ಪೌರತ್ವ ಕಾಯ್ದೆ ಅಗತ್ಯವಿಲ್ಲ, ಉದ್ಯೋಗ ಸೃಷ್ಟಿ ಮೇಲೆ ಗಮನ ಹರಿಸಿ- ಕೇಜ್ರಿವಾಲ್ ತಾಕೀತು
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೊಸ ಪೌರತ್ವ ಕಾನೂನು ಮತ್ತು ಪ್ರತಿಭಟನೆಗಳ ಹೊರತಾಗಿಯೂ ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೊಸ ಪೌರತ್ವ ಕಾನೂನು ಮತ್ತು ಪ್ರತಿಭಟನೆಗಳ ಹೊರತಾಗಿಯೂ ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ದೆಹಲಿ ನಾಗರಿಕರೊಂದಿಗೆ ಟೌನ್‌ಹಾಲ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಕೇಜ್ರಿವಾಲ್ "ಇದೇನಿದು ? ಪಾಕ್ ಹಿಂದೂಗಳ ಬಗ್ಗೆ ತುಂಬಾ ಪ್ರೀತಿ ಮತ್ತು ಭಾರತೀಯ ಹಿಂದೂಗಳ ಬಗ್ಗೆ ಏನು? ನನಗೆ ಇದು ಅರ್ಥವಾಗುತ್ತಿಲ್ಲ ಆರ್ಥಿಕತೆಯು ಕುಸಿದಿದೆ, ಉದ್ಯೋಗಗಳಿಲ್ಲ. ಈ ಕಾನೂನಿನ ಅವಶ್ಯಕತೆಯಾದರೂ ಏನು" ಎಂದು ಪ್ರಶ್ನಿಸಿದರು.
"ನನಗೆ ಈ ಕಾನೂನು ಅರ್ಥವಾಗುತ್ತಿಲ್ಲ, ನಾನು ಬುರಾರಿಯಲ್ಲಿ ಬಿಹಾರ ಅಥವಾ ಉತ್ತರ ಪ್ರದೇಶದಿಂದ ದೆಹಲಿಗೆ ಬಂದವರನ್ನು ತಮ್ಮ ಜನನ ಪ್ರಮಾಣಪತ್ರವಿದೆಯೇ ಎಂದು ನಾನು ಕೇಳಿದೆ. ಅದಕ್ಕೆ ಅವರು ಮನೆಯಲ್ಲಿ ಜನಿಸಿದ್ದು ಮತ್ತು ಆ ಕಾಲದಲ್ಲಿ ಅವೆಲ್ಲಾ ಇರಲಿಲ್ಲ ಎಂದು ಹೇಳಿದರು. ಅವರ ಹೆತ್ತವರಿಗೆ ಜನನ ಪ್ರಮಾಣ ಪತ್ರವೂ ಇಲ್ಲ. ಹಾಗಾಗಿ ನಾನು ಅವರಿಗೆ 'ಅಬ್ ಕ್ಯಾ ಕರೋಗೆ, ನೀವು ದೇಶವನ್ನು ತೊರೆಯಬೇಕಾಗುತ್ತದೆ' ಎಂದು ಹೇಳಿದೆ ಎಂದು ಅವರು ತಿಳಿಸಿದರು.