ನವದೆಹಲಿ: ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿವೆ ಎಂದು ಹಲವು ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.ಇಂದು ಮಹಾರಾಷ್ಟ್ರ, ಹರ್ಯಾಣ ರಾಜ್ಯಗಳ ಜೊತೆಗೆ 18 ರಾಜ್ಯಗಳಲ್ಲಿ 64 ಸ್ಥಾನಗಳಿಗಾಗಿ ಮತದಾನ ಶಾಂತಿಯುತವಾಗಿ ನಡೆಯಿತು.


COMMERCIAL BREAK
SCROLL TO CONTINUE READING

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇದು ಮೊದಲ ಅಗ್ನಿ ಪರೀಕ್ಷೆಯಾಗಿದ್ದು, ಈಗ ಸಮೀಕ್ಷೆಗಳ ಭವಿಷ್ಯದಂತೆ ಎರಡು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ.


ಮಹಾರಾಷ್ಟ್ರ:


ಟೈಮ್ಸ್ ನೌ ನಡೆಸಿದ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ 230 ಸ್ಥಾನಗಳು, ಕಾಂಗ್ರೆಸ್-ಎನ್‌ಸಿಪಿ 48 ಇತರರಿಗೆ 11 ಸ್ಥಾನಗಳು ಲಭಿಸಲಿವೆ ಎಂದು ಹೇಳಿದೆ.


ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ಬಿಜೆಪಿ-ಶಿವಸೇನಾಕ್ಕೆ 166 ರಿಂದ 194 ಸ್ಥಾನ, ಕಾಂಗ್ರೆಸ್-ಎನ್‌ಸಿಪಿಗೆ 72 ರಿಂದ 90 ಮತ್ತು ಇತರರಿಗೆ 22 ರಿಂದ 34 ಸ್ಥಾನಗಳಲ್ಲಿ ವಿಜಯಶಾಲಿಯಾಗಲಿದೆ ಎನ್ನಲಾಗಿದೆ.


ಸಿಎನ್‌ಎನ್-ಐಪಿಎಸ್ಒಎಸ್ ಬಿಜೆಪಿ-ಶಿವಸೇನೆಗೆ 243, ಕಾಂಗ್ರೆಸ್-ಎನ್‌ಸಿಪಿಗೆ 41 ಮತ್ತು ಇತರರಿಗೆ 4 ಎಂದು ತಿಳಿಸಿದೆ 


ಟಿವಿ 9 ಮರಾಠಿ-ಸಿಸೆರೊ ಸಮೀಕ್ಷೆಯು ಬಿಜೆಪಿ-ಶಿವಸೇನೆಗೆ 197, ಕಾಂಗ್ರೆಸ್-ಎನ್‌ಸಿಪಿಗೆ 75 ಮತ್ತು ಇತರರಿಗೆ 16 ಸ್ಥಾನ ನೀಡಿದೆ.


ಹರ್ಯಾಣ:


ಹರಿಯಾಣದಲ್ಲಿ ಟೈಮ್ಸ್ ನೌ ಸಮೀಕ್ಷೆಯು 90 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿಗೆ 71 ಮತ್ತು ಕಾಂಗ್ರೆಸ್ ಗೆ 11 ಎಂದು ಭವಿಷ್ಯ ನುಡಿದಿದೆ.


ರಿಪಬ್ಲಿಕ್ ಟಿವಿ-ಜನ್ ಕಿ ಬಾತ್ ಸಮೀಕ್ಷೆಯು ಬಿಜೆಪಿಗೆ 52-63 ಮತ್ತು ಕಾಂಗ್ರೆಸ್ 15-19 ಎಂದು ಹೇಳಿದೆ.


ಇಂಡಿಯಾ ನ್ಯೂಸ್-ಪೋಲ್‌ಸ್ಟ್ರಾಟ್ ಸಮೀಕ್ಷೆಯು ಬಿಜೆಪಿಗೆ 75 ರಿಂದ 80 ಮತ್ತು ಕಾಂಗ್ರೆಸ್ ಗೆ 9 ರಿಂದ 12 ಸ್ಥಾನ ಎನ್ನಲಾಗಿದೆ.


ಟಿವಿ 9-ಭರತ್ವರ್ಷ್ ಬಿಜೆಪಿಗೆ 47 ಮತ್ತು ಕಾಂಗ್ರೆಸ್ ಗೆ 23 ಸ್ಥಾನಗಳನ್ನು ನೀಡಿದೆ.


ಬಿಜೆಪಿ-ಶಿವಸೇನೆ ಮಹಾರಾಷ್ಟ್ರದಲ್ಲಿ 211, ಕಾಂಗ್ರೆಸ್ 64 ಮತ್ತು ಇತರರು 13 ಸ್ಥಾನಗಳನ್ನು ಪಡೆಯಲಿದ್ದಾರೆ ಎನ್ನಲಾಗಿದೆ.


ಅದೇ ರೀತಿ ಹರಿಯಾಣದಲ್ಲಿ ಬಿಜೆಪಿಗೆ 66, ಕಾಂಗ್ರೆಸ್ 14, ಐಎನ್‌ಎಲ್‌ಡಿ-ಅಕಾಲಿಸ್ 2 ಮತ್ತು ಇತರರಿಗೆ 8 ಸ್ಥಾನ ಸಿಗುತ್ತವೆ ಎಂದು ಸಮೀಕ್ಷೆ ತಿಳಿಸಿದೆ.