ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಹಿನ್ನಲೆಯಲ್ಲಿ ಇತರ ರಾಷ್ಟ್ರಗಳಿಗೆ ಅದನ್ನು ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ಬುಧವಾರ ನಿಷೇಧಿಸಿದೆ.


COMMERCIAL BREAK
SCROLL TO CONTINUE READING

'ಆಲ್ಕೊಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳನ್ನು ರಫ್ತು ಮಾಡಲು ನಿಷೇಧಿಸಲಾಗಿದೆ" ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.ಸಾಂಕ್ರಾಮಿಕ ಕೋವಿಡ್ -19 ರೋಗದ ಮಧ್ಯೆ ದೇಶೀಯ ಮಾರುಕಟ್ಟೆಯಲ್ಲಿ ಹ್ಯಾಂಡ್ ಸ್ಯಾನಿಟೈಸರ್ಗಳ ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರದ ಈ ಕ್ರಮವಾಗಿದೆ.


ಮಾರಕ ಸೋಂಕಿನ ವಿರುದ್ಧದ ಹೋರಾಟದಲ್ಲಿ ಸ್ಯಾನಿಟೈಸರ್ಗಳು ಅತ್ಯಗತ್ಯ ಅಂಶವಾಗಿದೆ ಮತ್ತು ಕರೋನವೈರಸ್ ಹರಡುವುದನ್ನು ತಡೆಗಟ್ಟಲು ಸೋಂಕುನಿವಾರಕವಾಗಿ ಬಳಸಲಾಗುತ್ತದೆ.ಕರೋನವೈರಸ್  ಮಾರ್ಚ್ನಲ್ಲಿ ಹರಡಲು ಪ್ರಾರಂಭಿಸಿದ ಕಾರಣ ದೇಶಾದ್ಯಂತ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಾರಾಟವಾದ ಮೊದಲ ಉತ್ಪನ್ನಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಕೂಡ ಒಂದು, ವಿಸ್ತೃತ ಲಾಕ್‌ಡೌನ್ ಹಿನ್ನಲೆಯಲ್ಲಿ ಈಗ ಪ್ರತಿಷ್ಠಿತ ಕಂಪನಿಗಳ ಸ್ಯಾನಿಟೈಸರ್‌ಗಳು ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ .


ಹೆಚ್ಚಿನ ಆಲ್ಕೊಹಾಲ್ ಅಂಶದಿಂದಾಗಿ ಜನರು ಸ್ಯಾನಿಟೈಸರ್ ಕುಡಿಯುವ ಬಗ್ಗೆ ಅನೇಕ ವರದಿಗಳು ದೇಶಾದ್ಯಂತ ವರದಿಯಾಗಿವೆ.ಕಳೆದ ತಿಂಗಳು,ಧಾರವಾಡ ಜಿಲ್ಲೆಯ ಹೊಯ್ಸಳ ನಗರದಲ್ಲಿ 29 ವರ್ಷದ ಸಂಶೋಧನಾ ವಿದ್ಯಾರ್ಥಿ ಮದ್ಯ ಪಡೆಯಲು ಸಾಧ್ಯವಾಗದ ಕಾರಣ ಸ್ಯಾನಿಟೈಸರ್ ಮತ್ತು ಸಿರಪ್ ಮಿಶ್ರಣವನ್ನು ಸೇವಿಸಿ ಸಾವನ್ನಪ್ಪಿದ್ದಾನೆ.


ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಅಧಿಕಾರಿಗಳು ಸ್ಯಾನಿಟೈಸರ್ ಅಥವಾ ಸಿರಪ್ ಸೇವಿಸಬೇಡಿ ಎಂದು ಜನರಿಗೆ ಪದೇ ಪದೇ ಮನವಿ ಮಾಡಿದ್ದಾರೆ. ಆದರೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಮದ್ಯ ಸಿಗದ ಕಾರಣ, ಹಲವಾರು ಜನರು ಎಲ್ಲಾ ರೀತಿಯ ವಸ್ತುಗಳನ್ನು ಸೇವಿಸಲು ಮುಂದಾಗಿದ್ದರು..