ನವದೆಹಲಿ: ರಾಯಲ್ ಎನ್ಫಿಲ್ದ್ ಕಂಪನಿಯ ಮುಂದಿನ ಬೈಕ್ ಹೆಸರು  Meteor 350 Fireball ಇರುವ ಸಾಧ್ಯತೆ ಇದೆ. ಈ ಬೈಕ್ ನ ಕೆಲ ಫೋಟೋಗಳು automobili.infinitiಯ ಇನ್ಸ್ಟಾಗ್ರಾಮ್ ಪುಟದಲ್ಲಿ ಬಹಿರಂಗಗೊಂಡಿವೆ  Meteor 350 Fireball ಬೈಕ್ ಕಂಪನಿ ಈ ಮೊದಲು ಬಿಡುಗಡೆಗೊಳಿಸಿರುವ Thunderbird 350 ಬೈಕ್ ಅನ್ನು ರಿಪ್ಲೇಸ್ ಮಾಡುವ ಸಾಧ್ಯತೆ ಇದೆ ಎಂದು ವರ್ತಿಸಲಾಗುತ್ತಿದೆ. ಸದ್ಯ ಬಿಡುಗಡೆಗೊಂಡಿರುವ ಈ ಫೋಟೋಗಳ ಆಧಾರದ ಮೇಲೆ ಈ ಬೈಕ್ ನ ಮೌಲ್ಯವನ್ನು ಸಹ ಅಂದಾಜಿಸಬಹುದಾಗಿದೆ.



COMMERCIAL BREAK
SCROLL TO CONTINUE READING

automobili.infinitiಗೆ ಪ್ರಕಟಿಸಿರುವ ಈ ಭಾವಚಿತ್ರಗಳು ರಾಯಲ್ ಎನ್ಫಿಲ್ದ್ ನ ಅಧಿಕೃತ ಕಾನ್ಫಿಗರೆಶನ್ ಸೆಕ್ಷನ್ ನಲ್ಲಿ ಸಿಕ್ಕ ಬೈಕ್ ನ ಸ್ಕ್ರೀನ್ ಶಾಟ್ ಗಳಾಗಿವೆ. ಇವುಗಳಲ್ಲಿನ ಒಂದು ಫೋಟೋ Royal Enfield Meteor 350 Fireball 1,68,550 ರೂ. ಎಕ್ಸ್-ಷೋರೂಮ್ ಪ್ರೈಸ್ ನೊಂದಿಗೆ ಪ್ರಕಟಿಸಲಾಗಿದೆ. ಈ ಬೆಲೆಯಲ್ಲಿ ಕೆಲ ಎಕ್ಸಸರಿಗಳ ಬೆಲೆ ಶಾಮೀಲಾಗುವ ಸಾಧ್ಯತೆ ಇದೆ. ಉದಾಹರಣೆಗಾಗಿ ಟಿಂಟೆಡ್ ಫ್ಲೈಸ್ಕ್ರೀನ್-ಇದನ್ನು ಬೈಕ್ ಜೊತೆಗೆ ತೋರಿಸಲಾಗಿದ್ದು, ಇದರ ಬೆಲೆ 1750 ರೂ. ಇದೆ.