೊಂದಿಸಿಕೊಳ್ಳುವಲ್ಲಿ ನಿರತರಾಗಿರುತ್ತಾರೆ. ಕೆನಡಾದ ಪೌರತ್ವ ಪಡೆದ ನಂತರ ಅವರು ಭಾರತೀಯ ಪೌರತ್ವವನ್ನು ತ್ಯಜಿಸಿ ಅಲ್ಲಿಯೇ ನೆಲೆಸುತ್ತಿದ್ದಾರೆ.


ಜನವರಿ 2021 ರಿಂದ 1187 ಗುಜರಾತಿಗಳು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ವರದಿಗಳು ಹೇಳಿವೆ. ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಮಾಹಿತಿಯ ಪ್ರಕಾರ, 2023 ರಲ್ಲಿ 485 ಪಾಸ್‌ಪೋರ್ಟ್‌ಗಳನ್ನು ಸರೆಂಡರ್ ಮಾಡಲಾಗಿದೆ, ಇದು 2022 ಕ್ಕಿಂತ ದ್ವಿಗುಣ. ಇವರಲ್ಲಿ ಹೆಚ್ಚಿನವರು 30 ರಿಂದ 45 ರ ವಯೋಮಾನದವರು. ಇವರೆಲ್ಲಾ ಅಮೆರಿಕ, ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ವಾಸಿಸುತ್ತಿದ್ದಾರೆ.


ಅಖಿಲ ಭಾರತ ಅಂಕಿಅಂಶಗಳನ್ನು ನೋಡುವುದಾದರೆ, 2014 ಮತ್ತು 2022ರ ನಡುವೆ 22,300 ಗುಜರಾತಿಗಳು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಈ ಸಂಖ್ಯೆ ದೆಹಲಿ (60,414) ಮತ್ತು ಪಂಜಾಬ್ (28,117) ನಂತರ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಕೋವಿಡ್ ನಂತರ ಪಾಸ್‌ಪೋರ್ಟ್ ಸರೆಂಡರ್’ನಲ್ಲಿ ಏರಿಕೆಯಾಗಿದೆ. ಇದಕ್ಕೆ ಒಂದು ಕಾರಣವೆಂದರೆ ರಾಯಭಾರ ಕಚೇರಿಗಳನ್ನು ಪುನರಾರಂಭಿಸುವುದು ಮತ್ತು ಪೌರತ್ವ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದು.


ವಿದೇಶಕ್ಕೆ ಹೋಗುವ ಹೆಚ್ಚಿನ ಯುವಕರು ಓದಲು ಹೋಗಿ ಅಲ್ಲಿಯೇ ನೆಲೆಸುತ್ತಿದ್ದಾರೆ. ಇದಲ್ಲದೇ, ಜನರು ಉತ್ತಮ ಜೀವನಕ್ಕಾಗಿ ವಿದೇಶಗಳಿಗೆ ಹೋಗುತ್ತಿದ್ದಾರೆ. ಉತ್ತಮ ಮೂಲಸೌಕರ್ಯ ಮತ್ತು ಜೀವನಶೈಲಿಗಾಗಿ ಉದ್ಯಮಿಗಳು ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಹೂಡಿಕೆದಾರರ ವೀಸಾ ಸಲಹೆಗಾರ ಲಲಿತ್ ಅಡ್ವಾಣಿ ಹೇಳುತ್ತಾರೆ. ಭಾರತದಲ್ಲಿ ಉತ್ತಮ ಜೀವನಮಟ್ಟ ಹೊಂದಿರುವವರು ಕೂಡ ಮಾಲಿನ್ಯ, ಹದಗೆಟ್ಟ ರಸ್ತೆಗಳಂತಹ ಸಮಸ್ಯೆಗಳಿಂದ ವಿದೇಶಕ್ಕೆ ಹೋಗುವ ಯೋಚನೆಯಲ್ಲಿದ್ದಾರೆ.


ಇದನ್ನೂ ಓದಿ: ಈ ಎಲೆಯನ್ನು ಜಗಿದು ರಸವನ್ನಷ್ಟೇ ಸೇವಿಸಿ! ಕಿಡ್ನಿ ಸ್ಟೋನ್ ಆಗಿದ್ದರೆ ಸುಲಭವಾಗಿ ಕರಗಿ ಹೋಗುತ್ತೆ


ಮುಂದಿನ ದಿನಗಳಲ್ಲಿ ಪಾಸ್‌ಪೋರ್ಟ್ ಸರೆಂಡರ್ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಸಂಬಂಧಪಟ್ಟ ಅಧಿಕಾರಿ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ