ಚೆನ್ನೈ: ಸಂವಿಧಾನದ 370 ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ಇರುವ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವುದರಿಂದಾಗಿ ಭಯೋತ್ಪಾದನೆ ಕೊನೆಗೊಳ್ಳುವುದಲ್ಲದೆ ಮತ್ತು ಆ ಪ್ರದೇಶದ ಪ್ರಗತಿಗೆ ಕಾರಣವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಅಭಿಪ್ರಾಯಪಟ್ಟಿದ್ದಾರೆ.



COMMERCIAL BREAK
SCROLL TO CONTINUE READING

ತಮಿಳುನಾಡಿನ ಚೆನ್ನೈನಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನದ 370 ನೇ ವಿಧಿಯನ್ನು ತೆಗೆದುಹಾಕಬೇಕು ಎಂದು ಧೃಡವಾಗಿವಾಗಿ ನಂಬಿರುವುದಾಗಿ ಹೇಳಿದರಲ್ಲದೆ ಇದರಿಂದಾಗಿ ದೇಶಕ್ಕೆ ಉಪಯುಕ್ತವಿಲ್ಲ ಎಂದು ಹೇಳಿದರು."370ನೇ ವಿಧಿಯನ್ನು ತೆಗೆದುಹಾಕಬೇಕು ಎಂದು ನಾನು ಧೃಡವಾಗಿ ನಂಬಿದ್ದೆ ....370 ನೇ ವಿಧಿ (ತಿದ್ದುಪಡಿ) ನಂತರ, ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಗೊಳ್ಳುತ್ತದೆ ಮತ್ತು ಅದು ಅಭಿವೃದ್ಧಿಯ ಹಾದಿಯಲ್ಲಿ ಮುಂದುವರಿಯುತ್ತದೆ" ಎಂದು ಅವರು ಹೇಳಿದರು.



ಇದೇ ವೇಳೆ ರಾಜ್ಯಸಭಾ ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಹೊಗಳಿದ ಅಮಿತ್ ಶಾ ' ವೆಂಕಯ್ಯ ಜಿ ಯವರ ಜೀವನ ನಮ್ಮ ಯುವ ಪೀಳಿಗೆಗೆ ಪಾಠ ಇದ್ದ ಹಾಗೆ, ನಾವು ಹೇಗೆ ಆಲಿಸಬೇಕು, ಕಲಿಯಬೇಕು ಮತ್ತು ಸಮಾಜವನ್ನು ಮುನ್ನಡೆಸಬೇಕು ಎನ್ನುವುದನ್ನು ಅವರ ಜೀವನ ಹೇಳುತ್ತದೆ' ಎಂದು ಷಾ ಹೇಳಿದರು. ಇದೇ ವೇಳೆ 370 ನೇ ವಿಧಿ (ತಿದ್ದುಪಡಿ) ವಿಚಾರದಲ್ಲಿ ವೆಂಕಯ್ಯನಾಯ್ಡು ಅವರ ಸಹಕಾರವನ್ನು ಷಾ ಈ ಸಂದರ್ಭದಲ್ಲಿ ನೆನೆದರು. 


'ನನಗೆ ರಾಜ್ಯಸಭಾದಲ್ಲಿ ಏನಾಗುತ್ತೋ ಎನ್ನುವ ಹೆದರಿಕೆ ಇತ್ತು. ವೆಂಕಯ್ಯ ನಾಯ್ಡು ಅವರಿಂದಾಗಿ ಈ ಮಸೂದೆಗೆ ಎಲ್ಲರು ಬೆಂಬಲ ವ್ಯಕ್ತಪಡಿಸಿದರು ಎಂದು ಹೇಳಿದರು.