ನವದೆಹಲಿ: ದೇಶದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಎಸಗಿ ಪಲಾಯನಗೈದವರಲ್ಲಿ ಕೇವಲ ನಿಮಗೆ ನಿರವ್ ಮೋದಿ, ಮೆಹುಲ್ ಚೌಕ್ಸಿ ಹಾಗೂ ವಿಜಯ್ ಮಲ್ಯ ಈ ಮೂವರ ಹೆಸರು ಮಾತ್ರ ಗೊತ್ತಿರಬಹುದು. ಆದರೆ, ಈ ಮೂವರೇ ಅಲ್ಲ ಇನ್ನೂ ಹಲವರು ಈ ರೀತಿಯ ವಂಚನೆ ಎಸಗಿ ಪಲಾಯನಗೈದಿದ್ದಾರೆ ಎಂದರೆ ನೀವು ಕೂಡ ನಿಬ್ಬೇರಗಾಗುವಿರಿ. ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ಇಲಾಖೆ, ಹಣಕಾಸಿಗೆ ಸಂಬಂಧಿಸಿದಂತೆ ಅಪರಾಧಗಳನ್ನು ಎಸಗಿ ಪರಾರಿಯಾದವರ ಸಂಖ್ಯೆ 70ಕ್ಕೂ ಅಧಿಕವಾಗಿದೆ ಎಂದು ಮಾಹಿತಿ ನೀಡಿದೆ. ಇವರ ಮೇಲೆ ಗಂಭೀರ ಅಪರಾಧ ಎಸಗಿರುವ ಆರೋಪಗಳಿವೆ. ಆದರೆ, ಇದುವರೆಗೆ ಸರ್ಕಾರ ಇವರನ್ನು ವಾಪಸ್ ಕರೆಯಿಸಿಕೊಳ್ಳುವಲ್ಲಿ ವಿಫಲವಾಗಿದೆ.


COMMERCIAL BREAK
SCROLL TO CONTINUE READING

70 ಅಪರಾಧಿಗಳ ಹುಡುಕಾಟದಲ್ಲಿದೆ ಭಾರತ
ವಿವಿಧ ರೀತಿಯ ಅಪರಾಧಗಳನ್ನು ಎಸಗಿ ಇದುವರೆಗೆ ಯಾರಿಗೂ ಹೇಳದೆ ಸುಮಾರು 70 ಜನರು ಈ ದೇಶವನ್ನು ಬಿಟ್ಟು ಪರಾರಿಯಾಗಿದ್ದಾರೆ. ವಿಜಯ್ ಮಲ್ಯ ಹಾಗೂ ನಿರವ್ ಮೋದಿಯಂತಹ ಹೈ ಪ್ರೊಫೈಲ್ ಪ್ರಕರಣಗಳಲ್ಲಿ ಶೀಘ್ರ ವಿಚಾರಣೆ ನಡೆಯುತ್ತಿದೆ. ಆದರೆ, ದೇಶದ ವಿದೇಶಾಂಗ ಇಲಾಖೆ ಇಂತಹ ಸುಮಾರು 70 ಜನರು ದೇಶದಲ್ಲಿ ವಿವಿಧ ರೀತಿಯ ಆರ್ಥಿಕ ಅಪರಾಧಗಳನ್ನು ಎಸಗಿ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದಿದೆ. ಈ ಕುರಿತು ಲೋಕಸಭೆಯಲ್ಲಿ ವಿದೇಶಾಂಗ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಸರ್ಕಾರ ಈ ಆರೋಪಿಗಳ ಪತ್ತೆ ನಡೆಸುತ್ತಿದೆ ಎಂದು ಹೇಳಲಾಗಿದೆ.


ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ವಿದೇಶಾಂಗ ಇಲಾಖೆ ಈ 70 ಆರೋಪಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್, ಹಸ್ತಾಂತರದ ಮನವಿ ಹಾಗೂ ಲುಕ್ ಔಟ್ ನೋಟೀಸ್ ಗಳನ್ನೂ ಕೂಡ ಜಾರಿಗೊಳಿಸಲಾಗಿದೆ. ಅಷ್ಟೇ ಅಲ್ಲ ಹಲವು ಮಹತ್ವಪೂರ್ಣ ಪ್ರಕರಣಗಳಲ್ಲಿ ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ 2018ರ ಅಡಿ ಕ್ರಮ ಕೂಡ ಕೈಗೊಳ್ಳಲಾಗಿದೆ ಎಂದು ಹೇಳಿದೆ.


ಇತ್ತೀಚೆಗಷ್ಟೇ ಪರಾರಿಯಾದ ಮದ್ಯ ದೊರೆ ವಿಜಯ್ ಮಲ್ಯ ಅವರ ಒಡೆತನದ ಕಿಂಗ್ ಫಿಷರ್ ಹೌಸ್ ಅನ್ನು ಮೂರು ವರ್ಷಗಳಲ್ಲಿ ಎಂಟನೆ ಬಾರಿಗೆ ಹರಾಜಿಗೆ ಇಡಲಾಗಿದೆ. ಸದ್ಯ ಈ ಕಿಂಗ್ ಫಿಷರ್ ಹೊಸ ಕಿಂಗ್ ಫಿಷರ್ ಏರ್ಲೈನ್ಸ್ ನ ಮುಖ್ಯಕಚೇರಿಯಾಗಿದೆ. ಇದರ ಜಪ್ತಿಗಾಗಿ ನಿಯೋಜಿಸಲಾಗಿದ್ದ ಸಾಲ ವಸೂಲಿ ಪ್ರಾಧಿಕಾರ(DRT), ಆನ್ಲೈನ್ ನಲ್ಲಿ ಬಹಿರಂಗ ಹರಾಜಿಗಾಗಿ ನವೆಂಬರ್ 27ರಂದು ಹೊಸ ದಿನಾಂಕ ಘೋಷಣೆ ಮಾಡಿದೆ. ಈ ಆಸ್ತಿಯ ಮೊದಲ ಹಾರಾಜು ಪ್ರಕ್ರಿಯೆಯ ವೇಳೆ 135 ಕೋಟಿ ರೂ. ಮೀಸಲು ಬೆಲೆಯ ಮೇಲೆ ಹರಾಜು ಪ್ರಕ್ರಿಯೆ ಆರಂಭಗೊಂಡಿತ್ತು. 2016 ರಲ್ಲಿ ಈ ಮೌಲ್ಯ 150 ಕೋಟಿ ರೂ.ಗೆ ವೃದ್ಧಿಯಾಗಿದೆ. 8ನೇ ಬಾರಿಯ ಹರಾಜು ಪ್ರಕ್ರಿಯೆಯ ವೇಳೆ ಈ ಮೌಲ್ಯದಲ್ಲಿ ಶೇ.60 ರಷ್ಟು ಇಳಿಕೆಯಾಗಿ ಆಸ್ತಿಯ ಮೀಸಲು ಬೆಲೆ 54 ಕೋಟಿ ರೂ.ಗಳಿಗೆ ಬಂದು ತಲುಪಿದೆ.