ಲೋಕಸಭಾ ಡೆಪ್ಯುಟಿ ಸ್ಪೀಕರ್ ಸ್ಥಾನ ಶಿವಸೇನೆಗೆ ನೀಡುವ ಸಾಧ್ಯತೆ
ಲೋಕಸಭೆಯ ಉಪಸಭಾಪತಿ ಸ್ಥಾನವನ್ನು ಎನ್‌ಡಿಎ ಮಿತ್ರ ಪಕ್ಷ ಶಿವಸೇನೆಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಲೋಕಸಭೆಯ ಉಪಸಭಾಪತಿ ಸ್ಥಾನವನ್ನು ಎನ್‌ಡಿಎ ಮಿತ್ರ ಪಕ್ಷ ಶಿವಸೇನೆಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
17 ನೇ ಲೋಕಸಭೆಯ ಮೊದಲ ಸಂಸತ್ ಅಧಿವೇಶನ ಜುಲೈ 26 ರವರೆಗೆ ಮುಂದುವರಿಯುತ್ತದೆ. ಈ ಅಧಿವೇಶನದಲ್ಲಿ ಲೋಕಸಭೆಗೆ ಹೊಸ ಉಪ ಸ್ಪೀಕರ್ ರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಈಗ ಈ ಹುದ್ದೆ ನೇಮಕ ವಿಚಾರವಾಗಿ ಹಲವು ಊಹಾಪೋಹ ನಡೆಯುತ್ತಿದೆ.
ಈ ಹಿಂದೆ ಶಿವಸೇನೆ ಪಕ್ಷದ ಸಂಜಯ್ ರೌತ್ ಅವರು ಲೋಕಸಭೆಯ ಉಪಸಭಾಪತಿ ತಮ್ಮ ಪಕ್ಷದಿಂದ ಇರಬೇಕು ಎಂದು ಹೇಳಿಕೊಂಡಿದ್ದರು. ಆದರೆ, ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಮತ್ತು ಬಿಜು ಜನತಾದಳ (ಬಿಜೆಡಿ) ಕೂಡ ಈ ಹುದ್ದೆಗೆ ಸ್ಪರ್ಧೆಯಲ್ಲಿದೆ ಎಂದು ವರದಿಗಳು ತಿಳಿಸಿವೆ.ಆದರೆ ಈಗ ಎಲ್ಲ ಊಹಾಪೋಹಗಳ ಮಧ್ಯೆ, ವೈಎಸ್‌ಆರ್‌ಸಿಪಿ ಮತ್ತು ಬಿಜೆಡಿಯ ನಾಯಕರು ತಾವು ಇನ್ನು ಮುಂದೆ ಡೆಪ್ಯೂಟಿ ಸ್ಪೀಕರ್ ಹುದ್ದೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ.
ಶಿವಸೇನೆ ತಮ್ಮ ನಾಯಕನನ್ನು ಈ ಹುದ್ದೆಗೆ ಆಯ್ಕೆ ಮಾಡುವಂತೆ ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಈಗಾಗಲೇ ಶಿವಸೇನೆ ಬಿಜೆಪಿಯೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಸದ್ಯ ಶಿವಸೇನೆ ಪ್ರಸ್ತುತ 18 ಸಂಸದರರನ್ನು ಹೊಂದಿದೆ.