ಬಂದ್ ಆಗಲಿದೆ ಈ ಟೆಲಿಕಾಂ ಕಂಪನಿ, ನಿಮ್ಮ ಸಿಮ್ ಕೂಡಾ ರದ್ದಾಗಬಹುದು!
ಟೆಲಿಕಾಂ ಕಂಪನಿ ಏರ್ಸೆಲ್ ದಿವಾಳಿ ಸ್ಥಿತಿಯಲ್ಲಿದೆ. ಇದನ್ನು ಸ್ವತಃ ಕಂಪೆನಿಯೇ ತಿಳಿಸಿದೆ.
ನವದೆಹಲಿ: ಟೆಲಿಕಾಂ ಕಂಪನಿ ಏರ್ಸೆಲ್ ದಿವಾಳಿ ಸ್ಥಿತಿಯಲ್ಲಿದೆ. ಇದನ್ನು ಸ್ವತಃ ಕಂಪೆನಿಯೇ ತಿಳಿಸಿದೆ. ಈ ಸಂದರ್ಭದಲ್ಲಿ ಕಂಪನಿಯು ತನ್ನ ಎಲ್ಲಾ ಸರ್ಕ್ಯೂಟ್ಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಲಿದೆ. ಮಾಧ್ಯಮ ವರದಿಗಳ ಪ್ರಕಾರ ಕಂಪನಿಯು ದಿವಾಳಿತನಕ್ಕಾಗಿ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (NCLT)ನಲ್ಲಿ ಅರ್ಜಿ ಸಲ್ಲಿಸಿದೆ. ಕಂಪನಿಯು ಅರ್ಜಿ ಸಲ್ಲಿಸುವ ಮೊದಲೇ ತನ್ನ ಮಂಡಳಿಯನ್ನು ವಿಸರ್ಜನೆಗೊಳಿಸಿದೆ. ದಿವಾಳಿತನದ ಘೋಷಣೆಯಾದ ನಂತರ, ಏರ್ಸೆಲ್ ಕಂಪನಿ ಬಂದ್ ಆಗಲಿದೆ.
ಏರ್ಸೆಲ್ ಕಂಪನಿ ಮುಚ್ಚಿದ ನಂತರ ಮಾರುಕಟ್ಟೆಯಲ್ಲಿ ಏರ್ಟೆಲ್, ಜಿಯೋ, ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಮಾತ್ರ ಉಳಿಯುತ್ತದೆ. ಅದೇ ಸಮಯದಲ್ಲಿ, ಐಡಿಯಾ-ವೊಡಾಫೋನ್ ವಿಲೀನ ಪೂರ್ಣಗೊಂಡ ನಂತರ ಕೇವಲ ಮೂರು ಖಾಸಗಿ ಟೆಲಿಕಾಂ ಕಂಪನಿಗಳು ಮತ್ತು ಇದರ ಜೊತೆಗೆ ಎಂಟಿಎನ್ಎಲ್, ಬಿಎಸ್ಎನ್ಎಲ್ ಈ ಎರಡು ಸರ್ಕಾರಿ ಕಂಪನಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲಿವೆ.
ಕಳೆದ ಸೆಪ್ಟೆಂಬರ್ ನಿಂದ ಏರ್ಸೆಲ್ ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡಿಲ್ಲ. ಅದಕ್ಕಾಗಿಯೇ ಕಂಪನಿಯ ಸಾಲ ಪುನರ್ರಚನೆ ಸಾಧ್ಯವಿಲ್ಲ. ರಿಸರ್ವ್ ಬ್ಯಾಂಕಿನ ಸಾಲ ಪುನರ್ ರಚನೆ ಯೋಜನೆಗಳ ಮೇಲಿನ ನಿರ್ಬಂಧಗಳ ಕಾರಣ ಏರ್ಸೆಲ್ ಈ ನಿರ್ಧಾರವನ್ನು ಮಾಡಬೇಕಾಯಿತು.
ತಿಂಗಳಿಗೆ 400 ಕೋಟಿ ರೂ.
ಏರ್ಸೆಲ್ ತಿಂಗಳಿಗೆ 400 ಕೋಟಿ ರೂ. ಸಂಪಾದಿಸುತ್ತಿದೆ. ಅದರಲ್ಲಿ ಸುಮಾರು 100 ಕೋಟಿ ರುಪಾಯಿಗಳನ್ನು ಇತರ ಟೆಲಿಕಾಂ ಕಂಪೆನಿಗಳು ಮುಕ್ತಾಯದ ಶುಲ್ಕವಾಗಿ ಪಾವತಿಸಬೇಕಾಗಿದೆ. ಅದೇ ಸಮಯದಲ್ಲಿ, ಮಾರಾಟಗಾರರು ಮತ್ತು ನೆಟ್ವರ್ಕ್ ಅಪ್ಟೈಮ್ಗಳಿಗೆ 280 ಕೋಟಿ ರೂ. ಉಳಿದ ಹಣವು ಪರವಾನಗಿ ಶುಲ್ಕ, ತೆರಿಗೆ ಮತ್ತು ಬಡ್ಡಿ ಪಾವತಿಗಳಿಗೆ ಹೋಗುತ್ತದೆ. ಐಡಿಯಾಗೆ ಮೂರು ತಿಂಗಳ ಕಾಲ ಏರ್ಸೆಲ್ 60 ಕೋಟಿ ರೂ. ಅಂತರಸಂಪರ್ಕ ಶುಲ್ಕವನ್ನು ಪಾವತಿಸಲಿಲ್ಲ, ಆದ್ದರಿಂದ ಅವರು ಈ ಸೇವೆ ಒದಗಿಸುತ್ತಿಲ್ಲ.
ಸಂಕಷ್ಟದಲ್ಲಿ 5000 ಉದ್ಯೋಗಿಗಳು
ಏರ್ಸೆಲ್ ಕಂಪನಿ ಬಂದ್ ಆಗುವುದರಿಂದ ಕಂಪನಿಯ 5000 ನೌಕರರು ಇದರ ಪರಿಣಾಮ ಎದುರಿಸುತ್ತಾರೆ. ನೌಕರರು ಮಾತ್ರವಲ್ಲದೆ ಮಾರಾಟಗಾರರು ಸಂಕಷ್ಟದಲ್ಲಿದ್ದಾರೆ.