ನವದೆಹಲಿ: ಗೋರಖ್ಪುರ್ ಮತ್ತು ಫುಲ್ಪುರ್ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮೊದಲ ಬಾರಿಗೆ ಝೀ ನ್ಯೂಸ್ ಕಾಂಕ್ಲವೇ ಜೊತೆ ಮಾತನಾಡಿದ ಅಖಿಲೇಶ್ ಯಾದವ್ ತಮ್ಮ ಮತ್ತು ಬಹುಜನ ಪಕ್ಷದ ಮೈತ್ರಿಕೂಟವನ್ನು ಮುರಿಯಲು ಸಾದ್ಯವಿಲ್ಲ ಎಂದರು. 


COMMERCIAL BREAK
SCROLL TO CONTINUE READING

ಮಾಯಾವತಿಯೊಂದಿಗೆ ನಮ್ಮ ಮೈತ್ರಿಕೂಟವನ್ನು ಹೊಂದಲು ನಾವು ಮಂದಿರ, ಮಸೀದಿ ಮತ್ತು ಇತರ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತೇವೆ ಎಂದು ತಿಳಿಸಿದರು.ಇತ್ತೀಚಿಗೆ ಉತ್ತರಪ್ರದೇಶದ ಲೋಕಸಭಾ ಉಪಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದರ ಮೂಲಕ ಬಿಜೆಪಿಯ ಭದ್ರಕೋಟೆಯಾಗಿದ್ದ ಎರಡು ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷವು  ಭರ್ಜರಿ ಜಯ ಸಾಧಿಸಿತ್ತು. 


ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ವಿಫಲವಾದ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಯಾದವ್ ಹೇಳಿದರು.