ನವದೆಹಲಿ: ಬೌದ್ದ ಸಂಪ್ರದಾಯದಲ್ಲಿ ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕು ಇದೆ. ಆದ್ದರಿಂದ ಭವಿಷ್ಯದಲ್ಲಿ ಮಹಿಳಾ ದಲೈಲಾಮಾ ಬಂದರು ಬರಬಹುದು ಎಂದು ಟಿಬೆಟಿಯನ್ ಬೌದ್ದ ಗುರು ದಲೈಲಾಮಾ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಐಐಟಿ-ಬಾಂಬೆಯಲ್ಲಿಯಲ್ಲಿ ಈ ಕುರಿತಾಗಿ ಮಾತನಾಡಿದ ಅವರು "ಸುಮಾರು 15 ವರ್ಷಗಳ ಹಿಂದೆ ಮಹಿಳೆಯರಿಗೆ ಸಂಬಂಧಿಸಿದ ಫ್ರೆಂಚ್ ನಿಯತಕಾಲಿಕೆಯ ಸಂಪಾದಕ ನನಗೆ ಸಂದರ್ಶಿಸಿದ್ದು, ಭವಿಷ್ಯದಲ್ಲಿ ಮಹಿಳಾ ದಲೈ ಲಾಮಾ ಬರಬಹುದೇ ಎಂದು ಅವರು ನನ್ನನ್ನು ಕೇಳಿದ್ದರು, ಅದಕ್ಕೆ ನಾನು ಹೌದು ಎಂದೆ.. ಭವಿಷ್ಯದಲ್ಲಿ ಮಹಿಳಾ ಪ್ರಾತಿನಿಧಿತ್ಯವನ್ನು ಒಳಗೊಂಡ ಸಂಸ್ಥೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ "ಎಂದು ದಲೈ ಲಾಮಾ ಹೇಳಿದ್ದಾರೆ.ದಲೈಲಾಮಾ, ಅವರ ನಿಜವಾದ ಹೆಸರು ಟೆನ್ಜಿನ್ ಗ್ಯಾಟ್ಸೊ 1989 ರಲ್ಲಿ  ಟಿಬೆಟ್ ಹಾಗೂ ಇತರ ಮಾನವ ಹಕ್ಕುಗಳ ಹೋರಾಟಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.


ಶಿಶುವಿಹಾರದಿಂದ ಶಿಕ್ಷಣವು ಭಾವನಾತ್ಮಕ ನೈರ್ಮಲ್ಯದ ಪ್ರಾಮುಖ್ಯತೆಗೆ ಒತ್ತುನೀಡಬೇಕು ದೈಹಿಕ ಆರೋಗ್ಯಕ್ಕಾಗಿ ಮನಸ್ಸು ಶಾಂತಿಯಿಂದ ಇರಬೇಕು. ಭಾರತದಲ್ಲಿ, ಮನಸ್ಸು ಮತ್ತು ಭಾವನೆಗಳ ಬಗೆಗಿನ ಜ್ಞಾನವು 3,000 ವರ್ಷಕ್ಕಿಂತ ಹೆಚ್ಚು ಹಳೆಯದಾಗಿದೆ.ಇಲ್ಲಿನ ಮೂರು ಸಾವಿರ ವರ್ಷಗಳಿಗೂ ಅಧಿಕ ಪುರಾತನವಾಗಿರುವ ಹಲವು ರೀತಿಯ ಪರಿಕಲ್ಪನೆಗಳು ಶಾಂತಿಯನ್ನು ಉಂಟು ಮಾಡುತ್ತವೆ ಎಂದರು 


ಸಂತಸವೆನ್ನುವುದು ಶಾಂತಿಗೆ ಸಂಬಂಧಿಸಿದ ಸಂಗತಿ. 20ನೇ ಶತಮಾನವು ಹಿಂಸೆಯಿಂದ ಕೂಡಿತ್ತು ಆದರೆ ಇದು 21ನೇ ಶತಮಾನದಲ್ಲಿಯೂ ಅದು ಪುನರಾವರ್ತನೆಯಾಗಬಾರದು ಎಂದು ಅವರು ತಿಳಿಸಿದರು.