`ಯಾವುದೇ ಕಾರಣಕ್ಕೂ ಜ.26 ರ ಟ್ರ್ಯಾಕ್ಟರ್ ರ್ಯಾಲಿ ಹಿಂತೆಗೆದುಕೊಳ್ಳುವುದಿಲ್ಲ`
ಪ್ರತಿಭಟನಾ ನಿರತ ರೈತರು ಇಂದು ತಮ್ಮ ಗಣರಾಜ್ಯೋತ್ಸವದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಲು ನಿರಾಕರಿಸಿದರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ತನಿಖೆ ಅವರ ದೊಡ್ಡ ಪ್ರತಿಭಟನೆಯನ್ನು ಮುರಿಯಲು ಉದ್ದೇಶಿಸಿದೆ ಎಂದು ಹೇಳಿದರು.
ನವದೆಹಲಿ: ಪ್ರತಿಭಟನಾ ನಿರತ ರೈತರು ಇಂದು ತಮ್ಮ ಗಣರಾಜ್ಯೋತ್ಸವದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಲು ನಿರಾಕರಿಸಿದರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ತನಿಖೆ ಅವರ ದೊಡ್ಡ ಪ್ರತಿಭಟನೆಯನ್ನು ಮುರಿಯಲು ಉದ್ದೇಶಿಸಿದೆ ಎಂದು ಹೇಳಿದರು.
ಇಂದು ಸಿಖ್ಸ್ ಫಾರ್ ಜಸ್ಟಿಸ್ ಎಂಬ ನಿಷೇಧಿತ ಸಂಘಟನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವಿಚಾರಣೆಗಾಗಿ ರೈತ ಮುಖಂಡ ಬಲದೇವ್ ಸಿಂಗ್ ಸಿರ್ಸಾ ಸೇರಿದಂತೆ 40 ಜನರನ್ನು ಎನ್ಐಎ ವಿಚಾರಣೆಗೆ ಕರೆಸಿದ ಬೆನ್ನಲ್ಲೇ ಸರ್ಕಾರವು ದೌರ್ಜನ್ಯಕ್ಕೆ ಮುಂದಾಗಿದೆ ಎಂದು ರೈತರು ಆರೋಪಿಸಿದರು.
ಇದನ್ನೂ ಓದಿ: ಕೇಂದ್ರ ಸರ್ಕಾರದ ಜೊತೆಗಿನ 9 ನೇ ಸಭೆ 120 ರಷ್ಟು ವಿಫಲ ಎಂದ ರೈತರು...!
ಚಳವಳಿಯಲ್ಲಿ ಸಹಕರಿಸುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರೈತ ಮುಖಂಡರೊಬ್ಬರು ಆರೋಪಿಸಿದ್ದಾರೆ.'ಎನ್ಐಎ ತೆಗೆದುಕೊಳ್ಳುತ್ತಿರುವ ಕ್ರಮವನ್ನು ನಾವು ಖಂಡಿಸುತ್ತೇವೆ, ನ್ಯಾಯಾಲಯದಲ್ಲಿ ಮಾತ್ರವಲ್ಲದೆ ನಾವು ಅದರ ವಿರುದ್ಧ ಕಾನೂನುಬದ್ಧವಾಗಿ ಹೋರಾಡುತ್ತೇವೆ. ಸರ್ಕಾರದ ವರ್ತನೆ ದಬ್ಬಾಳಿಕೆಯಾಗಿದೆ' ಎಂದು ಅವರು ಹೇಳಿದರು.
ಇದನ್ನೂ ಓದಿ: "ಜನವರಿ 26 ರ ಪಂಜಾಬ್ ರೈತರ ಕೇಸರಿ ಟ್ರ್ಯಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಡಿ"
ಶಿರೋಮಣಿ ಅಕಾಲಿ ದಳದ ಮುಖಂಡ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ರೈತರ (farmers) ನ್ನು ಬೆದರಿಸುವ ಪ್ರಯತ್ನ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.ಗಣರಾಜ್ಯೋತ್ಸವದಂದು ನಡೆಸುವ ರೈತರ ರ್ಯಾಲಿಯನ್ನು ಸರ್ಕಾರ ಸುಪ್ರೀಂ ಕೋರ್ಟ್(Supreme Court) ನಲ್ಲಿ ಪ್ರಶ್ನಿಸಿದೆ. ಇದು ರಾಷ್ಟ್ರಕ್ಕೆ ಮುಜುಗರದ ಸಂಗತಿ ಎಂದು ಹೇಳಿದೆ.
ರೈತರು ತಮ್ಮ ರ್ಯಾಲಿಯಲ್ಲಿ 1000 ಟ್ರಾಕ್ಟರುಗಳು ಭಾಗವಹಿಸಲಿವೆ, ಅದು ಶಾಂತಿಯುತವಾಗಿರುತ್ತದೆ ಮತ್ತು ರಾಜ್‌ಪಾತ್‌ನಲ್ಲಿ ದಿನದ ದೊಡ್ಡ ಮೆರವಣಿಗೆಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.