ನವದೆಹಲಿ: ಭಾರತೀಯ ಮೊಬೈಲ್ ತಯಾರಕ ಸಂಸ್ಥೆ ಲಾವಾ 'ಡಿಸೈನ್ ಇನ್ ಇಂಡಿಯಾ' ಯೋಜನೆ ಅಡಿಯಲ್ಲಿ ಹೊಸ ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ. ಈ ಫೋನಿನ ಬ್ಯಾಟರಿ ಬ್ಯಾಕಪ್ 17 ದಿನಗಳು ಎಂದು ಕಂಪನಿ ಹೇಳುತ್ತದೆ. ಲಾವಾ ಸಂಸ್ಥೆಯ  ಈ ಹೊಸ ಫೋನ್ ಹೆಸರು PRIME X ಆಗಿದೆ. ಇದು ಎರಡು ವರ್ಷ ಬದಲಿ ವಾರಂಟಿಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. 1499 ರೂ. ಬೆಲೆಯ ಈ ಫೋನ್ ಅಕ್ಟೋಬರ್ 2018ರ ಹೊತ್ತಿಗೆ ಗ್ರಾಹಕರ ಕೈಸೇರಲಿದೆ. ಆಕರ್ಷಕ ಬೆಲೆ ಮತ್ತು ಬ್ಯಾಟರಿ ಬ್ಯಾಕಪ್ ಕಾರಣದಿಂದಾಗಿ ಈ ಫೋನ್ ಗ್ರಾಹಕರನ್ನು ಆಕರ್ಷಿಸುತ್ತದೆ ಎಂದು ಸಂಸ್ಥೆ ಹೇಳಿದೆ.


COMMERCIAL BREAK
SCROLL TO CONTINUE READING

ಕಳೆದ ಆರು ವರ್ಷಗಳಲ್ಲಿ, ಲಾವಾ ಸಂಸ್ಥೆ ಮೊಬೈಲ್ ವಿನ್ಯಾಸದಲ್ಲಿ ಸಂಭಾವ್ಯ ಮತ್ತು ಪರಿಣತಿಯನ್ನು ಸಾಧಿಸಿದೆ. ಇದು 'ಡಿಸೈನ್ ಇನ್ ಇಂಡಿಯಾ' ಯೋಜನೆಯನ್ನು ಯಶಸ್ವಿಯಾಗಿಸಲು ಸಹಾಯ ಮಾದುತ್ತದೆ. 'ಪ್ರೈಮ್ ಎಕ್ಸ್' ತನ್ನ ವ್ಯಾಪ್ತಿಯಲ್ಲಿ ಎಲ್ಲಾ ಪ್ರತಿಸ್ಪರ್ಧಿಗಳನ್ನು ಸೋಲಿಸುತ್ತದೆ ಎಂದು ಲಾವಾ ಸಂಸ್ಥೆ ಹೇಳುತ್ತದೆ. ಲಾವಾ ಕೇವಲ ನಾಲ್ಕು ಹೊಸ ಝಡ್-ಸರಣಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ Z60, Z70, Z80 ಮತ್ತು Z90 ಗಳು ಸೇರಿವೆ.