ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ
ಸಂಸತ್ತಿನ ಚಳಿಗಾಲದ ಅಧಿವೇಶನವು ಇಂದಿನಿಂದ ಪ್ರಾರಂಭವಾಗಲಿದೆ.ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯ ಮೇಲೆ ಕೇಂದ್ರೀಕರಿಸಿ ಈ ಅಧಿವೇಶವು ನಡೆಯಲಿದೆ.
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವು ಇಂದಿನಿಂದ ಪ್ರಾರಂಭವಾಗಲಿದೆ.ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯ ಮೇಲೆ ಕೇಂದ್ರೀಕರಿಸಿ ಈ ಅಧಿವೇಶವು ನಡೆಯಲಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು 2021 ರ ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಲೋಕಸಭೆಯಲ್ಲಿ ಅಧಿವೇಶನದ ವೇಳೆ ಮಂಡಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Big Verdict:ಅನುಕಂಪದ ಆಧಾರದ ಮೇಲಿನ ನೇಮಕಾತಿಯ ಕುರಿತು ಸುಪ್ರೀಂ ಮಹತ್ವದ ತೀರ್ಪು
ಮೂರು ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದ್ದರೂ ಸಹ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನಿಗೆ ರೈತರ ಬೇಡಿಕೆಯ ವಿಚಾರವಾಗಿ ಸಂಸತ್ತಿನ ಅಧಿವೇಶನ ಬಿರುಸಿನ ಕಲಾಪವಾಗಲಿದೆ ಎಂದು ನಿರೀಕ್ಷಿಸಲಾಗಿದೆ.ವಿರೋಧ ಪಕ್ಷಗಳು ಈಗಾಗಲೇ ರೈತರ ಬೇಡಿಕೆಗೆ ಒಲವು ತೋರಿದ್ದು, ಈ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಲಿವೆ.
ಇದನ್ನೂ ಓದಿ-LPG Price Hike: ಹಬ್ಬದ ಮೊದಲು ಹಣದುಬ್ಬರದ ಹೊಡೆತ! ಮತ್ತೆ LPG ಸಿಲಿಂಡರ್ ಬೆಲೆ ಏರಿಕೆ
ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ತಮ್ಮ ಸಂಸದರಿಗೆ ಅಧಿವೇಶನದ ದಿನದಂದು ಹಾಜರಾಗುವಂತೆ ಈಗಾಗಲೇ ವಿಪ್ ಜಾರಿಗೊಳಿಸಿವೆ.ಏತನ್ಮಧ್ಯೆ,ಸಂಸತ್ತಿನ ಅಧಿವೇಶನದ ಮುನ್ನಾದಿನದಂದು ನಡೆದ ಸರ್ವಪಕ್ಷ ಸಭೆಯಲ್ಲಿ 31 ಪಕ್ಷಗಳ 42 ಸಂಸದರು ಭಾಗವಹಿಸಿದ್ದರು.
ತಿಂಗಳ ಅವಧಿಯ ಅಧಿವೇಶನದಲ್ಲಿ 26 ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲು ಪಟ್ಟಿ ಮಾಡಲಾಗಿದೆ.ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 29 ರಿಂದ ಡಿಸೆಂಬರ್ 23 ರ ನಡುವೆ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.