ನವದೆಹಲಿ: ಶತಮಾನಗಳಷ್ಟು ಹಳೆಯದಾದ ಅಯೋಧ್ಯೆಯ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನ ಕೆಲವೇ ಗಂಟೆಗಳ ನಂತರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ನವ ಭಾರತದಲ್ಲಿ ಭಯ, ಕಹಿ ಮತ್ತು ನಕಾರಾತ್ಮಕತೆಗೆ ಸ್ಥಾನವಿಲ್ಲ ಎಂದು ಹೇಳಿದರು. 


COMMERCIAL BREAK
SCROLL TO CONTINUE READING

ಅಯೋಧ್ಯೆಯ ತೀರ್ಪು ಸರ್ವಾನುಮತದಿಂದ ಕೂಡಿರುವುದನ್ನು ಶ್ಲಾಘಿಸಿದ ಮೋದಿ, 'ಸುಪ್ರೀಂಕೋರ್ಟ್ ಎಲ್ಲಾ ಪಕ್ಷಗಳನ್ನೂ ಆಲಿಸಿದೆ ಮತ್ತು ಇದು ಸಂತೋಷದ ವಿಷಯವಾಗಿದೆ, ಏಕೆಂದರೆ ಇಂದಿನ ಸಂದೇಶವು ಒಟ್ಟಿಗೆ ಸೇರುವುದು ಮತ್ತು ಮುಂದೆ ಸಾಗಲು ಒಟ್ಟಾಗಿ ಬದುಕುವುದು' ಎಂದು ಹೇಳಿದರು. 'ಸಮಾಜದ ಪ್ರತಿಯೊಂದು ವರ್ಗದವರು ತೀರ್ಪನ್ನು ಸ್ವಾಗತಿಸಿದ ರೀತಿ ಭಾರತದ ಪ್ರಾಚೀನ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ. ವೈವಿಧ್ಯತೆಯಲ್ಲಿ ಏಕತೆಯ ಭಾರತದ ವಿಶ್ವಾಸಾರ್ಹತೆ ಇಂದು ಅದರ ಸಂಪೂರ್ಣತೆಯಲ್ಲಿ ಗೋಚರಿಸುತ್ತದೆ 'ಎಂದು ಅವರು ಹೇಳಿದರು.



ಸಮಾಜದ ಮತ್ತು ಧರ್ಮದ ಪ್ರತಿಯೊಂದು ವರ್ಗದವರು ಈ ತೀರ್ಪನ್ನು ಸ್ವಾಗತಿಸಿದ ರೀತಿ ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯದ ಸಂಪ್ರದಾಯಕ್ಕೆ ಪುರಾವೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.'ಸುಪ್ರೀಂಕೋರ್ಟ್ ತೀರ್ಪು ನವೋದಯವನ್ನು ತಂದಿದೆ, ಈಗ ಮುಂದಿನ ಪೀಳಿಗೆ ನವ ಭಾರತವನ್ನು ನಿರ್ಮಿಸುತ್ತದೆ. ಭಾರತದ ಅಭಿವೃದ್ಧಿಗೆ ನಮ್ಮ ಶಾಂತಿ, ಐಕ್ಯತೆ ಮತ್ತು ಸೌಹಾರ್ದತೆ ಅತ್ಯಗತ್ಯ ಎಂದರು.


ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾದ ಎಸ್‌ಎ ಬೊಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್  ಒಳಗೊಂಡ ನ್ಯಾಯಪೀಠ, ವಿವಾದಿತ 2.77 ಎಕರೆ ಭೂಮಿಯನ್ನು ರಾಮ್ ಲಲ್ಲಾ ಅಥವಾ ಶಿಶು ರಾಮ್‌ಗೆ ಹಸ್ತಾಂತರಿಸಲಾಗುವುದು ಎಂದು ತೀರ್ಪು ನೀಡಿತು. ಅಲ್ಲದೆ ಮುಸ್ಲೀಮರಿಗೆ ಪ್ರತ್ಯೇಕ 5 ಎಕರೆ ಭೂಮಿಯನ್ನು ಮಸೀದಿನಿರ್ಮಾಣಕ್ಕಾಗಿ ನೀಡಬೇಕು ಎಂದು ಸೂಚಿಸಿತು.